ಕುಂದಾನಗರಿಯ ಮಟ್ಕಾ ಕಿಂಗ್‌ಪಿನ್ ಕೊನೆಗೂ ಅಂದರ್
ಬೆಳಗಾವಿ: ನಗರದ ಮಟ್ಕಾ ಕಿಂಗ್‌ಪಿನ್ ಎಂದೇ ಫೇಮಸ್ ಆಗಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂದಾನಗರಿಯ ಖಾಕಿ ಪಡೆ ಮಟ್ಕಾ ಕಿಂಗ್‌ಪಿನ್ ಮಹ್ಮದ್ ಶಫಿ ತಹಶೀಲ್ದಾರ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ DCP ವಿಕ್ರಮ್ ಆಮಟೆ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಮಹ್ಮದ್ ಶಫಿ ತಹಶೀಲ್ದಾರ್ ನಗರದ ಖಂಜರ್ ಗಲ್ಲಿ ನಿವಾಸಿ ಎಂದು ತಿಳಿದುಬಂದಿದೆ. ಬಂಧಿತನಿಂದ 2,11,910 ರೂಪಾಯಿ ಹಣ ಜಪ್ತಿ ಮಾಡಲಾಗಿದೆ. ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 22 ಜನರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, […]

ಬೆಳಗಾವಿ: ನಗರದ ಮಟ್ಕಾ ಕಿಂಗ್‌ಪಿನ್ ಎಂದೇ ಫೇಮಸ್ ಆಗಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂದಾನಗರಿಯ ಖಾಕಿ ಪಡೆ ಮಟ್ಕಾ ಕಿಂಗ್‌ಪಿನ್ ಮಹ್ಮದ್ ಶಫಿ ತಹಶೀಲ್ದಾರ್ನ ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ DCP ವಿಕ್ರಮ್ ಆಮಟೆ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಮಹ್ಮದ್ ಶಫಿ ತಹಶೀಲ್ದಾರ್ ನಗರದ ಖಂಜರ್ ಗಲ್ಲಿ ನಿವಾಸಿ ಎಂದು ತಿಳಿದುಬಂದಿದೆ. ಬಂಧಿತನಿಂದ 2,11,910 ರೂಪಾಯಿ ಹಣ ಜಪ್ತಿ ಮಾಡಲಾಗಿದೆ.
ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 22 ಜನರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, 15 ಮೊಬೈಲ್ ಫೋನ್‌ಗಳನ್ನು ಸಹ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Published On - 2:10 pm, Wed, 23 September 20



