ಹಸಿರ ಸಿರಿಯಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕೋ ಚಿಕಲೆ, ನಿಸರ್ಗ ಸವಿಯೋಕೆ ಇದಕಿಂತ ಒಳ್ಳೆ ತಾಣ ಬೇಕೆ..
ಬೆಳಗಾವಿ: ಸುತ್ತಲೂ ನಿಸರ್ಗದ ಮಡಿಲು. ಕಣ್ಣುಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕೋ ನೀರಿನ ಝರಿ. ಅದು ಕುಂದಾನಗರಿ ಬೆಳಗಾವಿಯ ಚಿಕಲೆ ಚೆಲುವೆಯ ಸೌಂದರ್ಯ ರಾಶಿ. ಹಸಿರ ಸಿರಿಯ ನಡುವೆ ದಟ್ಟವಾದ ಮಂಜು. ದಟ್ಟವಾದ ಮಂಜಿನ ನಡುವೆ ತುಂತುರು ಮಳೆ. ಸಹ್ಯಾದ್ರಿ ಬೆಟ್ಟದ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ಜಲರಾಶಿ. ಪ್ರಕೃತಿ ಮಾತೆಯ ಚೆಲುವನ್ನು ಸವಿಯಲು ಬಂದಿರೋ ಪ್ರವಾಸಿಗರ ದಂಡು. ಇಂತಹ ಕಲರ್‌ಫುಲ್ ದೃಶ್ಯಗಳು ಕಂಡು ಬರೋದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ […]

ಬೆಳಗಾವಿ: ಸುತ್ತಲೂ ನಿಸರ್ಗದ ಮಡಿಲು. ಕಣ್ಣುಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕೋ ನೀರಿನ ಝರಿ. ಅದು ಕುಂದಾನಗರಿ ಬೆಳಗಾವಿಯ ಚಿಕಲೆ ಚೆಲುವೆಯ ಸೌಂದರ್ಯ ರಾಶಿ.
ಹಸಿರ ಸಿರಿಯ ನಡುವೆ ದಟ್ಟವಾದ ಮಂಜು. ದಟ್ಟವಾದ ಮಂಜಿನ ನಡುವೆ ತುಂತುರು ಮಳೆ. ಸಹ್ಯಾದ್ರಿ ಬೆಟ್ಟದ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ಜಲರಾಶಿ. ಪ್ರಕೃತಿ ಮಾತೆಯ ಚೆಲುವನ್ನು ಸವಿಯಲು ಬಂದಿರೋ ಪ್ರವಾಸಿಗರ ದಂಡು. ಇಂತಹ ಕಲರ್‌ಫುಲ್ ದೃಶ್ಯಗಳು ಕಂಡು ಬರೋದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ ಬಳಿ.
ಹೌದು ಬೆಳಗಾವಿಯಿಂದ 41 ಕಿಲೋಮೀಟರ್ ದೂರ ಇರುವ ಚಿಕಲೆ ಗ್ರಾಮದಿಂದ ಎರಡು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋದರೆ ನಮಗೆ ಈ ಫಾಲ್ಸ್ ಸಿಗುತ್ತೆ. ಬೆಟ್ಟಗಳ ಮೇಲಿಂದ ಹರಿದು ಬರುವ ನೀರು ಜಲವೈಭವವನ್ನೇ ಸೃಷ್ಟಿಸುತ್ತಾ, ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತೆ.
ಕೊರೊನಾ ಲಾಕ್‌ಡೌನ್‌ನಿಂದ ಬೇಸತ್ತಿದ್ದ ಪ್ರವಾಸಿಗರು ಕುಟುಂಬ ಸಮೇತರಾಗಿ ಚಿಕಲೆ ಚೆಲುವೆಯನ್ನು ನೋಡಲು ಹೆಜ್ಜೆ ಹಾಕುತ್ತಿದ್ದಾರೆ. ತಂಡೋಪತಂಡವಾಗಿ ಚಿಕಲೆ ಗ್ರಾಮಕ್ಕೆ ಆಗಮಿಸುತ್ತಿರುವ ಯುವಕ, ಯುವತಿಯರು ಕಾಲ್ನಡಿಗೆಯಲ್ಲಿ ಪ್ರಕೃತಿಯ ಸೊಬಗನ್ನು ಎಂಜಾಯ್ ಮಾಡ್ತಾ, ಫಾಲ್ಸ್ ಬಳಿ ಬಂದು ಸೆಲ್ಫಿಗೆ ಫೋಸ್ ಕೊಡ್ತಾರೆ. ಒಟ್ನಲ್ಲಿ ಧಾರಾಕಾರ ಮಳೆಯಿಂದಾಗಿ ಚಿಕಲೆ ಜಲಪಾತಕ್ಕೆ ಮತ್ತಷ್ಟು ಕಳೆ ಬಂದಿದ್ದು, ಪ್ರವಾಸಿಗರನ್ನ ತನ್ನತ್ತ ಸಳೆಯುತ್ತಿದೆ. ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪ್ರಕೃತಿ ಮಾತೆ ಸೊಬಗನ್ನ ಎಂಜಾಯ್ ಮಾಡಿ.





