ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ವೈದ್ಯರಲ್ಲದೆ ನಗರದ ಪೊಲೀಸರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಈ ನಡುವೆ ಹಲವಾರು ಪೊಲೀಸರಿಗೂ ಸೋಂಕು ತಗಲುತ್ತಿದೆ.
ಈ ನಿಟ್ಟಿನಲ್ಲಿ ನಗರ ಪೊಲೀಸರ ದಿನ ನಿತ್ಯದ ಜೀವನ ಹಾಗೂ ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆಯು ಒಂದು ಸಣ್ಣ ಕಿರು ಚಿತ್ರವನ್ನ ಬಿಡುಗಡೆ ಮಾಡಿದೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೊಚ್ ಸೆಪಟ್ ಮಾರ್ಗದರ್ಶನದಲ್ಲಿ ಮೂಕಾಭಿನಯದ ಧಾಟಿಯಲ್ಲಿ ಈ ಕಿರುಚಿತ್ರವನ್ನ ನಿರ್ಮಿಸಲಾಗಿದೆ.
ಪೊಲೀಸರು ಮನೆಯಲ್ಲಿ ಹೇಗೆ ಇರಬೇಕು, ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಯಾವ್ಯಾವ ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕು ಎಂಬುದರ ಬಗ್ಗೆ ಈ ಕಿರುಚಿತ್ರ ಬೆಳಕು ಚೆಲ್ಲುತ್ತದೆ. ಜೊತೆಗೆ, ಬಂಧಿತ ಆರೋಪಿಗಳಲ್ಲಿ ಹಲವರಿಗೆ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ, ಅರೋಪಿಗಳನ್ನು ಬಂಧಿಸುವಾಗ ಯಾವ ಕ್ರಮಗಳನ್ನ ಕೈಗೊಳ್ಳಬೇಕು. ಜೊತೆಗೆ, ನಿತ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಹೇಗಿರಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ.
A lesson for all who have to be in high impact situation.. pic.twitter.com/RioXz43QG9
— Bhaskar Rao IPS (@deepolice12) July 20, 2020