ಕಣ್ಣೀರಲ್ಲಿಯೂ ಇದೆ ಕೊರೊನಾ‌! ಹುಷಾರು, ಮುಟ್ಟಿದ್ರೆ ಬಂದ್ಬಿಡುತ್ತೆ ಕೊರೊನಾ ಸೋಂಕು

| Updated By: ಆಯೇಷಾ ಬಾನು

Updated on: Jun 15, 2020 | 10:55 AM

ಬೆಂಗಳೂರು: ಕೊರೊನಾದಿಂದ ಕಂಗೆಟ್ಟ ಜನರ ಜೀವನ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಕೊರೊನಾ ಪೀಡಿತರಂತೂ ಕಣ್ಣೀರ ಧಾರೆಯನ್ನೇ ಹರಿಸ್ತಿದ್ದಾರೆ.  ಪರಿಸ್ಥಿತಿ ಹೀಗಿರುವಾಗ  ಜನಕ್ಕೆ ಸಾಂತ್ವನದ ಜತೆಗೆ ಏನ್‌ ಬೇಕಾದ್ರೂ ಮಾಡಿ, ಆದ್ರೆ ಕಣ್ಣೀರು ಮಾತ್ರ ಹಾಕಬೇಡಿ ಅಂತಾ ಬೇಡಿಕೊಳ್ಳೋ ಹಾಗೆ ಆಗಿದೆ. ಹೌದು, ಕೊರಾನಾ ಪೀಡಿತರು ಕಣ್ಣೀರು ಹಾಕಿದ್ರೂ ಈಗ ಡೇಂಜರ್‌.. ಡೇಂಜರ್! ಯಾಕಂದ್ರೆ ಕೊರೊನಾ ಪೀಡಿತರ ಕಣ್ಣೀರಲ್ಲಿ ಕೂಡಾ ಕೊರೊನಾ ವೈರಸ್‌ಗಳಿರೋದು ಸಂಶೋಧನೆಯಲ್ಲಿ ಕಂಡು ಬಂದಿದೆ. ಬೆಂಗಳೂರಿನ ಖ್ಯಾತ ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ ಈ […]

ಕಣ್ಣೀರಲ್ಲಿಯೂ ಇದೆ ಕೊರೊನಾ‌! ಹುಷಾರು, ಮುಟ್ಟಿದ್ರೆ ಬಂದ್ಬಿಡುತ್ತೆ ಕೊರೊನಾ ಸೋಂಕು
Follow us on

ಬೆಂಗಳೂರು: ಕೊರೊನಾದಿಂದ ಕಂಗೆಟ್ಟ ಜನರ ಜೀವನ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಕೊರೊನಾ ಪೀಡಿತರಂತೂ ಕಣ್ಣೀರ ಧಾರೆಯನ್ನೇ ಹರಿಸ್ತಿದ್ದಾರೆ.  ಪರಿಸ್ಥಿತಿ ಹೀಗಿರುವಾಗ  ಜನಕ್ಕೆ ಸಾಂತ್ವನದ ಜತೆಗೆ ಏನ್‌ ಬೇಕಾದ್ರೂ ಮಾಡಿ, ಆದ್ರೆ ಕಣ್ಣೀರು ಮಾತ್ರ ಹಾಕಬೇಡಿ ಅಂತಾ ಬೇಡಿಕೊಳ್ಳೋ ಹಾಗೆ ಆಗಿದೆ.

ಹೌದು, ಕೊರಾನಾ ಪೀಡಿತರು ಕಣ್ಣೀರು ಹಾಕಿದ್ರೂ ಈಗ ಡೇಂಜರ್‌.. ಡೇಂಜರ್! ಯಾಕಂದ್ರೆ ಕೊರೊನಾ ಪೀಡಿತರ ಕಣ್ಣೀರಲ್ಲಿ ಕೂಡಾ ಕೊರೊನಾ ವೈರಸ್‌ಗಳಿರೋದು ಸಂಶೋಧನೆಯಲ್ಲಿ ಕಂಡು ಬಂದಿದೆ. ಬೆಂಗಳೂರಿನ ಖ್ಯಾತ ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ ಈ ಪರೀಕ್ಷೆಯಲ್ಲಿ ಕೊರೊನಾ ಪೀಡಿತರ ಕಣ್ಣೀರಲ್ಲಿ ವೈರಸ್‌ಗಳು ಪತ್ತೆಯಾಗಿವೆ.

45 ರೋಗಿಗಳ ಕಣ್ಣೀರಲ್ಲಿ ಪತ್ತೆ
ಸುಮಾರು 45 ಕೊರೊನಾ ಪಾಸಿಟಿವ್‌ ಇರುವ ರೋಗಿಗಳನ್ನ ಈ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿತ್ತು. ಇದ್ರಲ್ಲಿ 45 ಜನರ ಕಣ್ಣಿನ ದ್ರವವನ್ನ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. ಆಗ ಬಂದ ರಿಸಲ್ಟ್‌ ವೈದ್ಯಲೋಕವನ್ನೇ ದಂಗು ಬಡಿಸಿದೆ. ಯಾಕಂದ್ರೆ ಕೊರೊನಾ ಪಾಸಿಟಿವ್ ವ್ಯಕ್ತಿಗಳ ಕಣ್ಣೀರಲ್ಲೂ ಕೊರೊನಾ ಸೋಂಕಿರುವುದು ಕನ್‌ಫರ್ಮ್‌ ಆಗಿದೆ.

ಅಷ್ಟೇ ಅಲ್ಲ, ಕೆಲ ಅಸಿಂಪ್ಟಮ್ಸ್‌ ಅಂದ್ರೆ ಕೊರೊನಾದಿಂದ ಸೋಂಕಿತರಾಗಿದ್ರೂ, ಆ ರೋಗದ ಲಕ್ಷಣಗಳಿಲ್ಲದೇ ಇರೋ ವ್ಯಕ್ತಿಯ ಕಣ್ಣೀರಲ್ಲೂ ಸೋಂಕುಗಳಿರೋದು ಪತ್ತೆಯಾಗಿದೆ. ಇಂಥ ವ್ಯಕ್ತಿಗಳ ಕಣ್ಣೀರು ಸೋಂಕಿದ ಕಡೆ ಯಾರಾದ್ರೂ ಸ್ಪರ್ಷಿಸಿದ್ರೆ ಅವರಿಗೂ ಕೋವಿಡ್‌-19 ಗ್ಯಾರಂಟಿ ಅನ್ನುತ್ತಿದೆ ನಮ್ಮದೇ ವೈದ್ಯಲೋಕ.

ಕಣ್ಣೀರ ಜಾಗ ಮುಟ್ಟಿದ್ರೆ ಬರುತ್ತೆ
 ಇದರರ್ಥ ಕೊರೊನಾ ಪೀಡಿತರ ಕಣ್ಣೀರು ಬಿದ್ದಲ್ಲಿ, ಅಥವಾ ಕಣ್ಣೀರು ಮುಟ್ಟಿದ ಕೈಗಳಿಂದ ಸ್ಪರ್ಶಿಸಿದ ಸ್ಥಳದಲ್ಲಿ ಕೊರೊನಾ ವೈರಸ್‌ಗಳು ಅಂಟಿಕೊಳ್ಳುತ್ತವೆ. ಇಂಥ ಜಾಗದಲ್ಲಿ ಯಾರಾದ್ರೂ ಕೈ ಇಟ್ರೆ, ಕುಳಿತ್ರೆ ಅವರಿಗೂ ಕೊರೊನಾ.. ಕರೆಯದೇ ಬರೋ ಅತಿಥಿಯಾಗಿ ವಕ್ಕರಿಸಿಕೊಳ್ಳುತ್ತೆ. ಅಷ್ಟೇ ಅಲ್ಲ ಅವರ ಕಣ್ಣಲ್ಲೂ ಕೊರೊನಾ ಕಣ್ಣೀರು ಬರಿಸುತ್ತೆ.

ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯರ ಈ ಸಂಶೋಧನೆ ಈಗ ಒಂದು ಎಚ್ಚರಿಕೆಯ ಗಂಟೆ. ಇದು ಜನಸಾಮಾನ್ಯರಿಗಷ್ಟೇ ಅಲ್ಲ, ವೈದ್ಯರಿಗೂ ಕೂಡಾ ಮುನ್ನೆಚ್ಚರಿಕೆಯ ಸಂದೇಶ. ಅದ್ರಲ್ಲೂ  ನೇತ್ರ ವೈದ್ಯರು ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಿದೆ.

Published On - 1:06 pm, Sun, 14 June 20