ಡಿಕೆಶಿಗೆ ನಿಂಬೆಹಣ್ಣು ನಿವಾಳಿಸಿ ಆಶೀರ್ವದಿಸಿದ ಮಂಗಳಮುಖಿಯರು! ಆಮೇಲೆ ಏನಾಯ್ತು?

ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪೇಚಿಗೆ ಸಿಲುಕುವಂಥ ಪ್ರಸಂಗವೊಂದು ನಡೆಯಿತು. ಇಂದು ಒಳ್ಳೆಯ ದಿನವೆಂದು ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಹೋಮ ಹವನಗಳನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಪೂಜಾ ಸ್ಥಳಕ್ಕೆ ಬಂದ ಮಂಗಳಮುಖಿಯರ ಗುಂಪೊಂದು ಡಿ.ಕೆ ಶಿವಕುಮಾರ್​ರನ್ನು ಹರಸಲು ಮುಂದಾದರು. ನಿಂಬೆಹಣ್ಣೊಂದನ್ನು ಅಧ್ಯಕ್ಷರಿಗೆ ನಿವಾಳಿಸಿ, ದೃಷ್ಟಿ ತೆಗೆದು, ಅವರಿಗೆ ಹರಿಸಿದರು. ಆಶೀರ್ವಾದ ಮಾಡಿದ ನಂತರ ಎಂದಿನಂತೆ ಕಾಣಿಕೆಯ ಡಿಮ್ಯಾಂಡನ್ನು​ ಶಿವಕುಮಾರ್​ ಮುಂದಿಟ್ಟರು. ಶಿವಕುಮಾರ್​ ಕೂಡ ತಮ್ಮ […]

ಡಿಕೆಶಿಗೆ ನಿಂಬೆಹಣ್ಣು ನಿವಾಳಿಸಿ ಆಶೀರ್ವದಿಸಿದ ಮಂಗಳಮುಖಿಯರು! ಆಮೇಲೆ ಏನಾಯ್ತು?
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 15, 2020 | 10:54 AM

ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪೇಚಿಗೆ ಸಿಲುಕುವಂಥ ಪ್ರಸಂಗವೊಂದು ನಡೆಯಿತು. ಇಂದು ಒಳ್ಳೆಯ ದಿನವೆಂದು ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಹೋಮ ಹವನಗಳನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಪೂಜಾ ಸ್ಥಳಕ್ಕೆ ಬಂದ ಮಂಗಳಮುಖಿಯರ ಗುಂಪೊಂದು ಡಿ.ಕೆ ಶಿವಕುಮಾರ್​ರನ್ನು ಹರಸಲು ಮುಂದಾದರು. ನಿಂಬೆಹಣ್ಣೊಂದನ್ನು ಅಧ್ಯಕ್ಷರಿಗೆ ನಿವಾಳಿಸಿ, ದೃಷ್ಟಿ ತೆಗೆದು, ಅವರಿಗೆ ಹರಿಸಿದರು. ಆಶೀರ್ವಾದ ಮಾಡಿದ ನಂತರ ಎಂದಿನಂತೆ ಕಾಣಿಕೆಯ ಡಿಮ್ಯಾಂಡನ್ನು​ ಶಿವಕುಮಾರ್​ ಮುಂದಿಟ್ಟರು. ಶಿವಕುಮಾರ್​ ಕೂಡ ತಮ್ಮ ಜೇಬಿನಿಂದ ಐನೂರಿನ ಎರಡು ನೋಟುಗಳನ್ನು ಹೊರತೆಗೆದು ಅವರಿಗೆ ನೀಡಲು ಮುಂದಾದರು.

ಬರೀ ಇಷ್ಟೇನಾ! ಎಂದು ಮುಖ ನೋಡಿ ಸುಮ್ಮನಾದ ಮಂಗಳಮುಖಿಯರು!
ಇದನ್ನು ಕಂಡ ಮಂಗಳಮುಖಿಯರು ಒಂದು ಕ್ಷಣ ಸುಮ್ಮನಾದರು. ಕೆಪಿಸಿಸಿ ಅಧ್ಯಕ್ಷರ ಕೈಯಲ್ಲಿ, ಅದೂ ಡಿಕೆಶಿ ಅವರ ಬಳಿ ಕೇವಲ 1,000 ರೂಪಾಯಿ ಕಂಡು ಅವರಿಗೆ ಕೊಂಚ ನಿರಾಸೆಯೂ ಆಯಿತು. ನೋಟುಗಳನ್ನು ಸ್ವೀಕರಿಸದೆ ಹಾಗೆಯೇ ಒಮ್ಮೆ ಅವರನ್ನು ನೋಡಿದ ಮಂಗಳಮುಖಿಯೊಬ್ಬರು ಅವರಿಗೆ ನಮಸ್ಕರಿಸಿ ಕೈಯಲ್ಲಿ ಒಂದು ನಾಣ್ಯವಿಡಲು ಮುಂದಾದರು.

ಮಂಗಳಮುಖಿಯರ ವರ್ತನೆಗೆ ತಬ್ಬಿಬ್ಬಾದ ಕನಕಪುರ ಬಂಡೆ!
ಡಿ.ಕೆ. ಶಿವಕುಮಾರ್‌ರಿಗೂ ಸ್ವಲ್ಪ ಹೊತ್ತು ಯಾಕೆ ಇವರು ನಾನು ಕೊಟ್ಟ ದುಡ್ಡು ತಗೊಳ್ತಿಲ್ಲ ಅಂತಾ ಅರ್ಥ ಅಗ್ಲಿಲ್ಲ! ಆಮೇಲೇ ಅವರಿಗೆ ಹೊಳೆದಿದ್ದು. ಕೊಡುತ್ತಿದ್ದ ಹಣ ಅವರ ಆರ್ಥಿಕ ಘನತೆಗೆ ಸರಿ ಹೊಂದುವಂಥದಲ್ಲ ಅಂತಾ. ಕೂಡಲೇ, ತಮ್ಮ ರೇಷ್ಮೆ ಜುಬ್ಬಾದ ಎಡ ಜೆಬಿಗೆ ಕೈಹಾಕಿ ಐನೂರು ಐನೂರು ನೋಟಿನ ಕಂತೆಯನ್ನೇ ಹೊರತೆಗೆದರು. ಕಂತೆಯಿಂದ ಐದಾರು ನೋಟುಗಳನ್ನು ಎಳೆದು ಅವರಿಗೆ ಕೊಡಲು ಮುಂದಾದರು. ತಕ್ಷಣ ಖುಷಿಯಾದ ಮಂಗಳಮುಖಿಯರು ತಮ್ಮ ಸೆರಗನ್ನು ಚಾಚಿ, ಕಾಣಿಕೆ ಸ್ವೀಕರಿಸಿ, ಅಲ್ಲಿಂದ ಹೊರಟರು!

ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡ‌ಬೇಕಿದ್ದ ಡಿ.ಕೆ ಶಿವಕುಮಾರ್ ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡುವ ಸನ್ನಿವೇಶ ಎದುರಾಗಿದ್ದು ಎಲ್ಲರಿಗೂ ಗೊತ್ತೇಯಿದೆ. ಆದರೆ ಭಾನುವಾರ ಒಳ್ಳೇ ಮುಹೂರ್ತವಿದ್ದ ಕಾರಣ, ಅದನ್ನು ವ್ಯರ್ಥವಾಗದಂತೆ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ ಹವನ ಆಯೋಜಿಸಿದ್ದರು. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಪೂಜೆ 11.30ಕ್ಕೆ ಪೂರ್ಣಾಹುತಿಯ ಮೂಲಕ ಮುಕ್ತಾಯವಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಕೂಡ ಪೂಜೆಯಲ್ಲಿ ಪಾಲ್ಗೊಂಡರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೇವಲ ಹಿರಿಯ ನಾಯಕರನ್ನು ಮಾತ್ರ ಪೂಜೆಗೆ ಆಹ್ವಾನಿಸಲಾಗಿತ್ತು.

Published On - 12:46 pm, Sun, 14 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us