ಜಮ್ಮು ಮತ್ತು ಕಾಶ್ಮೀರದಿಂದ ಕುಟುಂಬದೊಂದಿಗೆ ಬಂದು ಬೆಂಗಳೂರಲ್ಲಿ ನೆಲೆಸಿದ್ದ ಶಂಕಿತ ಉಗ್ರಗಾಮಿಯ ಬಂಧನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 3:42 PM

ಬಂಧಿತ ತಾಲಿಬ್ ಬಿ ಎನ್ ಎಲ್ ಏರ್ ಸರ್ವಿಸಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಮಸೀದಿಯಲ್ಲಿ ಪಾಠ ಪ್ರವಚನ ನಡೆಸುತ್ತಿದ್ದ.

Bengaluru: ಮಂಗಳವಾರ ದೊಡ್ಡ ಮಿಕವೊಂದು ಬೆಂಗಳೂರು ಪೊಲೀಸರ (Bengaluru police) ಬಲೆಗೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದಿಂದ (Jammu and Kashmir) ತನ್ನ ಪತ್ನಿ ಹಾಗೂ ಮೂರು ಮಕ್ಕಳೊಂದಿಗೆ ನಗರಕ್ಕೆ ಬಂದು ನೆಲೆಸಿದ್ದ ಶಂಕಿತ ಭಯೋತ್ಪಾದಕ ತಾಲಿಬ್ ಹುಸ್ಸೇನ್ (Talib Hussain) ಅನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ನಗರದ ಓಕಳೀಪುರಂನಲ್ಲಿರುವ ಮಸೀದಿಯೊಂದರ ಮುಖ್ಯಸ್ಥ ಅನ್ವರ್ ಪಾಶಾ ಎನ್ನುವವರು ತಾಲಿಬ್ ಮತ್ತು ಅವನ ಕುಟುಂಬಕ್ಕೆ ಆಶ್ರಯ ನೀಡಿದ್ದರು. ತಾಲಿಬ್ ಬಿ ಎನ್ ಎಲ್ ಏರ್ ಸರ್ವಿಸಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಮಸೀದಿಯಲ್ಲಿ ಪಾಠ ಪ್ರವಚನ ನಡೆಸುತ್ತಿದ್ದ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.