ನಾವು ಅಭ್ಯರ್ಥಿಯನ್ನು ಹಾಕಿದ ಒಂದು ದಿನದ ಬಳಿಕ ಜೆಡಿ(ಎಸ್) ತನ್ನ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದೆ: ಸಿದ್ದರಾಮಯ್ಯ

ನಾವು ಅಭ್ಯರ್ಥಿಯನ್ನು ಹಾಕಿದ ಒಂದು ದಿನದ ಬಳಿಕ ಜೆಡಿ(ಎಸ್) ತನ್ನ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದೆ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2022 | 1:29 PM

ಪತ್ರಕರ್ತರು ಆರೆಸ್ಸೆಸ್ ಕಾರ್ಯಕರ್ತರು ಚೆಡ್ಡಿಗಳನ್ನು ಪಾರ್ಸೆಲ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯನವರು ಸಿಡಿಮಿಡಿಗೊಂಡರು.

Dharwad: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮಂಗಳವಾರ ಧಾರವಾಡನಲ್ಲಿ ಪತ್ರಕರ್ತರೊಂದಿಗೆ ಮಾತಾಡುವಾಗ ಜೆಡಿ(ಎಸ್) ಪಕ್ಷ ಮತ್ತು ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಮನ್ಸೂರ್ ಅಲಿ ಖಾನ್ (Mansoor Ali Khan) ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ ಅವರು ಅಭ್ಯರ್ಥಿಯನ್ನು ಹಾಕಿದ್ದಾರೆ. ಕೋಮುವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದು ಅವರ ಉದ್ದೇಶವಾಗಿದ್ದರೆ, ಮತ್ತು ಹಿಂದೆ ಕಾಂಗ್ರೆಸ್ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸುವಾಗ ಅಭ್ಯರ್ಥಿಯನ್ನು ಹಾಕದೆ ಮಾಡಿದ ಸಹಾಯಕ್ಕೆ ಕೃತಜ್ಞತೆ ಅವರಲ್ಲಿ ಇದ್ದಿದ್ದರೆ ಹಾಗೂ ನಾವು 80 ಸೀಟು ಗೆದ್ದು ಜೆಡಿ(ಎಸ್) ಕೇವಲ 37 ಸೀಟು ಗೆದ್ದಿದ್ದರೂ ಕುಮಾರಸ್ವಾಮಿಯರನ್ನು ಮುಖ್ಯಮಂತ್ರಿ ಮಾಡಿದ್ದು ನೆನಪಿದ್ದರೆ ಅವರು ಅಭ್ಯರ್ಥಿಯನ್ನು ಹಾಕಬಾರದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಪತ್ರಕರ್ತರು ಆರೆಸ್ಸೆಸ್ ಕಾರ್ಯಕರ್ತರು ಚೆಡ್ಡಿಗಳನ್ನು ಪಾರ್ಸೆಲ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯನವರು ಸಿಡಿಮಿಡಿಗೊಂಡರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.