ಬೆಂಗಳೂರು: ಕೊರೊನಾ ವೈರಸ್ನಿಂದ ಸಿಲಿಕಾನ್ ಸಿಟಿ ಡೇಂಜರ್ ಜೋನ್ಗೆ ಬಂದು ನಿಂತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೊನಾ ವೈರಸ್ ಮಟ್ಟಹಾಕಲು ಸರ್ಕಾರದ ನಿರ್ದೇಶನದಂತೆ 2,5000 ಬೆಡ್ಗಳನ್ನು ಕೊಡಲು ಖಾಸಗಿ ಆಸ್ಪತ್ರೆಗಳ ಒಪ್ಪಿಗೆ ನೀಡಿವೆ.
ಈ ವಾರದಲ್ಲಿ ಒಂದೂವರೆ ಸಾವಿರ ಬೆಡ್ಗಳನ್ನು ನೀಡಲಿದ್ದು, ಉಳಿದ ಒಂದು ಸಾವಿರ ಬೆಡ್ಗಳನ್ನು ನಂತರ ಹಸ್ತಾಂತರಿಸಲು ಖಾಸಗಿ ಆಸ್ಪತ್ರೆಗಳು ಸಮ್ಮತಿ ನೀಡಿವೆ.
ನಾಳೆಯೊಳಗೆ ಖಾಸಗಿ ಆಸ್ಪತ್ರೆಗಳು 2,500 ಬೆಡ್ಗಳನ್ನು ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದರು. ಅಲ್ಲದೆ, ಖಾಸಗಿ ಆಸ್ಪತ್ರೆಗಳು ಸರ್ಕಾರದ ದರ ನಿಗದಿ ಪಾಲಿಸಬೇಕು ಎಂದೂ ಬಿಎಸ್ವೈ ಹೇಳಿದ್ದರು.