ಪೇದೆಗೆ ಕೊರೊನಾ, ಟ್ರಾಫಿಕ್​ನಲ್ಲಿದ್ದಾಗ ಅಂಟಿತಾ ಮಹಾಮಾರಿ?

| Updated By: ಆಯೇಷಾ ಬಾನು

Updated on: May 22, 2020 | 1:27 PM

ಬೆಂಗಳೂರು: ಹೆಮ್ಮಾರಿ ಕೊರೊನಾ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದೆ. ಪುಲಿಕೇಶಿನಗರ ಸಂಚಾರಿ ಠಾಣಾ ಮುಖ್ಯ ಪೊಲೀಸ್ ಪೇದೆಗೂ ಕೊರೊನಾ ಸೋಂಕು ತಗುಲಿದೆ. ಎರಡು ದಿನಗಳ ಹಿಂದಷ್ಟೇ ಠಾಣಾ ಸಿಬ್ಬಂದಿಗೆ ಟೆಸ್ಟ್ ಮಾಡಲಾಗಿತ್ತು. ಇಂದು ಬೆಳಗ್ಗೆ ಬಂದ ಪರೀಕ್ಷಾ ವರದಿಯಲ್ಲಿ‌ ಹೆಡ್​ಕಾನ್ಸ್​ಟೆಬಲ್​ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಹೆಗಡೆ ನಗರದ ವಸತಿಗೃಹದಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಸಹ ಕರ್ತವ್ಯಕ್ಕೆ ಹಾಜರಾಗಿದ್ದರು. ವರದಿ ಬಂದ ಹಿನ್ನೆಲೆಯಲ್ಲಿ ಠಾಣೆಯ ಒಳಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಹಾಗಾಗಿ ಪೇದೆ ಜೊತೆಗೆ […]

ಪೇದೆಗೆ ಕೊರೊನಾ, ಟ್ರಾಫಿಕ್​ನಲ್ಲಿದ್ದಾಗ ಅಂಟಿತಾ ಮಹಾಮಾರಿ?
Follow us on

ಬೆಂಗಳೂರು: ಹೆಮ್ಮಾರಿ ಕೊರೊನಾ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದೆ. ಪುಲಿಕೇಶಿನಗರ ಸಂಚಾರಿ ಠಾಣಾ ಮುಖ್ಯ ಪೊಲೀಸ್ ಪೇದೆಗೂ ಕೊರೊನಾ ಸೋಂಕು ತಗುಲಿದೆ. ಎರಡು ದಿನಗಳ ಹಿಂದಷ್ಟೇ ಠಾಣಾ ಸಿಬ್ಬಂದಿಗೆ ಟೆಸ್ಟ್ ಮಾಡಲಾಗಿತ್ತು. ಇಂದು ಬೆಳಗ್ಗೆ ಬಂದ ಪರೀಕ್ಷಾ ವರದಿಯಲ್ಲಿ‌ ಹೆಡ್​ಕಾನ್ಸ್​ಟೆಬಲ್​ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವರು ಹೆಗಡೆ ನಗರದ ವಸತಿಗೃಹದಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಸಹ ಕರ್ತವ್ಯಕ್ಕೆ ಹಾಜರಾಗಿದ್ದರು. ವರದಿ ಬಂದ ಹಿನ್ನೆಲೆಯಲ್ಲಿ ಠಾಣೆಯ ಒಳಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಹಾಗಾಗಿ ಪೇದೆ ಜೊತೆಗೆ ದೈನಂದಿನ ಕರ್ತವ್ಯದಲ್ಲಿರುತ್ತಿದ್ದ ಮಹಿಳಾ ಸಿಬ್ಬಂದಿಗೂ ಕ್ವಾರಂಟೈನ್ ಮಾಡಲಾಗಿದೆ. ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸುಮಾರು ನೂರು ಜನ ಸಿಬ್ಬಂದಿ ಇದ್ದಾರೆ.

ಸಂಚಾರಿ ಠಾಣೆಯ ಮುಖ್ಯ ಪೇದೆಗೆ ಟ್ರಾಫಿಕ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸಿಂಗ್ ಮಾಡಿದ್ದಾರೆ. ಬೆಂಗಳೂರಿನ ಫ್ರೇಜರ್‌ಟೌನ್ ಟ್ರಾಫಿಕ್ ಠಾಣೆಯ ಮಹಿಳಾ ಪೇದೆಗೆ ಕೊರೊನಾ ತಗುಲಿರುವ ಶಂಕೆ ವ್ಯಕ್ತವಾಗಿದೆ.

Published On - 11:59 am, Fri, 22 May 20