Manish Sisodia: ಭಗವದ್ಗೀತೆ ಅಧ್ಯಯನ, ಧ್ಯಾನ; ಹೀಗಿದೆ ಮನೀಶ್ ಸಿಸೋಡಿಯಾ ಜೈಲುವಾಸ

ಧ್ಯಾನದ ಕೊಠಡಿಯನ್ನು ಸಿಸೋಡಿಯಾಗೆ ಒದಗಿಸಲು ಸಾಧ್ಯವೇ ಎಂದು ಪರಿಶೀಲಿಸುವಂತೆಯೂ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

Manish Sisodia: ಭಗವದ್ಗೀತೆ ಅಧ್ಯಯನ, ಧ್ಯಾನ; ಹೀಗಿದೆ ಮನೀಶ್ ಸಿಸೋಡಿಯಾ ಜೈಲುವಾಸ
ಮನೀಶ್ ಸಿಸೋಡಿಯಾ
Follow us
Ganapathi Sharma
|

Updated on: Mar 06, 2023 | 9:58 PM

ನವದೆಹಲಿ: ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ (Excise Policy Case) ದೆಹಲಿ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಸೋಮವಾರ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಆದರೆ, ಈ ಸಂದರ್ಭದಲ್ಲಿ ಸಿಸೋಡಿಯಾ ಅವರು ನ್ಯಾಯಾಲಯದ ಬಳಿ ಮಾಡಿರುವ ವಿಶಿಷ್ಟ ವಿನಂತಿ ಇದೀಗ ಗಮನ ಸೆಳೆದಿದೆ. ಜೈಲಿನಲ್ಲಿ ಧ್ಯಾನದ ಕೊಠಡಿಯನ್ನು ನೀಡಬೇಕು ಎಂದೂ ಭಗವದ್ಗೀತೆ, ಡೈರಿ, ಪೆನ್ನು, ಕನ್ನಡಕ ಹಾಗೂ ಔಷಧ ಕೊಂಡೊಯ್ಯಲು ಅವಕಾಶ ನೀಡಬೇಕು ಎಂದೂ ಸಿಸೋಡಿಯಾ ಮನವಿ ಮಾಡಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿದೆ. ಸಿಸೋಡಿಯಾಗೆ ಜೈಲಿನಲ್ಲಿ ಭಗವದ್ಗೀತೆ, ಪೆನ್ನು, ಡೈರಿ ನೀಡುವಂತೆ ಸೂಚನೆ ನೀಡಿದೆ. ಜತೆಗೆ ಧ್ಯಾನದ ಕೊಠಡಿಯನ್ನು ಸಿಸೋಡಿಯಾಗೆ ಒದಗಿಸಲು ಸಾಧ್ಯವೇ ಎಂದು ಪರಿಶೀಲಿಸುವಂತೆಯೂ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಇತ್ತೀಚೆಗೆ ಸಿಬಿಐ ಬಂಧಿಸಿತ್ತು. ನಂತರ ಅವರು ಸಿಬಿಐ ಕಸ್ಟಡಿಯಲ್ಲಿದ್ದರು. ಕಸ್ಟಡಿ ಅವಧಿ ಮುಗಿದ ಕಾರಣ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಇನ್ನೂ 14 ದಿನ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಸಮ್ಮತಿಸದ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ: Manish Sisodia: ಮಾಜಿ ಡಿಸಿಎಂ ಮನೀಶ್​​ ಸಿಸೋಡಿಯಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರ ತಿರಸ್ಕರಿಸಿತ್ತು. ನಂತರ ಅವರು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದೆಹಲಿಯ ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಫೆಬ್ರುವರಿ 26ರಂದು ಬಂಧಿಸಿತ್ತು. ಇದಾಗಿ ಎರಡು ದಿನಗಳ ನಂತರ ಅವರು ದೆಹಲಿ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಅರ್ಜಿಯನ್ನು ಕೆಳಹಂತದ ಕೋರ್ಟ್​ ವಿಚಾರಣೆ ನಡೆಸಲಿ ಎಂದು ಹೇಳಿತ್ತು. ನಂತರ ಸಿಡೋಡಿಯಾ ಪರ ವಕೀಲರು ಹೈಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ