ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಜೋರಾಗುತ್ತಿದ್ದು, ದೇಶಾದ್ಯಂತ ವಿವಿಧ ಪಕ್ಷ, ಸಂಘಟನೆಗಳು ರೈತರಿಗೆ ಬೆಂಬಲ ಸೂಚಿಸಿವೆ. ಅಷ್ಟೇ ಪ್ರಮಾಣದಲ್ಲಿ ಸರ್ಕಾರದ ಪರವಾದ ಅಭಿಪ್ರಾಯಗಳೂ ಕೇಳಿಬಂದಿವೆ.
ರೈತರ ಪರ ಮತ್ತು ವಿರೋಧದ ವಿಚಾರವು ಟ್ವಿಟರ್ನಲ್ಲೂ ಮುಂಚೂಣಿಯಲ್ಲಿದೆ. ಇಂಡಿಯಾ ಟ್ರೆಂಡ್ಸ್ ವಿಭಾಗದಲ್ಲಿ ಮೊದಲ ಮೂರು ಹ್ಯಾಷ್ಟ್ಯಾಗ್ಗಳು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.
ಗೀತಾ ಭಾಟೀ ಚಪ್ಪಲಿಯನ್ನು ವಾಪಸ್ ಕೊಡಿ ಎಂದ ನೆಟ್ಟಿಗರು
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ಭಾರತೀಯ ಏಕತಾ ಸಂಘದ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಭಾಟಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಚಪ್ಪಲಿ ಕಳೆದುಕೊಂಡಿರುವ ಅವರು, ಚಪ್ಪಲಿ ಕಳೆದುಹೋದದ್ದಕ್ಕೆ ಸರ್ಕಾರ ಮತ್ತು ಪೊಲೀಸರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅವರು ಹೀಗೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Unacceptable…this is clear political vendetta by Modi Govt #गीता_भाटी_का_सैंडल_वापस_करो pic.twitter.com/u9SYYEUPrr
— Rishi Bagree (@rishibagree) December 7, 2020
ಈ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರು ಗೀತಾ ಭಾಟಿ ಚಪ್ಪಲಿಯನ್ನು ವಾಪಸ್ ಕೊಡ್ರಪ್ಪೋ ಎಂದು ತಮಾಷೆ ಮಾಡಿದ್ದಾರೆ. ‘ಗೀತಾ ಭಾಟೀಕಾ ಸ್ಯಾಂಡಲ್ ವಾಪಸ್ ಕರೋ’ ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಇಂದು ಸಂಜೆಯ ವೇಳೆಗೆ ಒಟ್ಟು 22,800 ಟ್ವೀಟ್ಗಳು ಆಗಿವೆ.
ನಾಳೆ ಭಾರತ್ ಬಂದ್ ಎಂದ ಟ್ವೀಟಿಗರು
ನಾಳೆ ನಡೆಯಲಿರುವ ಭಾರತ್ ಬಂದ್ ಬೆಂಬಲಿಸಿ ಖಲ್ ಭಾರತ್ ಬಂದ್ ರಹೇಗಾ ಎಂಬ ಹ್ಯಾಷ್ಟ್ಯಾಗ್ ಇಂದು ಮುಂಜಾನೆಯಿಂದ ಟ್ವಿಟರ್ ಟ್ರೆಂಡಿಂಗ್ನಲ್ಲಿದೆ. ಈವರೆಗೆ ಒಟ್ಟು 1.75 ಲಕ್ಷ ಟ್ವೀಟ್ಸ್ ಆಗಿದ್ದು ಸದ್ಯ ಎರಡನೇ ಸ್ಥಾನದಲ್ಲಿದೆ.
Bike rally to support Bandh#8_दिसंबर_भारत_बन्द #कल_भारत_बंद_रहेगा #IndiaSupportFarmerProtest @AapHonest @RamnsekhonRamn pic.twitter.com/PZCHuRHUmM
— Gurdeep guru (@Gurdeepgurus) December 7, 2020
ನರೇಂದ್ರ ಮೋದಿ ಪರ ರೈತರು
ಭಾರತ್ ಬಂದ್ಗೆ ವಿರೋಧ ವ್ಯಕ್ತಪಡಿಸಿರುವ ಪೋಸ್ಟ್ಗಳೂ ಟ್ವಿಟರ್ನಲ್ಲಿ ಹರಿದಾಡುತ್ತಿವೆ. ನರೇಂದ್ರ ಮೋದಿ ಪರವಾಗಿ, ನೂತನ ಕೃಷಿ ಮಸೂದೆಯನ್ನು ಬೆಂಬಲಿಸಿ ಹಲವರು ಟ್ವೀಟ್ ಮಾಡಿದ್ದಾರೆ. ‘ಕಿಸಾನ್ ಸ್ಟಾಂಡ್ಸ್ ವಿದ್ ಮೋದಿ’ ಎಂಬ ಹ್ಯಾಷ್ಟ್ಯಾಗ್ ಟ್ವಿಟರ್ ಟ್ರೆಂಡಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದೆ.
ನಾನೂ ಕೃಷಿಕ, ನಾನೂ ರೈತ ಆದರೆ ನಾನು ಭಾರತ್ ಬಂದ್ ಬೆಂಬಲಿಸುವುದಿಲ್ಲ. ನಾನು ಮೋದಿ ಪರ ವಹಿಸುತ್ತೇನೆ ಎಂಬ ಪೋಸ್ಟ್ಗಳು ಕಾಣುತ್ತಿವೆ. ಇಂದು ಸಂಜೆಯ ವೇಳೆಗೆ ಒಟ್ಟು 28,500 ಟ್ವೀಟ್ಗಳು ಆಗಿವೆ.
Farmers With PM Modi
Shame On Congress#KisanStandsWithModi pic.twitter.com/HlTBufZIkm
— Jawahar Yadav (@jawaharyadavbjp) December 7, 2020
Published On - 7:12 pm, Mon, 7 December 20