AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್​ ಬಂದ್ ಇದುವರೆಗೆ ಯಾವತ್ತೂ ಯಶಸ್ವಿಯಾಗಿಲ್ಲ.. ತಲೆಕೆಡಿಸಿಕೊಳ್ಳಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಜನರು ತಲೆಕೆಡಿಸಿಕೊಳ್ಳಬೇಡಿ.. ಭಾರತ್​ ಬಂದ್​ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಇಂದು ವಿಧಾನಸೌಧದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತರ ವಿರುದ್ಧ ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರ ಸದಾ ರೈತ ಪರ ಸರ್ಕಾರಗಳು. ಇದೀಗ ರಾಜಕೀಯಕ್ಕಾಗಿ ಸರ್ಕಾರಗಳ ವಿರುದ್ಧ ಬಂದ್ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್​ ಮುಳುಗುತ್ತಿರುವ ಹಡಗು ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯಿಂದ ಜನಜಾಗೃತಿ ಇನ್ನು ಟ್ವೀಟ್ […]

ಭಾರತ್​ ಬಂದ್ ಇದುವರೆಗೆ ಯಾವತ್ತೂ ಯಶಸ್ವಿಯಾಗಿಲ್ಲ.. ತಲೆಕೆಡಿಸಿಕೊಳ್ಳಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ
Lakshmi Hegde
|

Updated on:Dec 08, 2020 | 11:34 AM

Share

ಬೆಂಗಳೂರು: ರಾಜ್ಯದ ಜನರು ತಲೆಕೆಡಿಸಿಕೊಳ್ಳಬೇಡಿ.. ಭಾರತ್​ ಬಂದ್​ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಇಂದು ವಿಧಾನಸೌಧದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತರ ವಿರುದ್ಧ ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರ ಸದಾ ರೈತ ಪರ ಸರ್ಕಾರಗಳು. ಇದೀಗ ರಾಜಕೀಯಕ್ಕಾಗಿ ಸರ್ಕಾರಗಳ ವಿರುದ್ಧ ಬಂದ್ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್​ ಮುಳುಗುತ್ತಿರುವ ಹಡಗು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಯಿಂದ ಜನಜಾಗೃತಿ ಇನ್ನು ಟ್ವೀಟ್ ಮೂಲಕವೂ ಸಹ ಸಿಎಂ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು, ಬಂದ್​ ವಿರೋಧಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು, ಹಿಂದೆ ಅದರ ಪರವಾಗಿದ್ದವು. ಮಸೂದೆಯ ಕುರಿತು ರೈತರ ದಾರಿ ತಪ್ಪಿಸುತ್ತಿವೆ.. ಈ ಮೂಲಕ ರೈತರಿಗೆ ಕೃಷಿ ಕಾಯ್ದೆಗಳಿಂದ ಆಗುವ ಅನುಕೂಲತೆಗಳನ್ನು ತಪ್ಪಿಸುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ.. ಬಿಜೆಪಿಯಿಂದ ಜನಜಾಗೃತಿ ಮೂಡಿಸುತ್ತೇವೆ ಎಂದಿದ್ದಾರೆ.

ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಾಗಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯುತ್ತದೆ. ಹಾಗೇ, ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ, ಆದಾಯ ಹೆಚ್ಚಿಸಲು ಈ ಕಾಯ್ದೆ ನೆರವಾಗುತ್ತದೆ ಎಂದು ಹೇಳಿದ್ದಾರೆ.

Published On - 11:24 am, Tue, 8 December 20