ಕೊರೊನಾ ಮಧ್ಯೆ ನಿಂತಿಲ್ಲ ಲಂಚಾವತಾರ, ಹಣ ಕೊಟ್ರೆ ಯಾರು ಬೇಕಾದ್ರೂ ರಾಜ್ಯಕ್ಕೆ ಬರಬಹುದು

| Updated By: ಸಾಧು ಶ್ರೀನಾಥ್​

Updated on: Jun 29, 2020 | 2:08 PM

ಬೀದರ್​: ಕೊರೊನಾ ಆತಂಕದ‌ ನಡುವೆಯೂ ಜಿಲ್ಲಾ ಪೊಲೀಸರ ಭರ್ಜರಿ ಲಂಚಾವತಾರ ಮುಂದುವರೆದಿದೆ. ಜಿಲ್ಲೆಯ ಗಡಿಯಲ್ಲಿರುವ ಅಂತಾರಾಜ್ಯ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ಹಣ ವಸೂಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದೆ. ಹಣಕೊಟ್ಟರೆ ಯಾರು ಬೇಕಾದರೂ ತೆಲಂಗಾಣದಿಂದ ಪ್ರವೇಶ ಲಂಚ ನೀಡಿದರೆ ತೆಲಂಗಾಣದಿಂದ ಯಾರು ಬೇಕಾದರೂ ಕರ್ನಾಟಕವನ್ನ ಪ್ರವೇಶಿಸಬಹುದು. ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಅಲ್ಲಿಂದ ಬರುವವರಿಂದ ಬೀದರ್​ನಲ್ಲಿ ಸೋಂಕು ಹರಡುವ ಸಾಧ್ಯತೆಯೂ ಇದೆ. ಆದರೆ, ಇದ್ಯಾವುದರ ಪರಿವೇ ಇಲ್ಲದಂತೆ ಪೊಲೀಸರು ವಾಹನ ಸವಾರರಿಂದ ಹಣ ಪಡೆದು ಬೀದರ್​ ಪ್ರವೇಶಿಸಲು […]

ಕೊರೊನಾ ಮಧ್ಯೆ ನಿಂತಿಲ್ಲ ಲಂಚಾವತಾರ, ಹಣ ಕೊಟ್ರೆ ಯಾರು ಬೇಕಾದ್ರೂ ರಾಜ್ಯಕ್ಕೆ ಬರಬಹುದು
Follow us on

ಬೀದರ್​: ಕೊರೊನಾ ಆತಂಕದ‌ ನಡುವೆಯೂ ಜಿಲ್ಲಾ ಪೊಲೀಸರ ಭರ್ಜರಿ ಲಂಚಾವತಾರ ಮುಂದುವರೆದಿದೆ. ಜಿಲ್ಲೆಯ ಗಡಿಯಲ್ಲಿರುವ ಅಂತಾರಾಜ್ಯ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ಹಣ ವಸೂಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.

ಹಣಕೊಟ್ಟರೆ ಯಾರು ಬೇಕಾದರೂ ತೆಲಂಗಾಣದಿಂದ ಪ್ರವೇಶ
ಲಂಚ ನೀಡಿದರೆ ತೆಲಂಗಾಣದಿಂದ ಯಾರು ಬೇಕಾದರೂ ಕರ್ನಾಟಕವನ್ನ ಪ್ರವೇಶಿಸಬಹುದು. ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಅಲ್ಲಿಂದ ಬರುವವರಿಂದ ಬೀದರ್​ನಲ್ಲಿ ಸೋಂಕು ಹರಡುವ ಸಾಧ್ಯತೆಯೂ ಇದೆ.

ಆದರೆ, ಇದ್ಯಾವುದರ ಪರಿವೇ ಇಲ್ಲದಂತೆ ಪೊಲೀಸರು ವಾಹನ ಸವಾರರಿಂದ ಹಣ ಪಡೆದು ಬೀದರ್​ ಪ್ರವೇಶಿಸಲು ಬಿಡುತ್ತಿದ್ದಾರೆ. ಪ್ರತಿದಿನ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

Published On - 1:41 pm, Mon, 29 June 20