ಊರಲ್ಲಿ ಸಚಿವ ಸುಧಾಕರ್ ಮನೆ ಅಡುಗೆ ಕೆಲಸದಾಕೆಗೆ ಕೊರೊನಾ, ಮನೆ ಸೀಲ್ಡೌನ್
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ರಣಕೇಕೆ ಹಾಕ್ತಿದೆ. ಕಳೆದ ವಾರವಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಬೆಂಗಳೂರು ನಿವಾಸದ ಅಡುಗೆ ಭಟ್ಟನಿಗೆ ಕೊರೊನಾ ಬಂದಿತ್ತು. ನಂತರ ಸುಧಾಕರ್ ಅವರ ತಂದೆ, ಪತ್ನಿ, ಮಗಳು ಹಾಗೂ ಭಾವಮೈದನಿಗೂ ಕೊರೊನಾ ತಗುಲಿತ್ತು. ಇದೀಗ ಸುಧಾಕರ್ ಅವರ ಊರಾದ ಚಿಕ್ಕಬಳ್ಳಾಪುರದ ಪೆರೇಸಂದ್ರದಲ್ಲಿರುವ ಮನೆಯ ಅಡುಗೆ ಕೆಲಸದಾಕೆಗೂ ಕೊರೊನಾ ಬಂದಿದೆ. ಸದ್ಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಸಚಿವರ ಅಡುಗೆ ಭಟ್ಟನಿಗೆ ಕೊರೊನಾ, ಟೆಸ್ಟ್ ಮಾಡ್ಸಿಕೊಳ್ಳಲಿದ್ದಾರೆ […]
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ರಣಕೇಕೆ ಹಾಕ್ತಿದೆ. ಕಳೆದ ವಾರವಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಬೆಂಗಳೂರು ನಿವಾಸದ ಅಡುಗೆ ಭಟ್ಟನಿಗೆ ಕೊರೊನಾ ಬಂದಿತ್ತು. ನಂತರ ಸುಧಾಕರ್ ಅವರ ತಂದೆ, ಪತ್ನಿ, ಮಗಳು ಹಾಗೂ ಭಾವಮೈದನಿಗೂ ಕೊರೊನಾ ತಗುಲಿತ್ತು. ಇದೀಗ ಸುಧಾಕರ್ ಅವರ ಊರಾದ ಚಿಕ್ಕಬಳ್ಳಾಪುರದ ಪೆರೇಸಂದ್ರದಲ್ಲಿರುವ ಮನೆಯ ಅಡುಗೆ ಕೆಲಸದಾಕೆಗೂ ಕೊರೊನಾ ಬಂದಿದೆ. ಸದ್ಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ.
ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಸಚಿವರ ಅಡುಗೆ ಭಟ್ಟನಿಗೆ ಕೊರೊನಾ, ಟೆಸ್ಟ್ ಮಾಡ್ಸಿಕೊಳ್ಳಲಿದ್ದಾರೆ ಸುಧಾಕರ್..!
ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರೇಸಂದ್ರ ಗ್ರಾಮದಲ್ಲಿರುವ ಸುಧಾಕರ್ ಮನೆಯಲ್ಲಿ ಕೆಲಸ ಮಾಡುವ 55 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಹಾಗಾಗಿ ಸಚಿವರ ಪೆರೇಸಂದ್ರ ಗ್ರಾಮದ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ಕೊರೊನಾ ಶಂಕಿತ ಮಹಿಳೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯ ಸಂಪರ್ಕದಲ್ಲಿದ್ದವರಿಗೆ ಆರೋಗ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ಶುರುವಾಗಿದೆ.
Published On - 1:46 pm, Mon, 29 June 20