SSLC ಗಣಿತ ಪ್ರಶ್ನೆಪತ್ರಿಕೆ ನೀಡುವಾಗ ಮಹಾ ಎಡವಟ್ಟು, 8 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ರಾಯಚೂರು: ಕೊರೊನಾ ಆತಂಕದ ನಡುವೆಯೂ ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಹಲವು ಅಡೆ ತಡೆಗಳನ್ನು ಮೀರಿ ಕೊರೊನಾ ವಿರುದ್ಧ ಹೋರಾಡಿದ್ದಾರೆ. ಆದರೆ SSLC ಪರೀಕ್ಷೆಯಲ್ಲಿ ಮಹಾ ಎಡವಟ್ಟು ನಡೆದಿದೆ. 8 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಸಿಂಧನೂರಿನಲ್ಲಿರುವ ಶ್ರೀಕೃಷ್ಣದೇವರಾಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಹಾ ಯಡವಟ್ಟು ನಡೆದಿದೆ. ಗಣಿತ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವಲ್ಲಿ ಯಡವಟ್ಟು ಮಾಡಿದ್ದಾರೆ. SSLC ಹೊಸ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡುವ ಬದಲಿಗೆ ಹಳೇ ಪಠ್ಯಕ್ರಮದ ಗಣಿತ ಪ್ರಶ್ನೆಪತ್ರಿಕೆ […]

SSLC ಗಣಿತ ಪ್ರಶ್ನೆಪತ್ರಿಕೆ ನೀಡುವಾಗ ಮಹಾ ಎಡವಟ್ಟು, 8 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

Updated on: Jun 28, 2020 | 7:50 AM

ರಾಯಚೂರು: ಕೊರೊನಾ ಆತಂಕದ ನಡುವೆಯೂ ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಹಲವು ಅಡೆ ತಡೆಗಳನ್ನು ಮೀರಿ ಕೊರೊನಾ ವಿರುದ್ಧ ಹೋರಾಡಿದ್ದಾರೆ. ಆದರೆ SSLC ಪರೀಕ್ಷೆಯಲ್ಲಿ ಮಹಾ ಎಡವಟ್ಟು ನಡೆದಿದೆ. 8 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಸಿಂಧನೂರಿನಲ್ಲಿರುವ ಶ್ರೀಕೃಷ್ಣದೇವರಾಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಹಾ ಯಡವಟ್ಟು ನಡೆದಿದೆ. ಗಣಿತ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವಲ್ಲಿ ಯಡವಟ್ಟು ಮಾಡಿದ್ದಾರೆ. SSLC ಹೊಸ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡುವ ಬದಲಿಗೆ ಹಳೇ ಪಠ್ಯಕ್ರಮದ ಗಣಿತ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಹೊಸ ವಿದ್ಯಾರ್ಥಿಗಳಿಗೆ ಪುನರಾವರ್ತಿತ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಹೀಗಾಗಿ 8 ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಪರೀಕ್ಷೆ ಆರಂಭವಾದ ಆರ್ಧಗಂಟೆ ಬಳಿಕ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಗೊಂದಲದ ಬಗ್ಗೆ ಕೇಳಿದ್ರು. ಪ್ರಶ್ನೆಪತ್ರಿಕೆ ಬದಲಾಗಿರುವ ಬಗ್ಗೆ ಮೇಲ್ವಿಚಾರಕರಿಗೆ ಪ್ರಶ್ನಿಸಿದ್ದರು. ಆದರೆ ಕೊಟ್ಟ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯುವಂತೆ ಒತ್ತಡ ಹೇರಿ ಮೇಲ್ವಿಚಾರಕರು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ 8 ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಮೇಲ್ವಿಚಾರಕರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಮರು ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ.

Published On - 7:48 am, Sun, 28 June 20