ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ

ಬಿಹಾರ ರಾಜ್ಯದ ಬೇಗುಸರಾಯ್‍ ಜಿಲ್ಲೆಯಲ್ಲಿ ಗುಂಡಕ್​ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಉದ್ಘಾಟನೆಗೂ ಮೊದಲೇ ಭಾನುವಾರ ಬೆಳಿಗ್ಗೆ ಕುಸಿದಿದೆ.

ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ
ಕುಸಿದ ಬೇಗುಸರಾಯ್‍ ಬ್ರಿಡ್ಜ್​
Updated By: ವಿವೇಕ ಬಿರಾದಾರ

Updated on: Dec 18, 2022 | 9:42 PM

ಪಾಟ್ನಾ: ಬಿಹಾರ (Bihar) ರಾಜ್ಯದ ಬೇಗುಸರಾಯ್‍ (Begusarai) ಜಿಲ್ಲೆಯಲ್ಲಿ ಗುಂಡಕ್​ ನದಿಗೆ (Gundak River) ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ (Bridge) ಉದ್ಘಾಟನೆಗೂ ಮೊದಲೇ ಇಂದು (ಡಿ.18) ಬೆಳಿಗ್ಗೆ ಕುಸಿದಿದೆ. ಮುಖ್ಯಮಂತ್ರಿ ನಬಾರ್ಡ್​ (NABARD) ಯೋಜನೆ ಅಡಿಯಲ್ಲಿ 13 ಕೋಟಿ ರೂ. ವೆಚ್ಚದಲ್ಲಿ 206 ಮೀಟರ್​ ಉದ್ದದ ಬ್ರಿಡ್ಜ್​​ ನಿರ್ಮಾಣ ಮಾಡಲಾಗಿದೆ.

2016ರಲ್ಲಿ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಕಾರಣಾಂತರಗಳಿಂದ ಬ್ರಿಡ್ಜ್​ ಇನ್ನೂ ಉದ್ಘಾಟನೆಗೊಂಡಿರಲಿಲ್ಲ.

ಕಲ ದಿನಗಳ ಹಿಂದೆ ಸೇತುವೆಯ ಮುಂಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನಂತರ ಡಿಸೆಂಬರ್ 15ರಂದು ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಇದೀಗ ಇಂದು ಬೆಳಗ್ಗೆ ಸೇತುವೆಯ ಮಧ್ಯಭಾಗ ಕುಸಿದಿದೆ.

 

ಸಾಹೇಬ್‍ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‍ಪುರ ನಡುವೆ ಸಂಪರ್ಕ ಕಲ್ಪಿಸಲು ಬ್ರಿಡ್ಜ್​ ನಿರ್ಮಾಣ ಮಾಡಲಾಗಿತ್ತು. ಅದೃಷ್ಟವಶಾತ್ ಇನ್ನೂ ಉದ್ಘಾಟನೆಗೊಂಡಿರದ ಕಾರಣ ಸಂಚಾರಕ್ಕೆ ನಿರ್ಭಂದಿಸಲಾಗಿತ್ತು. ಇದರಿಂದ ಬಾರಿ ಅನಾಹುತವೊಂದು ತಪ್ಪಿದೆ.

ಕಡಿಮೆ ಗುಣಮಟ್ಟದ ವಸ್ತುಗಳ ಬಳಕೆ

ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರ ತನಿಕೆ ಆರಂಭಿಸುವಂತೆ ಸೂಚಿಸಿದ್ದೆನೆ. ಇದು ಕಳಪೆ ಕಾಮಗಾರಿಯಾಗಿದ್ದು ನಿರ್ಮಾಣಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದಾರೆ  ಎಂದು ಸುಲ್ತಂಗಂಜ್ ಜೆಡಿಯು ಶಾಸಕ ಲಲಿತ್ ನಾರಾಯಣ್ ಮಂಡಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Sun, 18 December 22