ಬೈಕ್​ನಲ್ಲಿ ತೆರಳುತ್ತಿರುವಾಗ ‭ಖಾಸಗಿ ಬಸ್​ಗೆ ಡಿಕ್ಕಿ: ಬಸ್​ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

ಬೈಕ್​ನಲ್ಲಿ ತೆರಳುತ್ತಿರುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಕಾರಣ ಬಸ್​ ​ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಮರಣ ಹೊಂದಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ

ಬೈಕ್​ನಲ್ಲಿ ತೆರಳುತ್ತಿರುವಾಗ ‭ಖಾಸಗಿ ಬಸ್​ಗೆ ಡಿಕ್ಕಿ:  ಬಸ್​ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Dec 21, 2020 | 12:47 PM

ನೆಲಮಂಗಲ: ಕುಣಿಗಲ್ ಮೂಲದ ಶಶಿಕಲಾ (50) ಮತ್ತು ಅವರ ಪತಿ ಗಂಗವೆಂಕಟಯ್ಯ ದಂಪತಿ ಬೈಕ್​ನಲ್ಲಿ ಬ್ಯಾಡರಹಳ್ಳಿಗೆ ತೆರಳುತ್ತಿದ್ದಾಗ.. ಖಾಸಗಿ ಬಸ್​ಗೆ ಬೈಕ್ ಡಿಕ್ಕಿ ಹೊಡೆದ ಕಾರಣ ಹಿಂಬದಿ ಕುಳಿತಿದ್ದ ಶಶಿಕಲಾ ಬಸ್​ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮರಣ ಹೊಂದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದಾವರದ ನೈಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಗಂಗವೆಂಕಟಯ್ಯ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ಖಾಸಗಿ ಬಸ್​ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು