Biotech Startup Expo 2022: ಭಾರತದ ಜೈವಿಕ ಆರ್ಥಿಕತೆಯು 8 ವರ್ಷಗಳಲ್ಲಿ 8 ಪಟ್ಟು ಬೆಳೆದಿದೆ:ಮೋದಿ

| Updated By: ನಯನಾ ರಾಜೀವ್

Updated on: Jun 09, 2022 | 11:54 AM

ಕಳೆದ 8 ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆಯು 8 ಪಟ್ಟು ಬೆಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

Biotech Startup Expo 2022: ಭಾರತದ ಜೈವಿಕ ಆರ್ಥಿಕತೆಯು  8 ವರ್ಷಗಳಲ್ಲಿ 8 ಪಟ್ಟು ಬೆಳೆದಿದೆ:ಮೋದಿ
Narendra Modi
Image Credit source: ANI
Follow us on

ಭಾರತದ ಜೈವಿಕ ಆರ್ಥಿಕತೆಯು ಕಳೆದ 8 ವರ್ಷಗಳಲ್ಲಿ 8 ಪಟ್ಟು ಬೆಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. . ನವದೆಹಲಿಯ ಪ್ರಗತಿ ಮೈದಾನದಲ್ಲಿ ಗುರುವಾರ ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ , ಜೈವಿಕ ತಂತ್ರಜ್ಞಾನದ ಜಾಗತಿಕ ಪರಿಸರ ವ್ಯವಸ್ಥೆಯಲ್ಲಿ ಅಗ್ರ-10 ದೇಶಗಳ ಪಟ್ಟಿಯನ್ನು ಸೇರಲು  ಭಾರತವು ಹೆಚ್ಚು ದೂರವಿಲ್ಲ. ಕಳೆದ 8 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ  70 ಸಾವಿರಕ್ಕೆ ಏರಿದೆ ಎಂದು ಅವರು ಹೇಳಿದರು.

ಐಟಿ ವೃತ್ತಿಪರರ ಕೌಶಲ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಮ್ಮ ಐಟಿ ವೃತ್ತಿಪರರ ಕೌಶಲ್ಯ ಮತ್ತು ಆವಿಷ್ಕಾರದ ಬಗ್ಗೆ ವಿಶ್ವದಲ್ಲಿ ನಂಬಿಕೆ ಉತ್ತುಂಗದಲ್ಲಿದೆ ಎಂದು ಹೇಳಿದರು. ಬಯೋಟೆಕ್ ಕ್ಷೇತ್ರದ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತವನ್ನು ಬಯೋಟೆಕ್ ಕ್ಷೇತ್ರದಲ್ಲಿ ಅವಕಾಶಗಳ ಬೀಡು ಎಂದು ಪರಿಗಣಿಸಲಾಗುತ್ತಿದೆ, ಆದ್ದರಿಂದ ಅದಕ್ಕೆ ಐದು ದೊಡ್ಡ ಕಾರಣಗಳಿವೆ ಎಂದು ಹೇಳಿದರು.

–  ಜನಸಂಖ್ಯೆ

-ವೈವಿಧ್ಯಮಯ ಹವಾಮಾನ ವಲಯಗಳು

– ಹ್ಯೂಮನ್ ಕ್ಯಾಪಿಟಲ್ ಪೂಲ್

– ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭ

– ಭಾರತದಲ್ಲಿ ಜೈವಿಕ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ

ನಿರಂತರವಾಗಿ ಹೆಚ್ಚುತ್ತಿರುವ ಸ್ಟಾರ್ಟ್‌ಅಪ್‌ಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಕಳೆದ 8 ವರ್ಷಗಳಲ್ಲಿ ದೇಶಾದ್ಯಂತ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಬೆರಳೆಣಿಕೆಯಿಂದ  70 ಸಾವಿರಕ್ಕೆ ಏರಿದೆ ಎಂದು ಹೇಳಿದರು. ಈ 70 ಸಾವಿರ ಸ್ಟಾರ್ಟ್ ಅಪ್ ಗಳು ಸುಮಾರು 60 ವಿವಿಧ ಕೈಗಾರಿಕೆಗಳಲ್ಲಿ ಬೆಳೆಯುತ್ತಿವೆ. ಇದರಲ್ಲೂ 5 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಬಯೋಟೆಕ್‌ನೊಂದಿಗೆ ಸಂಬಂಧ ಹೊಂದಿವೆ.

ಇದಕ್ಕೂ ಮೊದಲು, ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ಪೋ 2022 ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್, ಡಿಪಾರ್ಟ್ಮೆಂಟ್ ಆಫ್ ಬಯೋಟೆಕ್ನಾಲಜಿಯಿಂದ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ಪೋ 2022 ಅನ್ನು ಆಯೋಜಿಸಿಲಾಗಿದೆ.

ಇಂದಿನಿಂದ ಆರಂಭವಾದ ಎರಡು ದಿನಗಳ ಕಾರ್ಯಕ್ರಮ ನಾಳೆ ಜೂನ್ 10 ರಂದು ಮುಕ್ತಾಯಗೊಳ್ಳಲಿದೆ. ಪರಿಷತ್ತು ಸ್ಥಾಪನೆಯಾಗಿ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಎಕ್ಸ್‌ಪೋ ಆಯೋಜಿಸಲಾಗಿದೆ.

ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ಪೋದ ಥೀಮ್ ಬಯೋಟೆಕ್ ಸ್ಟಾರ್ಟ್ಅಪ್ ಇನ್ನೋವೇಶನ್: ಸ್ವಾವಲಂಬಿ ಭಾರತದ ಕಡೆಗೆ.

ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್‌ಪೋ ಉದ್ಯಮಿಗಳು, ಹೂಡಿಕೆದಾರರು, ಉದ್ಯಮದ ಮುಖಂಡರು, ಸಂಶೋಧಕರು, ವಿಜ್ಞಾನಿಗಳು, ನಿಯಂತ್ರಕರು, ತಯಾರಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಆರೋಗ್ಯ, ಕೃಷಿ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಜಿನೋಮಿಕ್ಸ್, ಬಯೋಫಾರ್ಮಾ, ಕ್ಲೀನ್ ಎನರ್ಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನದ ಬಳಕೆಯನ್ನು ಪ್ರದರ್ಶಿಸುವ ಸುಮಾರು 300 ಮಳಿಗೆಗಳನ್ನು ಎಕ್ಸ್‌ಪೋದಲ್ಲಿ ಸ್ಥಾಪಿಸಲಾಗಿದೆ.

ಎಂಟು ವರ್ಷದಲ್ಲಿ ಬಯೋ ಎಕಾನಮಿ ಶೇ.8ರಷ್ಟು ಹೆಚ್ಚಳವಾಗಿದೆ, 10 ಅರಬ್ ಡಾಲರ್​ನಿಂದ 80 ಅರಬ್​ ಡಾಲರ್​ಗೆ ತಲುಪಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತವು ಬಯೋಟೆಕ್​ನ ಗ್ಲೋಬಲ್ ಎಕೋಸಿಸ್ಟಂನಲ್ಲಿ ಟಾಪ್ 10 ದೇಶಗಳ ಪಟ್ಟಿಯಲ್ಲಿ ತಲುಪಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂದರು. ಬಯೋಟೆಕ್ನಾಲಜಿ, ರಿಸರ್ಚ್​, ಅಸಿಸ್ಟೆಂಟ್ ಕೌನ್ಸಿಲ್ ಉತ್ತಮವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದೆ, ಕಳೆದ ವರ್ಷಗಳಲ್ಲಿ ಭಾರತದಲ್ಲಿ ಬಯೋಎಕಾನಮಿಯ ರಿಸರ್ಚ್​ ಹಾಗೂ ಇನೋವೇಷನ್​ನ ಅಭೂತಪೂರ್ವ ವಿಸ್ತಾರವಾಗಿದೆ. ಅದರಲ್ಲಿ ಬೈರೆಕ್​ನ ಕೊಡುಗೆ ಸಾಕಷ್ಟಿದೆ ಎಂದರು.

Published On - 11:49 am, Thu, 9 June 22