Rupek Lay Offs: ರುಪೇಕ್ನಿಂದ 180ಕ್ಕೂ ಹೆಚ್ಚು ಉದ್ಯೋಗಿಗಳ ವಜಾ; ಸ್ಥೂಲ ಆರ್ಥಿಕತೆಯ ಹೊಡೆತ ಬಿದ್ದ ಮೊದಲ ಫಿನ್‌ಟೆಕ್
ಚಿನ್ನದ ಸಾಲ ನೀಡುವ ರುಪೇಕ್ನಿಂದ ಸ್ಥೂಲ ಆರ್ಥಿಕ ಕಾರಣಗಳಿಗಾಗಿ 180ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ಸ್ಟಾರ್ಟ್ಅಪ್ಗಳಿಗೆ ಹಣಕಾಸಿನ ಹರಿವಿನ ಸಮಸ್ಯೆಗಳ ಪರಿಣಾಮವು ಫಿನ್‌ಟೆಕ್ ವಲಯಕ್ಕೂ ವ್ಯಾಪಿಸಿದ್ದು, ಚಿನ್ನದ ಸಾಲಗಳ ಪ್ಲಾಟ್‌ಫಾರ್ಮ್ ರುಪೇಕ್‌ನೊಂದಿಗೆ ವಿಸ್ತರಿಸಿದೆ. ಇದೀಗ ಆ ಕಂಪೆನಿಯು ತನ್ನ ಉದ್ಯೋಗಿಗಳ ಒಟ್ಟು ಸಂಖ್ಯೆ ಆಧಾರದ ಮೇಲೆ ಶೇಕಡಾ 10ರಿಂದ 15ರಷ್ಟು ಮಂದಿಯನ್ನು ವಜಾಗೊಳಿಸಿದೆ (Lay Offs) ಎಂದು ಹೇಳಿದೆ. ಕಠಿಣ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಫಿನ್‌ಟೆಕ್ ರುಪೇಕ್. 1,200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಕಂಪೆನಿಯು 180ಕ್ಕೂ ಹೆಚ್ಚು ಜನರನ್ನು ವಜಾಗೊಳಿಸಿದೆ.
ಕಂಪೆನಿಯು ಈ ಬಗ್ಗೆ ನೀಡಿದ ಹೇಳಿಕೆಯಲ್ಲಿ ಹೀಗೆ ಹೇಳಿದೆ, “ತೀವ್ರವಾದ ವಿಷಾದದಿಂದ ನಾವು ಶೇ 10ರಿಂದ 15ರಷ್ಟು ಉದ್ಯೋಗಿಗಳೊಂದಿಗೆ ಬೇರೆಯಾಗುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ದುರ್ಬಲವಾದ ಸ್ಥೂಲ ಆರ್ಥಿಕ ವಾತಾವರಣವು ನಮ್ಮ ಕಾರ್ಯತಂತ್ರವನ್ನು ಮರು-ಮೌಲ್ಯಮಾಪನದ ನಿರ್ಣಯಕ್ಕೆ, ನಮ್ಮ ವೆಚ್ಚಗಳನ್ನು ಮರುಪರಿಶೀಲಿಸಲು ಒತ್ತಾಯಿಸಿದೆ. ನಮ್ಮ ಸುಸ್ಥಿರತೆ ಮತ್ತು ಬೆಳವಣಿಗೆಯನ್ನು ಬೆಂಬಲಿಸಲು ಸಂಸ್ಥೆಯ ರಚನೆಯು ಕಡಿಮೆ ಸಂಖ್ಯೆಯಲ್ಲಿ ಇರುತ್ತದೆ.”
“ಈ ಬೆಳವಣಿಗೆಯ ಪರಿಣಾಮಕ್ಕೆ ಗುರಿ ಆಗಿರುವ ಎಲ್ಲ ಉದ್ಯೋಗಿಗಳು ನೀಡಿದ ನಿಸ್ವಾರ್ಥ ಕೊಡುಗೆಗಳನ್ನು ನಾವು ಅಂಗೀಕರಿಸುತ್ತೇವೆ ಮತ್ತು ಈ ಪರಿವರ್ತನೆಯ ಮೂಲಕ ಅವರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ,” ಎಂದು ಕಂಪೆನಿಯ ಹೇಳಿಕೆಯಲ್ಲಿ ಸೇರಿಸಲಾಗಿದೆ.
ಅಂದ ಹಾಗೆ ಸ್ಟಾರ್ಟ್ಅಪ್ಗಳ ಪಾಲಿಗೆ ಈಗ ಬಹಳ ಕಠಿಣ ಸಮಯ ಆಗಿದೆ. ಕಂಪೆನಿ ನಡೆಸುವುದಕ್ಕೆ ಕಷ್ಟ ಆಗಿ, ಎಷ್ಟೋ ಸ್ಟಾರ್ಟ್ಅಪ್ಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಅದರಲ್ಲೂ ಅನ್ಅಕಾಡೆಮಿ, ವೇದಾಂತುದಂಥ ಎಡ್ಟೆಕ್ ಕಂಪೆನಿಗಳಿಗೆ ದೊಡ್ಡ ಮಟ್ಟದಲ್ಲೇ ಹೊಡೆತ ಬಿದ್ದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Lay Offs: ಮೇ ತಿಂಗಳಲ್ಲಿ ಜಾಗತಿಕವಾಗಿ 15000 ಟೆಕ್ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್
Published On - 1:48 pm, Tue, 7 June 22