Lay Offs: ಮೇ ತಿಂಗಳಲ್ಲಿ ಜಾಗತಿಕವಾಗಿ 15000 ಟೆಕ್ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

2022ರ ಮೇ ತಿಂಗಳಲ್ಲಿ ಜಾಗತಿಕವಾಗಿ 15000 ಮಂದಿ ಟೆಕ್ ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದರ ವಿವರಣೆ ಇಲ್ಲಿದೆ.

Lay Offs: ಮೇ ತಿಂಗಳಲ್ಲಿ ಜಾಗತಿಕವಾಗಿ 15000 ಟೆಕ್ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 29, 2022 | 8:10 AM

2022ರ ಮೇ ತಿಂಗಳು ಒಂದರಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ 15,000ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜಾಗತಿಕ ಸ್ಥೂಲ ಆರ್ಥಿಕ ಅಂಶಗಳು ಕಂಪೆನಿಗಳು, ಅದರಲ್ಲೂ ಸ್ಟಾರ್ಟ್​ಅಪ್​ಗಳ ಮೇಲೆ ಪರಿಣಾಮ ಬೀರಿವೆ. ಉದ್ಯೋಗದಿಂದ ತೆಗೆಯುವುದರ ಬಗ್ಗೆ ಸರಾಸರಿ ಲೆಕ್ಕವಿಡುವ layoffs.fyi ಪ್ರಕಾರ, 15000ಕ್ಕೂ ಹೆಚ್ಚು ಟೆಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ (Layoffs) ಎಂದು ಟೆಕ್ ಕ್ರಂಚ್ ವರದಿ ಮಾಡಿದೆ. ಕೊವಿಡ್19 ಆರಂಭವಾದ 2020ರ ಮಾರ್ಚ್​ನಿಂದ ಜಾಗತಿಕವಾಗಿ 718 ಸ್ಟಾರ್ಟ್​ಅಪ್​ಗಳು 1.25 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿವೆ. ಹೆಚ್ಚುತ್ತಿರುವ ಹಣದುಬ್ಬರ, ಆರ್ಥಿಕ ಕುಸಿತದ ಭೀತಿ ಮತ್ತು ರಷ್ಯಾ- ಉಕ್ರೇನ್ ಯುದ್ಧ ಹೀಗೆ ಹಲವು ಸಮಸ್ಯೆಗಳನ್ನು ಕಂಪೆನಿಗಳು ಎದುರಿಸುತ್ತಿವೆ.

ಮೆಟಾ (ಈ ಹಿಂದೆ ಫೇಸ್​ಬುಕ್) ಮತ್ತು ಟ್ವಿಟ್ಟರ್ ಸಾರ್ವಜನಿಕವಾಗಿಯೇ ಘೋಷಿಸಿದಂತೆ, ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ. ಆದಾಯದ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವಾಗಿಲ್ಲವಾದ್ದರಿಂದ ನೇಮಕಾತಿಯನ್ನು ನಿಧಾನ ಮಾಡಿರುವುದಾಗಿ ಸ್ನಾಪ್​ಚಾಟ್ ಮಾತೃಸಂಸ್ಥೆಯಾದ ಸ್ನಾಪ್ ತಿಳಿಸಿದೆ. ಗುರುವಾರದಂದು ಇ-ಕಾಮರ್ಸ್​ ಪ್ಲಾಟ್​ಫಾರ್ಮ್ ವಿಟೆಕ್ಸ್ 193 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿದೆ, ಅಮೆರಿಕದ ಕೇಂದ್ರಕಚೇರಿಯಲ್ಲಿ ಪೇಪಾಲ್ ಹತ್ತಾರು ಮಂದಿಯನ್ನು ಕೆಲಸದಿಂದ ತೆಗೆದಿದೆ. ದಿನಸಿಗಳನ್ನು ಡೆಲಿವರಿ ಮಾಡುವ ಇನ್​ಸ್ಟಾಕಾರ್ಟ್​ ನೇಮಕಾತಿಯನ್ನು ನಿಧಾನಗೊಳಿಸಿದೆ.

ಭಾರತದಲ್ಲಿ ಪುನರ್​ರಚನೆ ಮತ್ತು ವೆಚ್ಚ ಕಡಿತದ ಹೆಸರಲ್ಲಿ 6000 ಮಂದಿಯ ಕೆಲಸಕ್ಕೆ ಕೊಕ್ ನೀಡಲಾಗಿದೆ. ಸರಿಯಾದ ಲಾಭ ತಂದುಕೊಡದ ವರ್ಟಿಕಲ್ಸ್​ಗಳನ್ನು ಮುಚ್ಚಲಾಗಿದೆ. ಮಾರುಕಟ್ಟೆ ವೆಚ್ಚ ಕಡಿಮೆ ಮಾಡಲಾಗಿದೆ ಮತ್ತು ಹೊಸ ನೇಮಕಾತಿ ಸ್ಥಗಿತಗೊಳಿಸಲಾಗಿದೆ. ಎಡ್​ಟೆಕ್​ನಿಂದ ಇ-ಕಾಮರ್ಸ್​ ತನಕ ಮತ್ತು ಹೆಲ್ತ್​ಟೆಕ್ ವರ್ಟಿಕಲ್ಸ್​ ತನಕ ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಆರ್ಥಿಕ ಕುಸಿತದ ಸೂಚನೆ ಸಿಗುತ್ತಿದ್ದಂತೆ ಹಾಗೂ ಹಣದ ಸೆಲೆ ಬತ್ತುತ್ತಿರುವಂತೆ ಸನ್ನಿವೇಶ ಇನ್ನಷ್ಟು ಹದಗೆಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Vedantu Layoff: ವೇದಾಂತು ಕಂಪೆನಿಯಿಂದ ಶೇಕಡಾ 7ರಷ್ಟು ಅಥವಾ 424 ಉದ್ಯೋಗಿಗಳ ವಜಾ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ