PM- KISAN eKYC: ಪಿಎಂ-ಕಿಸಾನ್ ಇಕೆವೈಸಿಗೆ ಮೇ 31 ಕೊನೆ ದಿನ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಇಕೆವೈಸಿಗೆ ಮೇ 31, 2022 ಅಂತಿಮ ಗಡುವಿನ ದಿನವಾಗಿದೆ. ಇ-ಕೆವೈಸಿ ಹೇಗೆ ಎಂಬುದರ ವಿವರ ಇಲ್ಲಿದೆ.

PM- KISAN eKYC: ಪಿಎಂ-ಕಿಸಾನ್ ಇಕೆವೈಸಿಗೆ ಮೇ 31 ಕೊನೆ ದಿನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 28, 2022 | 6:52 PM

ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನೋಂದಣಿ ಮಾಡಲಾದ ರೈತರಿಗೆ ವಾರ್ಷಿಕ 6,000 ರೂಪಾಯಿ ಆದಾಯದ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ಒದಗಿಸುತ್ತದೆ. ಮತ್ತೊಂದೆಡೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಪಿಎಂ ಕಿಸಾನ್ ಯೋಜನೆಯ (PM-KISAN) ಹಣಕಾಸಿನ ಪ್ರಯೋಜನವನ್ನು ಪಡೆಯಲು ರೈತರು ತಮ್ಮ ಕೆವೈಸಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರವು ಕಡ್ಡಾಯ eKYC ಅನ್ನು ಪೂರ್ಣಗೊಳಿಸುವ ಗಡುವನ್ನು ಮೇ 31, 2022ಕ್ಕೆ ವಿಸ್ತರಿಸಿದ್ದು, ಈ ಹಿಂದಿನ ನಿಗದಿತ ಗಡುವು ಮಾರ್ಚ್ 22, 2022 ಆಗಿತ್ತು. ಇದು ರೈತರಿಗೆ ಉತ್ತಮ ಸುದ್ದಿಯಾಗಿದೆ. ಪಿಎಂ-ಕಿಸಾನ್ ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. OTP ಆಧಾರಿತ eKYC ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ eKYCಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದು. ಎಲ್ಲ ಪಿಎಂ-ಕಿಸಾನ್ ಫಲಾನುಭವಿಗಳಿಗೆ eKYCಯ ಗಡುವನ್ನು 31 ಮೇ, 2022ರ ವರೆಗೆ ವಿಸ್ತರಿಸಲಾಗಿದೆಎಂದು ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ಹೇಳುತ್ತದೆ.

ಕಡ್ಡಾಯವಾದ eKYC ಕೆಲಸವನ್ನು ಪೂರ್ಣಗೊಳಿಸಿದ ನಂತರ ಎಲ್ಲ ಭೂಹಿಡುವಳಿ ರೈತರ ಕುಟುಂಬಗಳು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ರೂ.6000 ಆರ್ಥಿಕ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ನಾಲ್ಕು ತಿಂಗಳಿಗೆ ಒಮ್ಮೆ ತಲಾ ರೂ. 2000 ರಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈ ಯೋಜನೆಯು ತಮ್ಮ ಹೆಸರಿನಲ್ಲಿ ಕೃಷಿಯೋಗ್ಯ ಭೂಮಿ ಹೊಂದಿರುವ ಮತ್ತು ಅಗತ್ಯವಿರುವ ಕೆವೈಸಿ ಕೆಲಸವನ್ನು ಪೂರ್ಣಗೊಳಿಸಿದ ಎಲ್ಲ ಭೂಹಿಡುವಳಿ ರೈತರ ಕುಟುಂಬಗಳಿಗೆ ಮುಕ್ತವಾಗಿದೆ. ಅಗತ್ಯವಾದ eKYC ಜೋಡಣೆ ಅನ್ನು ಪೂರ್ಣಗೊಳಿಸಲು ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳ ಅಗತ್ಯವಿದೆ.

ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ತಿಳಿಸಿರುವಂತೆ, “ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಒದಗಿಸುವ ಅಗತ್ಯವಿದೆ, ಇದರಿಂದಾಗಿ ಯೋಜನೆಯಡಿ ಆರ್ಥಿಕ ಪ್ರಯೋಜನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅಗತ್ಯವಿದೆ. ಬ್ಯಾಂಕ್ ಖಾತೆ ವಿವರಗಳನ್ನು ನೀಡದಿದ್ದರೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ.”

“ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದರೆ ಪ್ರಸ್ತುತ ಫಲಾನುಭವಿಗಳು ಆಧಾರ್ ಅಥವಾ ಆಧಾರ್ ನೋಂದಣಿ ಸಂಖ್ಯೆಯನ್ನು ಹೊಂದಿರದ ಸಂದರ್ಭಗಳಲ್ಲಿ, ಗುರುತಿನ ಪರಿಶೀಲನೆಗಾಗಿ ಮತ್ತು 1ನೇ ಕಂತಿನ ವರ್ಗಾವಣೆಗಾಗಿ ಅಂತಹ ರೈತ ಕುಟುಂಬಗಳಿಗೆ ಪ್ರಯೋಜನವನ್ನು ವರ್ಗಾಯಿಸಲು ಪರ್ಯಾಯ ನಿಗದಿತ ದಾಖಲೆಗಳನ್ನು ಸಂಗ್ರಹಿಸಬಹುದು. ಆಧಾರ್ ಕಾರ್ಡ್ ಹೊಂದಿರದ ಎಲ್ಲ ಫಲಾನುಭವಿಗಳು ಆಧಾರ್ ಅಡಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಏಕೆಂದರೆ ನಂತರದ ಕಂತುಗಳ ವರ್ಗಾವಣೆಯನ್ನು ಆಧಾರ್ ಜೋಡಿಸಿದ ಡೇಟಾ ಬೇಸ್ ಆಧಾರದ ಮೇಲೆ ಮಾತ್ರ ಮಾಡಲಾಗುತ್ತದೆ,” ಎಂದು ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಪಿಎಂ ಕಿಸಾನ್ ಇ-ಕೆವೈಸಿ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸುವುದು?

1. pmkisan.nic.inಗೆ ಭೇಟಿ ನೀಡಿ ಮತ್ತು ‘farmers corner’ ವಿಭಾಗದ ಅಡಿಯಲ್ಲಿ ‘eKYC’ ಕ್ಲಿಕ್ ಮಾಡಿ.

2. ‘OTP ಆಧಾರಿತ Ekyc’ ವಿಭಾಗದ ಅಡಿಯಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘search’ ಕ್ಲಿಕ್ ಮಾಡಿ.

3. ಈಗ ನಿಮ್ಮ ಆಧಾರ್-ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ‘Get OTP’ ಕ್ಲಿಕ್ ಮಾಡಿ.

4. OTP ಅನ್ನು ನಮೂದಿಸಿ ಮತ್ತು ನಮೂದಿಸಿದ ವಿವರಗಳ ಯಶಸ್ವಿ ಪರಿಶೀಲನೆಯ ನಂತರ eKYC ಪೂರ್ಣಗೊಳ್ಳುತ್ತದೆ.

ಫಲಾನುಭವಿಗಳು ಯಾವುದೇ ಸಹಾಯಕ್ಕಾಗಿ ಪಿಎಂ-ಕಿಸಾನ್ ಸಹಾಯವಾಣಿ ಸಂಖ್ಯೆ: 011-24300606,155261 ಅನ್ನು ಸಂಪರ್ಕಿಸಬಹುದು ಮತ್ತು ಆಧಾರ್ ಒಟಿಪಿ ಸಂಬಂಧಿತ ಸಮಸ್ಯೆಗಳಿಗೆ aead@nic.in ಅನ್ನು ಸಂಪರ್ಕಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ

Published On - 6:52 pm, Sat, 28 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್