AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

e-commerce platform: ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿನ ನಕಲಿ ವಿಮರ್ಶೆ ತಡೆಯುವುದಕ್ಕೆ ಚೌಕಟ್ಟು ರೂಪಿಸಲು ಮುಂದಾದ ಸರ್ಕಾರ

ಭಾರತದಲ್ಲಿ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳಲ್ಲಿ ನಕಲಿ ವಿಮರ್ಶೆಗಳನ್ನು ತಡೆಯುವ ಗುರಿಯೊಂದಿಗೆ ಸರ್ಕಾರ ಚೌಕಟ್ಟನ್ನು ರೂಪಿಸಲು ಮುಂದಾಗಿದೆ.

e-commerce platform: ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿನ ನಕಲಿ ವಿಮರ್ಶೆ ತಡೆಯುವುದಕ್ಕೆ ಚೌಕಟ್ಟು ರೂಪಿಸಲು ಮುಂದಾದ ಸರ್ಕಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 28, 2022 | 4:27 PM

Share

ಇ-ಕಾಮರ್ಸ್ ವೆಬ್​ಸೈಟ್​ಗಳಲ್ಲಿ ಪ್ರಕಟ ಆಗುವ ನಕಲಿ ವಿಮರ್ಶೆಗಳಿಗೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಘೋಷಣೆ ಮಾಡಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಈ ಚೌಕಟ್ಟನ್ನು ರೂಪಿಸುವ ಬಗ್ಗೆ ಹೇಳಲಾಗಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಜತೆಗೆ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ವರ್ಚುವಲ್ ಸಭೆ ನಡೆದಿದೆ. ಇದರಲ್ಲಿ ವಿವಿಧ ಕ್ಷೇತ್ರದವರು ಸಹ ಭಾಗಿ ಆಗಿದ್ದಾರೆ. ವೆಬ್​ಸೈಟ್​ನಲ್ಲಿ ನಕಲಿ ವಿಮರ್ಶೆಗಳನ್ನು ಹಾಕುವುದರಿಂದ ಹೇಗೆ ಪರಿಣಾಮ ಆಗುತ್ತದೆ, ಆನ್​ಲೈನ್ ಉತ್ಪನ್ನಗಳು ಮತ್ತು ಸೇವೆಗಳ ಖರೀದಿಸುವಂತೆ ಹೇಗೆ ಇವುಗಳ ಬಳಕೆ ಆಗುತ್ತಿದೆ ಎಂಬುದರ ಚರ್ಚೆಯಾಗಿದೆ. ಆನ್​ಲೈನ್ ಗ್ರಾಹಕರು ಇ-ಕಾಮರ್ಸ್ (e-commerce)​ ವೆಬ್​ಸೈಟ್​ನಲ್ಲಿನ ಪ್ರಕಟವಾಗಿರುವ ಅಭಿಪ್ರಾಯಗಳ ಮೇಲೆ ಅವಲಂಬಿತರಾಗಿರುತ್ತಾರೆ.

ಏಕೆಂದರೆ ಭೌತಿಕವಾಗಿ ಆ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಪರಿಶೀಲನೆ ಮಾಡುವುದಕ್ಕೆ ಸಾಧ್ಯವಾಗಲ್ಲ. ಆ ಕಾರಣಕ್ಕೆ ಈಗಾಗಲೇ ಆ ಉತ್ಪನ್ನವನ್ನೋ ಸೇವೆಯನ್ನೋ ಪಡೆದಂಥ ಗ್ರಾಹಕರ ಅಭಿಪ್ರಾಯ ಮುಖ್ಯವಾಗಿ, ನಕಲಿ ವಿಮರ್ಶೆಗಳಿಗೆ ಬಲಿಪಶುವಾಗುವಂಥ ಪರಿಸ್ಥಿತಿ ಬಂದಿದೆ. ​ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿರುವಂತೆ, ಗ್ರಾಹಕ ವ್ಯವಹಾರಗಳ ಇಲಾಖೆಯು ಜಾಗತಿಕ ಮಟ್ಟದಲ್ಲಿ ಇರುವ ಅತ್ಯುತ್ತಮ ಅಭ್ಯಾಸಗಳು, ಭಾರತದಲ್ಲಿ ಇ-ಕಾಮರ್ಸ್​ಗಳು ಅನುಸರಿಸುತ್ತಿರುವ ಪದ್ಧತಿಯ ಬಗ್ಗೆ ಅಧ್ಯಯನ ಮಾಡಿದ ನಂತರ ಚೌಕಟ್ಟನ್ನು ರೂಪಿಸುವುದು.

“ವಿಮರ್ಶಕರ ದೃಢೀಕರಣವನ್ನು ಖಚಿತಪಡಿಸಿಕೊಳ್ಳುವ ಮೂಲಕ ಪತ್ತೆಹಚ್ಚುವಿಕೆ ಮತ್ತು ಪ್ಲಾಟ್​ಫಾರ್ಮ್ ಸಂಬಂಧಿತ ಹೊಣೆಗಾರಿಕೆ ಈ ಎರಡು ಇಲ್ಲಿ ಪ್ರಮುಖ ಸಮಸ್ಯೆಗಳಾಗಿವೆ. ಇ-ಕಾಮರ್ಸ್ ಕಂಪೆನಿಗಳು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಪ್ರದರ್ಶಿಸಲು “ಅತ್ಯಂತ ಸಂಬಂಧಿತ ವಿಮರ್ಶೆಗಳನ್ನು” ಹೇಗೆ ಆರಿಸಿಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು,” ಎಂದು DoCA ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಗ್ರಾಹಕರ ವೇದಿಕೆಗಳು, ಕಾನೂನು ವಿಶ್ವವಿದ್ಯಾನಿಲಯಗಳು, ವಕೀಲರು, ಎಫ್​ಐಸಿಸಿಐ, ಸಿಐಐ ಮತ್ತು ಗ್ರಾಹಕ ಹಕ್ಕುಗಳ ಕಾರ್ಯಕರ್ತರು, ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ವೆಬ್‌ಸೈಟ್‌ಗಳಲ್ಲಿ ನಕಲಿ ವಿಮರ್ಶೆಗಳ ಮಾರ್ಗಸೂಚಿಯನ್ನು ಚರ್ಚಿಸಿದ್ದಾರೆ. ಈ ಸಮಸ್ಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಅರ್ಹವಾಗಿದೆ ಮತ್ತು ನಕಲಿ ವಿಮರ್ಶೆಗಳನ್ನು ನಿಯಂತ್ರಿಸುವ ಸೂಕ್ತ ಚೌಕಟ್ಟನ್ನು ಅಭಿವೃದ್ಧಿಪಡಿಸಬಹುದು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಇ-ಕಾಮರ್ಸ್ ಕಂಪೆನಿಗಳ ಮಧ್ಯಸ್ಥಗಾರರು ತಾವು ನಕಲಿ ವಿಮರ್ಶೆಗಳನ್ನು ಮೇಲ್ವಿಚಾರಣೆ ಮಾಡುವ ಚೌಕಟ್ಟುಗಳನ್ನು ಹೊಂದಿದ್ದೇವೆ ಮತ್ತು ಈ ವಿಷಯದ ಕುರಿತು ಕಾನೂನು ಚೌಕಟ್ಟನ್ನು ಅಭಿವೃದ್ಧಿಪಡಿಸುವಲ್ಲಿ ಭಾಗವಹಿಸಲು ಸಂತೋಷಪಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Tata Neu: ಬರುತ್ತಿದೆ ಹೊಸ ಇ ಕಾಮರ್ಸ್ ತಾಣ: ಬೆಚ್ಚಿಬಿದ್ದ ಅಮೆಜಾನ್, ಫ್ಲಿಪ್​ಕಾರ್ಟ್

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?