ಸಣ್ಣ ಪ್ರಮಾಣದ ವರ್ತಕರಿಗೆ ಓಪನ್ ಟೆಕ್ನಾಲಜಿ ನೆಟ್ವರ್ಕ್ಗಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅದರ ಮೂಲಕ ಟ್ರೇಡರ್ಗಳು ಮತ್ತು ಬಳಕೆದಾರರು ಎಲ್ಲವನ್ನೂ ಖರೀದಿ ಹಾಗೂ ಮಾರಾಟ ಮಾಡಬಹುದು. ಮುಕ್ತವಾಗಿ ಸಂಪರ್ಕಕ್ಕೆ ಸಿಗುವ ಈ ಆನ್ಲೈನ್ ವ್ಯವಸ್ಥೆ ಹಿಂದಿರುವ ವ್ಯಕ್ತಿ ನಂದನ್ ನಿಲೇಕಣಿ (Nandan Nilekani). ಈ ನೆಟ್ವರ್ಕ್ಗೆ ದೊಡ್ಡದೊಡ್ಡ ಇ-ಕಾಮರ್ಸ್ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗೆ ಸವಾಲು ಹಾಕುವ ಸಾಮರ್ತ್ಯ ಇದೆ. ಇವುಗಳು ದೇಶದ ಆನ್ಲೈನ್ ರೀಟೇಲ್ ಮಾರುಕಟ್ಟೆಯ ಶೇ 80ರಷ್ಟು ಪಾಲು ಹೊಂದಿದೆ. “ಇದು (ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಆಲೋಚನೆ ಸಮಯ ಬಂದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಇರುವ ಸಣ್ಣ ಪ್ರಮಾಣದ ಮಾರಾಟಗಾರರಿಗೆ ಹೊಸದಾದ ಭಾರೀ ಬೆಳವಣಿಗೆಯ ಡಿಜಿಟಲ್ ಕಾಮರ್ಸ್ ಕ್ಷೇತ್ರಕ್ಕೆ ಸುಲಭ ಮಾರ್ಗ ತೋರುತ್ತದೆ,” ಎಂದಿದ್ದಾರೆ ಇನ್ಫೋಸಿಸ್ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ. ಈ ಹಿಂದೆ ಆಧಾರ್ ಬಯೋಮೆಟ್ರಿಕ್ ಐಡಿ ವ್ಯವಸ್ಥೆಗೆ ನಿಲೇಕಣಿ ಸಹಾಯ ಮಾಡಿದ್ದರು.
ಸವಾಲುಗಳ ಹೊರತಾಗಿಯೂ ಈ ಕಾರ್ಯಕ್ಕೆ ನಿಲೇಕಣಿ ಸೂಕ್ತವಾದ ವ್ಯಕ್ತಿ ಎಂದು ಪಾಲೊ ಆಲ್ಟೊ ಮೂಲದ ಜಂಟಿ ಬಂಡವಾಳ ಸಂಸ್ಥೆಯ ಜನರಲ್ ಕ್ಯಾಟಲಿಸ್ಟ್ ಮ್ಯಾನೇಜಿಂಗ್ ಪಾರ್ಟನರ್ ಹೇಮಂತ್ ತನೇಜಾ ಹೇಳಿರುವುದಾಗಿ ಬ್ಲೂಮ್ಬರ್ಗ್ ವರದಿ ಮಾಡಿದೆ.
ಏನಿದು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್? ಒಎನ್ಡಿಸಿ ಎಂಬುದು ಓಪನ್ ಟೆಕ್ನಾಲಜಿ ನೆಟ್ವರ್ಕ್. ಅದು ಓಪನ್ ಪ್ರೋಟೊಕಾಲ್ ಮೇಲೆ ಆಧಾರ ಪಟ್ಟಿರುತ್ತದೆ. ಮತ್ತು ಸ್ಥಳೀಯ ವಾಣಿಜ್ಯದ ಎಲ್ಲ ಸೆಗ್ಮೆಂಟ್ಗಳು, ಅಂದರೆ ಸಾಗಣೆ, ದಿನಸಿ, ಆಹಾರ ಆರ್ಡರ್ ಮತ್ತು ಡೆಲಿವರಿ, ಹೋಟೆಲ್ ಬುಕ್ಕಿಂಗ್ ಹಾಗೂ ಪ್ರಯಾಣ ಮತ್ತಿತರವುಗಳನ್ನು ಸಕ್ರಿಯಗೊಳಿಸುತ್ತದೆ. ಅದು ಕೂಡ ಯಾವುದೇ ನೆಟ್ವರ್ಕ್ ಸಕ್ರಿಯಗೊಂಡ ಅಪ್ಲಿಕೇಷನ್ ಅನ್ವೇಷಿಸುತ್ತದೆ ಮತ್ತು ತೊಡಗಿಕೊಳ್ಳುತ್ತದೆ. ಈ ಪ್ಲಾಟ್ಫಾರ್ಮ್ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು, ಡಿಜಿಟಲ್ ಪಾರಮ್ಯವನ್ನು ಕಡಿತಗೊಳಿಸುತ್ತದೆ. ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಹಾಗೂ ಸಣ್ಣ ಪ್ರಮಾಣದ ವ್ಯವಹಾರಸ್ಥರನ್ನು ಬೆಂಬಲಿಸುತ್ತದೆ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಂದಹಾಗೆ ಇದು ವಾಣಿಜ್ಯ ಇಲಾಖೆ ಅಡಿಯಲ್ಲಿ ಬರುವ ಡಿಪಾರ್ಟ್ಮೆಂಟ್ ಫಾರ್ ಪ್ರಮೋಷನ್ ಆಫ್ ಇಂಡಸ್ಟ್ರಿ ಅಂಡ್ ಇಂಟರ್ನಲ್ ಟ್ರೇಡ್ (DPIIT) ಉಪಕ್ರಮ ಆಗಿದೆ.
ಈ ರೀತಿಯದ್ದು ಇದೇ ಮೊದಲಾಗಿದೆ. ಒಎನ್ಡಿಸಿಯು ಸಣ್ಣ ವರ್ತಕರು ಮತ್ತು ವ್ಯಾಪಾರಿಗಳಿಗೆ ಆರ್ಥಿಕತೆಯ ಗಾತ್ರ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಶೀಘ್ರದಲ್ಲೇ ಈ ನೆಟ್ವರ್ಕ್ ಐದು ನಗರಗಳಲ್ಲಿ- ದೆಹಲಿ, ಬೆಂಗಳೂರು, ಕೊಯಮತ್ತೂರು, ಭೋಪಾಲ್ ಮತ್ತು ಶಿಲ್ಲಾಂಗ್ನಲ್ಲಿ ಬಳಕೆದಾರರನ್ನು ಆರಿಸಿಕೊಳ್ಳುವುದಕ್ಕೆ ಜಾರಿಗೆ ಬರಲಿದೆ.
ಇದನ್ನೂ ಓದಿ: Account Aggregator Framework: ಫೋನ್ ಬಿಲ್ನ ಸರಿಯಾದ ಪಾವತಿ ಸಹ ಸಾಲ ಸಿಗಲು ನೆರವಾಗುತ್ತದೆ ಎಂದಿದ್ದೇಕೆ ನಿಲೇಕಣಿ