Reliance: 25 ಸಾವಿರ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಮೊದಲ ಭಾರತೀಯ ಕಂಪೆನಿ ಎನಿಸಿಕೊಂಡ ರಿಲಯನ್ಸ್
ಭಾರತೀಯ ಕಂಪೆನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು ಮೊದಲ ಬಾರಿಗೆ 25000 ಕೋಟಿ ಅಮೆರಿಕನ್ ಡಾಲರ್ ದಾಟಿದೆ.
ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮೊದಲ ಬಾರಿಗೆ 25,000 ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯದ ಮೈಲುಗಲ್ಲನ್ನು ದಾಟಿತು ಮತ್ತು ಈ ಕಂಪೆನಿ ಷೇರು ಬೆಲೆ ಏಪ್ರಿಲ್ 28ರಂದು ದಾಖಲೆಯ ಎತ್ತರವನ್ನು ತಲುಪಿತು. ಈ ಸ್ಟಾಕ್ 19.20 ಲಕ್ಷ ಕೋಟಿ ರೂಪಾಯಿ ಅಥವಾ 250.7 ಶತಕೋಟಿ ಯುಎಸ್ಡಿಯಲ್ಲಿ ವಹಿವಾಟು ನಡೆಸಿದ್ದು, ಇದು ಭಾರತದಲ್ಲಿ ಲಿಸ್ಟ್ ಮಾಡಲಾದ ಕಂಪೆನಿಗಳಲ್ಲಿ ಅತ್ಯಧಿಕವಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.02ರ ಹೊತ್ತಿಗೆ ಶೇ 1.93ರಷ್ಟು ಏರಿಕೆಯಾಗಿ, 2,831.95 ರೂಪಾಯಿ ತಲುಪಿತ್ತು. 2021ರ ಅಕ್ಟೋಬರ್ನಿಂದ ರಿಲಯನ್ಸ್ ಸುಮಾರು ಶೇ 18ರಷ್ಟು ಇಳಿಕೆ ಕಂಡಿದೆ. ಮಾರ್ಚ್ 8ರ ಮುಕ್ತಾಯದಿಂದ ಈಚೆಗೆ ಬಲವನ್ನು ಪಡೆದುಕೊಂಡಿದ್ದು, ಶೇಕಡಾ 27ರಷ್ಟು ಏರಿಕೆ ಕಂಡು 2,838.5 ರೂಪಾಯಿಗಳ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಹಾಗೂ ಮಾರುಕಟ್ಟೆಗೆ ಬೆಂಬಲವನ್ನು ನೀಡುವ ಪ್ರಮುಖ ಷೇರುಗಳಲ್ಲಿ ಒಂದಾಗಿದೆ. ಅದೇ ಅವಧಿಯಲ್ಲಿ, ನಿಫ್ಟಿ 50 ಶೇಕಡಾ 8ಕ್ಕಿಂತ ಹೆಚ್ಚು ಮೇಲೇರಿತು.
ದಿನದ ಕೊನೆಗೆ ರಿಲಯನ್ಸ್ ಮಾರುಕಟ್ಟೆ ಬಂಡವಾಳ ಮೌಲ್ಯ 19,07,373 ಕೋಟಿ ರೂಪಾಯಿಗೆ ಮುಕ್ತಾಯ ಆಗಿದೆ. ಈಗ ರಿಲಯನ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮಧ್ಯದ ಅಂತರವು ಮತ್ತಷ್ಟು ವಿಸ್ತರಿಸಿದೆ ಮತ್ತು ಸುಮಾರು 19 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಸದ್ಯಕ್ಕೆ ಟಿಸಿಎಸ್ ಮೌಲ್ಯವು 13.07 ಲಕ್ಷ ಕೋಟಿ ರೂಪಾಯಿ ಆಗಿದೆ. ರಿಲಯನ್ಸ್ ಮತ್ತು ಟಿಸಿಎಸ್ ಮಧ್ಯದ ಅಂತರವು 6 ಲಕ್ಷ ಕೋಟಿ ರೂಪಾಯಿ ಇದೆ. ಸೆಪ್ಟೆಂಬರ್ 11, 2020ರಂದು ರಿಲಯನ್ಸ್ ಸುಮಾರು 15 ಲಕ್ಷ ಕೋಟಿ ರೂಪಾಯಿಗಳಲ್ಲಿ ಮತ್ತು ಟಿಸಿಎಸ್ ಸುಮಾರು 9 ಲಕ್ಷ ಕೋಟಿ ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದ್ದಾಗ ಇಂತಹ ಅಂತರವು ಕಂಡುಬಂದಿದೆ. ರಿಲಯನ್ಸ್‌ನಲ್ಲಿನ ಏರಿಕೆಯು ಮಾರ್ಚ್ 2022ರ ತ್ರೈಮಾಸಿಕ ಗಳಿಕೆಗಿಂತ ಮುಂಚಿತವಾಗಿ ಬರುತ್ತದೆ, ಇದು ಆರೋಗ್ಯಕರ ರಿಫೈನಿಂಗ್ ಮಾರ್ಜಿನ್‌ನಿಂದಾಗಿ ತುಂಬಾ ಪ್ರಬಲವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಟೆಲಿಕಾಂ ಮತ್ತು ರೀಟೇಲ್ ವ್ಯಾಪಾರವು ತ್ರೈಮಾಸಿಕ ಸಂಖ್ಯೆಯನ್ನು ಹೆಚ್ಚಿಸಬಹುದು.
ಅಂತರರಾಷ್ಟ್ರೀಯ ಮಾನದಂಡ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಮಾರ್ಚ್ 2022ರ ತ್ರೈಮಾಸಿಕಕ್ಕೆ ಬ್ಯಾರೆಲ್‌ಗೆ ಯುಎಸ್ಡಿ 108ಕ್ಕೆ ಮುಕ್ತಾಯವಾಗಿದ್ದು, 2021ರ ಕೊನೆಯ ದಿನದಿಂದ ಶೇಕಡಾ 36ರಷ್ಟು ಏರಿಕೆಯಾಗಿದೆ. “ಇದಕ್ಕೆ ವಿರುದ್ಧವಾಗಿ ಸಿಂಗಾಪೂರದ ಒಟ್ಟು ರಿಫೈನಿಂಗ್ ಮಾರ್ಜಿನ್ (GRM) ಶೇ 66ರೊಂದಿಗೆ ಮೇಲ್ಮಟ್ಟದ ಟ್ರೆಂಡ್ನಲ್ಲಿದ್ದರೆ, ಡೀಸೆಲ್‌ನಲ್ಲಿ ಮತ್ತು ಎಟಿಎಫ್ ಶೇ 59ರಷ್ಟಿದೆ,” ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ. ಇದು 2022ರ ಮಾರ್ಚ್ಗೆ ಕೊನೆಗೊಂಡ ತ್ರೈಮಾಸಿಕದ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 32.5ರಷ್ಟು ಮತ್ತು ಆದಾಯದಲ್ಲಿ ಶೇ 55ರಷ್ಟು ಹೆಚ್ಚಳನ್ನು ನಿರೀಕ್ಷಿಸುತ್ತದೆ.
ಯೆಸ್ ಸೆಕ್ಯೂರಿಟೀಸ್ ಸಹ ರಿಲಯನ್ಸ್ ಬಲವಾದ ರಿಫೈನಿಂಗ್ ಮಾರ್ಜಿನ್‌ಗಳ ಖಾತೆಯಲ್ಲಿ ಗಳಿಕೆ ಸುಧಾರಣೆಯನ್ನು ವರದಿ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದು, ದುರ್ಬಲ ಪೆಟ್ರೋಕೆಮಿಕಲ್ ಮಾರ್ಜಿನ್‌ಗಳಿಂದ ಭಾಗಶಃ ಸರಿದೂಗಿಸಲಾಗುತ್ತದೆ. “ಟೆಲಿಕಾಂ ವಿಭಾಗವು ಆವರೇಜ್ ರೆವೆನ್ಯೂ ಪರ್ ಯೂಸರ್ (ARPU) ಸಾಧ್ಯತೆ ಮತ್ತು ನೆಟ್‌ವರ್ಕ್‌ನಲ್ಲಿನ ಬೆಳವಣಿಗೆಯಿಂದ ನಡೆಸುವ ಮಾರಾಟಕ್ಕೆ ರೀಟೇಲ್ ವಿಭಾಗದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.” ಪೂರ್ಣ ವರ್ಷದಲ್ಲಿ (FY22) ಲಾಭವು ಶೇ 55ರಷ್ಟು ಮತ್ತು ಆದಾಯವು ಶೇ 35ರಷ್ಟು ಬೆಳೆಯಬಹುದು.
ಇದನ್ನೂ ಓದಿ: Reliance Swadesh Stores: ರಿಲಯನ್ಸ್ ರಿಟೇಲ್ ನಲ್ಲಿ ಸ್ವದೇಶ್ ಸ್ಟೋರ್‌ಗಳು -ದೇಶೀಯ ಉತ್ಪನ್ನಗಳಿಗಾಗಿ ವಿಶೇಷ ಮಳಿಗೆಗಳು!