Tesla EV Cars in India: ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಟ್ವಿಟ್ಟರ್ನಲ್ಲಿಯೇ ಉತ್ತರ ನೀಡಿದ ಎಲಾನ್ ಮಸ್ಕ್, ಹೇಳಿದ್ದೇನು ಗೊತ್ತಾ!?
Elon Musk: ಟ್ವಿಟ್ಟರ್ ಖರೀದಿಯಲ್ಲಿ ಆಸಕ್ತಿ ತೋರಿರುವ ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಭಾರತದಲ್ಲಿ ಪ್ರತಿಷ್ಠಿತ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಟ್ವಿಟ್ಟರ್ನಲ್ಲಿಯೇ ಮಹತ್ವದ ಉತ್ತರ ನೀಡಿದ್ದಾರೆ. ತನ್ಮೂಲಕ ಅಪ್ಪಟ ವ್ಯಾಪಾರಿ ಮನೋಭಾವದ ತಾವು ಎಷ್ಟು ನಿಷ್ಠುರವಾದಿ ಮತ್ತು ಲೆಕ್ಕಾಚಾರದ ಮನುಷ್ಯ ಎಂಬುದನ್ನು ಸಾಬೀತುಮಾಡಿದ್ದಾರೆ.
ಟ್ವಿಟ್ಟರ್ ಖರೀದಿಯಲ್ಲಿ ಆಸಕ್ತಿ ತೋರಿರುವ ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಭಾರತದಲ್ಲಿ ಪ್ರತಿಷ್ಠಿತ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಟ್ವಿಟ್ಟರ್ನಲ್ಲಿಯೇ ಮಹತ್ವದ ಉತ್ತರ ನೀಡಿದ್ದಾರೆ. ತನ್ಮೂಲಕ ಅಪ್ಪಟ ವ್ಯಾಪಾರಿ ಮನೋಭಾವದ ತಾವು ಎಷ್ಟು ನಿಷ್ಠುರವಾದಿ ಮತ್ತು ಲೆಕ್ಕಾಚಾರದ ಮನುಷ್ಯ ಎಂಬುದನ್ನು ಸಾಬೀತುಮಾಡಿದ್ದಾರೆ.
ಎಲೆಕ್ಟ್ರಿಕ್ ಕಾರು ಗಳ ಬಗ್ಗೆ ಉತ್ಸಾಹ ಹೊಂದಿರುವ ಭಾರತದ ಯುವಕನೊಬ್ಬ ಭಾರತದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆ ಯಾವಾಗ? ಎಂದು ಎಲಾನ್ ಮಸ್ಕ್ ಗೆ ಟ್ಯಾಗ್ ಮಾಡಿ ಕೇಳಿದ್ದ. ಅದಕ್ಕೆ ಥಟ್ಟನೆ ಉತ್ತರಿಸಿರುವ ಎಲಾನ್ ಮಸ್ಕ್ ಮೊದಲು ವ್ಯಾಪಾರ, ಆ ಮೇಲೆ ಉತ್ಪಾದನಾ ಘಟಕ ಸ್ಥಾಪನೆಯ ಮಾತು ಎಂದಿದ್ದಾರೆ.
ಈ ಪ್ರಶ್ನೆಗೆ ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿದ ಎಲಾನ್ ಮಸ್ಕ್, ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು (ಇವಿ) ಉತ್ಪಾದನಾ ಕಂಪನಿಯು ಭಾರತದಲ್ಲಿ ಮೊದಲು ತಮ್ಮ ಟೆಸ್ಲಾ ಕಾರುಗಳ ಮಾರಾಟ ಮತ್ತು ಸೇವೆ ಒದಗಿಸಲು ಅವಕಾಶ ನೀಡದ ಹೊರತು, ಎಲ್ಲಿಯೂ ಟೆಸ್ಲಾ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
What about Tesla ? Is Tesla manufacturing a plant in India in future?
— Madhu sudhan V (@madhusudhanv96) May 27, 2022
ಈ ಹಿಂದೆಯೂ ಇದೇ ನಿಲುವನ್ನು ಸ್ಪಷ್ಟೋಕ್ತಿಯಲ್ಲಿ ಹೇಳಿದ್ದ ಎಲಾನ್ ಮಸ್ಕ್, ಭಾರತ ದೇಶದಲ್ಲಿ ಆಮದು ವಾಹನಗಳ ಮಾರಾಟಕ್ಕೆ ಟೆಸ್ಲಾ ಯಶಸ್ವಿಯಾದರೆ ಅಲ್ಲಿ ತಾವು ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನೂ ಸ್ಥಾಪಿಸಬಹುದು ಎಂದು ಹೇಳಿದ್ದರು. ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾರುಗಳ ಆಮದು ಸುಂಕ ಅತ್ಯಧಿಕವಾಗಿದೆ ಎಂಬ ಕೂಗು/ಕೊರಗು ಸಹ ಎಲಾನ್ ಮಸ್ಕ್ ಅವರದ್ದಾಗಿದೆ.
ಕಳೆದ ತಿಂಗಳಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ಅದಕ್ಕೆ ಅನುಮತಿನ ನೀಡಲು ‘ಯಾವುದೇ ಸಮಸ್ಯೆ ಇಲ್ಲ’. ಆದರೆ, ಕಂಪನಿಯು ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದರು.
ಅದಕ್ಕೂ ಮುನ್ನ, 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತನ್ನ ಆರ್ ಅಂಡ್ ಘಟಕ ಸ್ಥಾಪನೆ ಬಗ್ಗೆ ಎಲಾನ್ ಮಸ್ಕ್ ಆಸಕ್ತಿ ತೋರಿದ್ದರು. (Tesla Negotiating with Karnataka Government to Establish R&D Center in Bangalore)
Tesla Negotiating with Karnataka Government to Establish R&D Center in Bangalore https://t.co/ukoYERrKiC
— Tesmanian.com (@Tesmanian_com) September 21, 2020
ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ:
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sat, 28 May 22