2000 Rupees Currency Notes: ಇಳಿಯುತ್ತಾ ಬಂತು 2000 ರೂಪಾಯಿ ಮುಖಬೆಲೆಯ ಚಲಾವಣೆ ಪ್ರಮಾಣ; ಆರ್ಬಿಐ ಏನು ಹೇಳುತ್ತದೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಡೇಟಾ ಪ್ರಕಾರ, 2000 ಮುಖಬೆಲೆಯ ನೋಟುಗಳ ಚಲಾವಣೆ ಪ್ರಮಾಣ ಕಡಿಮೆ ಆಗುತ್ತಾ ಬರುತ್ತಿದೆ. ಆ ಬಗ್ಗೆ ವಿವರ ಇಲ್ಲಿದೆ.
ಕಳೆದ ಕೆಲವು ವರ್ಷಗಳಿಂದ 2,000 ರೂಪಾಯಿಯ ಯಾವುದೇ ಹೊಸ ನೋಟುಗಳನ್ನು ಮುದ್ರಿಸದ ಕಾರಣ ಭಾರತದ ಅತಿ ಹೆಚ್ಚು ಮುಖಬೆಲೆಯ ಕರೆನ್ಸಿ (currency) ನೋಟಿನ ಪಾಲು ಕಡಿಮೆಯಾಗುತ್ತಲೇ ಇದೆ. ಚಲಾವಣೆಯಲ್ಲಿ ಇರುವ ರೂ. 2,000 ನೋಟುಗಳ ಮೌಲ್ಯವು ಒಟ್ಟು ಮೊತ್ತದ ಶೇ 13.8ಕ್ಕೆ ಇಳಿದಿದ್ದು, ವರ್ಷದ ಹಿಂದೆ ಇದು ಶೇ 17.3 ಇತ್ತು, ಎಂದು ಹಣಕಾಸು ವರ್ಷ 2022ರ ಆರ್ಬಿಐ ವಾರ್ಷಿಕ ವರದಿ ತೋರಿಸಿದೆ. ಹಣಕಾಸು ವರ್ಷ 2021ರಲ್ಲಿ ಶೇ 2 ಮತ್ತು ಅದಕ್ಕಿಂತ ಹಿಂದಿನ ವರ್ಷ ಶೇ 2.4ಕ್ಕೆ ಹೋಲಿಸಿದರೆ 2,000 ರೂಪಾಯಿ ನೋಟುಗಳು ಈಗ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಪೈಕಿ ಶೇ 1.6ರಷ್ಟಿದೆ. ಮೌಲ್ಯದ ಪರಿಭಾಷೆಯಲ್ಲಿ ರೂ. 500 ಮತ್ತು ರೂ. 2000 ಬ್ಯಾಂಕ್‌ನೋಟುಗಳ ಪಾಲು ಮಾರ್ಚ್ 31, 2022ರಂತೆ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯದ ಶೇ 87.1ರಷ್ಟಿದ್ದು, ಮಾರ್ಚ್ 31, 2021ರಲ್ಲಿ ಶೇ 85.7ರಷ್ಟಿತ್ತು.
ಚಲಾವಣೆಯಲ್ಲಿ ಇರುವ ನೋಟುಗಳ ಮೌಲ್ಯ ಮತ್ತು ಪ್ರಮಾಣವು 2020-21ರಲ್ಲಿ ಕ್ರಮವಾಗಿ ಶೇ 16.8 ಮತ್ತು ಶೇ 7.2ಕ್ಕೆ ಹೋಲಿಸಿದರೆ 2021-22ರಲ್ಲಿ ಕ್ರಮವಾಗಿ ಶೇ 9.9 ಮತ್ತು ಶೇ 5ರಷ್ಟು ಹೆಚ್ಚಾಗಿದೆ. ಪರಿಮಾಣದ ಪರಿಭಾಷೆಯಲ್ಲಿ, 500 ಮುಖಬೆಲೆಯು ಶೇ 34.9ರಲ್ಲಿ ಅತ್ಯಧಿಕ ಪಾಲನ್ನು ಹೊಂದಿದ್ದರೆ, ಆ ನಂತರ ರೂ. 10ರ ಮುಖಬೆಲೆಯ ಬ್ಯಾಂಕ್‌ನೋಟುಗಳು, ಇದು ಮಾರ್ಚ್ 31, 2022ರಂತೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್‌ನೋಟುಗಳ ಶೇ 21.3ರಷ್ಟಿದೆ ಎಂದು ಆರ್ಬಿಐ ವರದಿಯಲ್ಲಿ ಸೇರಿಸಲಾಗಿದೆ.
“ವರ್ಷದಲ್ಲಿ ಕರೆನ್ಸಿ ನಿರ್ವಹಣೆಯ ಗಮನವು ಚಲಾವಣೆಯಲ್ಲಿ ಸಾಕಷ್ಟು ಪ್ರಮಾಣದ ಶುದ್ಧ ನೋಟುಗಳನ್ನು ಲಭ್ಯವಾಗುವಂತೆ ಮಾಡುವುದನ್ನು ಮುಂದುವರೆಸಿದೆ. ವಿಶೇಷವಾಗಿ ಕೊವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕರೆನ್ಸಿ ನಿರ್ವಹಣಾ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ನೋಟುಗಳ ಸಾರ್ವಜನಿಕ ಬಳಕೆ ಟ್ರೆಂಡ್ಗಳು ಮತ್ತು ಆದ್ಯತೆಗಳನ್ನು ಅಳೆಯುವ ಪ್ರಯತ್ನವನ್ನು ರಿಸರ್ವ್ ಬ್ಯಾಂಕ್ ಮಾಡಿದೆ,” ಎಂದು ಕೇಂದ್ರ ಬ್ಯಾಂಕ್ ಕರೆನ್ಸಿ ಚಲಾವಣೆಯಲ್ಲಿರುವ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಕಪ್ಪುಹಣ ಮತ್ತು ನಕಲಿ ಕರೆನ್ಸಿಗಳನ್ನು ತಡೆಯುವ ಪ್ರಯತ್ನದಲ್ಲಿ ಸರ್ಕಾರ ರೂ. 500 ಮತ್ತು ರೂ. 1,000 ಮೌಲ್ಯದ ನೋಟುಗಳನ್ನು ಹಿಂಪಡೆದ ಕೂಡಲೇ ರೂ. 2,000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016ರಲ್ಲಿ ಪರಿಚಯಿಸಲಾಯಿತು. ಹೊಸ ರೂ. 500 ನೋಟು ಮುದ್ರಣವಾಗುತ್ತಿದ್ದರೂ ರೂ. 1,000 ಕರೆನ್ಸಿ ನೋಟುಗಳನ್ನು ಸ್ಥಗಿತಗೊಳಿಸಲಾಗಿದೆ. ಚಲಾವಣೆಯಲ್ಲಿರುವ ಕರೆನ್ಸಿ (CiC) ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳನ್ನು ಒಳಗೊಂಡಿದೆ. ಸದ್ಯಕ್ಕೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುತ್ತದೆ. ಕರೆನ್ಸಿಯ ವಿತರಣೆ (ಬ್ಯಾಂಕ್‌ನೋಟುಗಳು ಮತ್ತು ನಾಣ್ಯಗಳೆರಡೂ) ಮತ್ತು ಅವುಗಳ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಆರ್ಬಿಐ ತನ್ನ ವಿತರಣಾ ಕಚೇರಿಗಳು, ಕರೆನ್ಸಿ ಚೆಸ್ಟ್‌ಗಳು ಮತ್ತು ದೇಶದಾದ್ಯಂತ ಹರಡಿರುವ ಸಣ್ಣ ನಾಣ್ಯ ಡಿಪೋಗಳ ಮೂಲಕ ನಿರ್ವಹಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತೀಯ ಕರೆನ್ಸಿ ನೋಟುಗಳಲ್ಲಿ ಯಾವೆಲ್ಲಾ ಭಾಷೆಗಳಲ್ಲಿ ಮಾಹಿತಿ ನೀಡಿರುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ