ವಿಧಾನಪರಿಷತ್ ಸದಸ್ಯರಾಗಿ ತುಳಸಿ ಮುನಿರಾಜುಗೌಡ ಅವಿರೋಧ ಆಯ್ಕೆ

|

Updated on: Mar 08, 2021 | 4:34 PM

ವಿಧಾನಪರಿಷತ್ ಸದಸ್ಯರಾಗಿ ತುಳಸಿ ಮುನಿರಾಜುಗೌಡ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್​ಗೆ ತುಳಸಿ ಮುನಿರಾಜುಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರ ನಿಧನದಿಂದ ತೆರವಾಗಿದ್ದ ಸ್ಥಾ‌ನಕ್ಕೆ ಮುನಿರಾಜುಗೌಡ ಆಯ್ಕೆಯಾಗಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿ ತುಳಸಿ ಮುನಿರಾಜುಗೌಡ ಅವಿರೋಧ ಆಯ್ಕೆ
ತುಳಸಿ ಮುನಿರಾಜುಗೌಡ
Follow us on

ಬೆಂಗಳೂರು: ವಿಧಾನಪರಿಷತ್ ಸದಸ್ಯರಾಗಿ ತುಳಸಿ ಮುನಿರಾಜುಗೌಡ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್​ಗೆ ತುಳಸಿ ಮುನಿರಾಜುಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರ ನಿಧನದಿಂದ ತೆರವಾಗಿದ್ದ ಸ್ಥಾ‌ನಕ್ಕೆ ಮುನಿರಾಜುಗೌಡ ಆಯ್ಕೆಯಾಗಿದ್ದಾರೆ.

ಸದ್ಯ, ಪರಿಷತ್​ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ತುಳಸಿ ಮುನಿರಾಜು ಗೌಡ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಂದ ಆಯ್ಕೆಯ ಪ್ರಮಾಣ ಪತ್ರ ಸ್ವೀಕರಿಸಿದರು. ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆದಿದ್ದ ಉಪಚುನಾವಣೆ ಇದಾಗಿತ್ತು. ಎಸ್.ಎಲ್. ಧರ್ಮೇಗೌಡ ನಿಧನದಿಂದ ತೆರವಾಗಿದ್ದ ಸ್ಥಾ‌ನಕ್ಕೆ ಉಪಚುನಾವಣೆ ನಡೆಯಿತು.

ಅಂದ ಹಾಗೆ, ತುಳಸಿ ಮುನಿರಾಜುಗೌಡ ಈ ಹಿಂದೆ ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್​ ಆಗ ಕಾಂಗ್ರೆಸ್​ನಿಂದ ಪಕ್ಷಕ್ಕೆ ಆಗಮಿಸಿದ್ದ ಮುನಿರತ್ನಗೆ ಟಿಕೆಟ್​ ನೀಡಿತ್ತು. ಇದಲ್ಲದೆ, ಮುನಿರಾಜುಗೌಡ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಕೋರ್ಟ್​ಗೆ ಚುನಾವಣಾ ತಕರಾರು ಅರ್ಜಿ ಸಹ ಸಲ್ಲಿಸಿದ್ದರು.

ಇದನ್ನೂ ಓದಿ: ತಡರಾತ್ರಿ ಮೂತ್ರ ವಿಸರ್ಜನೆಗೆ ತೆರಳಿದ ವೃದ್ಧ ಮೇಲ್ಸೇತುವೆ ಮೇಲಿಂದ ಬಿದ್ದು ಸಾವು