ಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು, ಸಂಖ್ಯಾಬಲ ಇಲ್ಲದಿದ್ದರು ಕೂಡಾ ಅಧಿಕಾರದ ಗದ್ದುಗೆ ಏರಲು ಕಸರತ್ತು

|

Updated on: Dec 06, 2020 | 3:27 PM

ಡಿಸಿಸಿ ಬ್ಯಾಂಕ್ (ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್) ಇತ್ತೀಚೆಗೆ ಹಳಿಬಿಟ್ಟು ನಡೆದಿದ್ದೆ ಹೆಚ್ಚು. ಹೀಗಾಗಿ ಬ್ಯಾಂಕ್ ರೈತಪರ ಕೆಲಸಗಳಿಗಿಂತ ಬೇರೆ ಕಾರಣಗಳಿಗೆ ಸುದ್ದಿಯಾಗಿತ್ತು. ಇದೀಗ ಮತ್ತೆ ಬ್ಯಾಂಕ್​ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಬಿರುಸಿನ ಸ್ಪರ್ಧೆ ಪ್ರಾರಂಭವಾಗಿದೆ.

ಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು, ಸಂಖ್ಯಾಬಲ ಇಲ್ಲದಿದ್ದರು ಕೂಡಾ ಅಧಿಕಾರದ ಗದ್ದುಗೆ ಏರಲು ಕಸರತ್ತು
ಡಿಸಿಸಿ ಬ್ಯಾಂಕ್
Follow us on

ಕಲಬುರಗಿ: ನಗರದಲ್ಲಿರುವ ಡಿಸಿಸಿ ಬ್ಯಾಂಕ್ (ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್) ಇತ್ತೀಚೆಗೆ ಹಳಿಬಿಟ್ಟು ನಡೆದಿದ್ದೆ ಹೆಚ್ಚು. ಹೀಗಾಗಿ ಬ್ಯಾಂಕ್ ರೈತಪರ ಕೆಲಸಗಳಿಗಿಂತ ಬೇರೆ ಕಾರಣಗಳಿಗೆ ಸುದ್ದಿಯಾಗಿತ್ತು. ಇದೀಗ ಮತ್ತೆ ಬ್ಯಾಂಕ್​ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಬಿರುಸಿನ ಸ್ಪರ್ಧೆ ಪ್ರಾರಂಭವಾಗಿದೆ.

ಕಳೆದ ವಾರ ಕಲಬುರಗಿ ಡಿಸಿಸಿ ಬ್ಯಾಂಕ್​ನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಹಿಂದೆ ನಡೆದ ಅನೇಕ ಚುನಾವಣೆಗಳ ನಿರ್ದೇಶಕ ಸ್ಥಾನಗಳಿಗಿಂತ ಈ ಬಾರಿ ಬ್ಯಾಂಕ್​ನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ತೀರ್ವ ಬಿರುಸಿನಿಂದ ಕೂಡಿತ್ತು. ಇದೀಗ ಬ್ಯಾಂಕ್​ನ ಅಧ್ಯಕ್ಷರಾಗಲು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ತೆರೆಮೆರೆಯ ಕಸರತ್ತು ಪ್ರಾರಂಭವಾಗಿದೆ. ವಿಶೇಷವೆಂದರೆ ಸಂಖ್ಯಾಬಲ ಇಲ್ಲದಿದ್ದರೂ ಕೂಡಾ ಬಿಜೆಪಿ ಬೆಂಬಲಿಗರು ಇದೀಗ ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ.

ಸಂಖ್ಯಾಬಲದಿಂದ ಗದ್ದುಗೆ ಏರುತ್ತಾ ಕಾಂಗ್ರೆಸ್:
ಸದ್ಯಕ್ಕೆ ವಿಜೇತ ನಿರ್ದೇಶಕರ ಸಂಖ್ಯೆ ಗಮನಿಸಿದರೆ ಕಾಂಗ್ರೆಸ್‌ ಬೆಂಬಲಿತರಿಗೆ ಸ್ಪಷ್ಟ ಬಹುಮತವಿದೆ. ಕಳೆದ ನವಂಬರ್ 29 ರಂದು ನಡೆದಿದ್ದ ಚುನಾವಣೆಯಲ್ಲಿ 13 ನಿರ್ದೇಶಕರ ಪೈಕಿ 9 ಬೆಂಬಲಿತರು ಗೆದ್ದಿದ್ದರಿಂದ ಕಾಂಗ್ರೆಸ್ ಬಹುಮತ ಪಡೆದುಕೊಂಡಿತ್ತು. ಬಿಜೆಪಿ ಬೆಂಬಲಿತರು ಕೇವಲ ನಾಲ್ವರು ಮಾತ್ರ ಜಯ ಗಳಿಸಿದ್ದರು. ಹೀಗಾಗಿ ಮೇಲ್ನೋಟಕ್ಕೆ ಕಾಂಗ್ರೆಸ್ ಬೆಂಬಲಿತರು ಗದ್ದುಗೆ ಏರುವುದು ಪಕ್ಕಾ ಎನಿಸಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಡಿಸೆಂಬರ್ 11 ರಂದು ನಡೆಸಲು ಚುನಾವಣಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ರಾಮಚಂದ್ರ ಗಡದ ಘೋಷಣೆ ಮಾಡುತ್ತಿದ್ದಂತೆ ಚಟುವಟಿಕೆ ಗರಿಗೆದರಿವೆ. ಕಾಂಗ್ರೆಸ್ ಬೆಂಬಲಿತರು ಬಹುಮತ ಹೊಂದಿದ್ದರಿಂದ ನಿರುಮ್ಮಳರಾಗಿದ್ದರು. ಆದರೆ ಬಿಜೆಪಿ ನಾಯಕರು ಹೇಗಾದರೂ ಸರಿ, ತನ್ನ ತೆಕ್ಕೆಗೆ ಬ್ಯಾಂಕ್ ತೆಗೆದುಕೊಳ್ಳಬೇಕು ಅಂತ ಕಾರ್ಯತಂತ್ರ ರೂಪಿಸಲು ಪ್ರಾರಂಭಿಸಿದ್ದರಿಂದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಡವಡವ ಪ್ರಾರಂಭವಾಗಿದೆ. ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿದೆ. ಈ ಭಾರಿ ಅದನ್ನು ಮುರಿಯುವ ಯೋಚನೆ ಬಿಜೆಪಿ ನಾಯಕರಲ್ಲಿದೆ.

ಸಹಕಾರ ಕ್ಷೇತ್ರದಲ್ಲೂ ಆಪರೇಷನ್ ಕಮಲದ ಕರಿಛಾಯೆ:
ಐದು ವರ್ಷದ ಅವಧಿಗೆ 13 ಚುನಾಯಿತ ನಿರ್ದೇಶಕರು ಸೇರಿ ಸರ್ಕಾರದ ನಾಮ ನಿರ್ದೇಶನಗೊಳ್ಳುವ ಒಬ್ಬ ನಿರ್ದೇಶಕರು ಮತ್ತು ಸಹಕಾರ ನಿಬಂಧಕರು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿರುವ ಇಬ್ಬರು ಅಧಿಕಾರಿಗಳ ಮತ ಸೇರಿ ಒಟ್ಟು 16 ಮತಗಳು ಆಗಲಿವೆ. ಬಹುಮತಕ್ಕೆ 9 ನಿರ್ದೇಶಕರ ಬೆಂಬಲ ಬೇಕು. ಕಾಂಗ್ರೆಸ್ ಬೆಂಬಲಿತರು 9 ಜನರಿದ್ದಾರೆ. ಬಿಜೆಪಿ ಸಂಖ್ಯಾಬಲ 7 ಆಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಇನ್ನಿಬ್ಬರ ಬೆಂಬಲ ಬೇಕೇಬೇಕು. ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿರುವುದು ಕುತೂಹಲ ಕೆರಳಿಸಿದೆ. ಸಹಕಾರ ಕ್ಷೇತ್ರದಲ್ಲೂ ಆಪರೇಷನ್ ಕಮಲದ ಕರಿಛಾಯೆ ಗೋಚರಿಸುತ್ತಿದೆ.

ಕಾಂಗ್ರೆಸ್‌ನಲ್ಲಿ ಸೋಮಶೇಖರ ಗೋನಾಯಕ, ಅಶೋಕ ಸಾವಳೇಶ್ವರ, ಗೌತಮ ಪಾಟೀಲ್, ಗುರುನಾಥ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ಸೇರಿ 9 ನಿರ್ದೇಶಕರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಚಾಲ್ತಿಯಲ್ಲಿವೆ. ತಮ್ಮದೇ ಆದ ಲೆವಲ್‌ನಲ್ಲಿ ಉಳಿದ ನಿರ್ದೇಶಕರನ್ನು ಓಲೈಸಿಕೊಂಡು, ಅಧ್ಯಕ್ಷ ಸ್ಥಾನದ ಹುದ್ದೆಗೇರಲು ಕಸರತ್ತು ನಡೆಸಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಕೂಡಾ ಅಧ್ಯಕ್ಷ ಸ್ಥಾನಕ್ಕೆ ಕಸರತ್ತು ನಡೆಸಿರುವುದು ಕಾಂಗ್ರೆಸ್ ನಿಂದ ಗೆದ್ದ ಅನೇಕ ನಿರ್ದೇಶಕರ ನಿದ್ದೆ ಹಾರಿಹೋಗುವಂತೆ ಮಾಡಿದೆ.

ಇನ್ನು ಅಫಜಲಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಮಾನಕರ್ , ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮಾನಕರ್ ಪುತ್ರಿ ಬಿ.ವೈ.ವಿಜಯೇಂದ್ರ ಪತ್ನಿ. ಹೀಗಾಗಿ ಶಿವಾನಂದ್ ಮಾನಕರ್ ಸೇರಿದಂತೆ ಅನೇಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಬಿಜೆಪಿ ಬೆಂಬಲಿತರು ಸಂಖ್ಯಾ ಬಲ ಇಲ್ಲದೇ ಇರುವುದರಿಂದ ಸುಲುಭವಾಗಿ ಅಧ್ಯಕ್ಷ ರಾಗಲು ಬರೋದಿಲ್ಲಾ. ಆದ್ರು ಕೂಡಾ ಅಧ್ಯಕ್ಷ ಸ್ಥಾನದ ಮೇಲಿನ ಆಸೆಯನ್ನು ಬಿಟ್ಟಿಲ್ಲಾ. -ಸಂಜಯ್.ಚಿಕ್ಕಮಠ