India vs Australia 2020, 2nd T20, LIVE Scores : ಟಿ20 ಸರಣಿ ಭಾರತದ ಪಾಲು

ಏಕದಿನ ಸರಣಿಯ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿದೆ. ಆಸಿಸ್​ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಭಾರತೀಯ ಬ್ಯಾಟ್​ಮನ್ಸ್​ ಅತ್ಯಂತ ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿದ್ದಾರೆ.

India vs Australia 2020, 2nd T20, LIVE Scores : ಟಿ20 ಸರಣಿ ಭಾರತದ ಪಾಲು
ಕಠಿಣ ಸಂದರ್ಭದಲ್ಲಿ ತಂಡದ ಗೆಲುವಿಗೆ ನೆರವಾದ ಹಾರ್ದಿಕ್​ ಪಾಂಡ್ಯ
Follow us
Skanda
|

Updated on:Dec 06, 2020 | 6:34 PM

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ಭಾರತ ತಂಡ ಇಂದು ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಆಡಿದ ಆಸಿಸ್​ ತಂಡ ಬ್ಯಾಟ್ಸ್​ಮನ್​ಗಳ ಅಬ್ಬರದ ಆಟದೊಂದಿಗೆ 194/5 ರನ್​ ಗಳಿಸಿತು. ಬೃಹತ್​ ಮೊತ್ತದ ಬೆನ್ನತ್ತಿದ ಭಾರತ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗಲೇ ಭರ್ಜರಿ ಗೆಲುವು ಪಡೆದಿದೆ.

ಭಾರತಕ್ಕೆ ಅಷ್ಟೇನು ಉತ್ತಮ ಆರಂಭ ಸಿಗಲಿಲ್ಲವಾದರೂ ಮೂರನೇ ಓವರ್​ನಲ್ಲಿ ಆಸಿಸ್​ನ ಆಂಡ್ರ್ಯೂ ಟೈ ಎಸೆದ ನೋ ಬಾಲ್​ ವರದಾನವಾಯಿತು. ಅಲ್ಲಿ ಸಿಕ್ಕ ಫ್ರೀ ಹಿಟ್​ಗೆ ಕೆ.ಎಲ್​.ರಾಹುಲ್​ ಭರ್ಜರಿ ಸಿಕ್ಸ್​ ಸಿಡಿಸಿದ ನಂತರ ಭಾರತದ ವೇಗ ಕೊಂಚ ಹೆಚ್ಚಿತು. ಪಂದ್ಯದಲ್ಲಿ ನಡುವಿನಲ್ಲಿ ಭರವಸೆ ಹೆಚ್ಚಿತ್ತಾದರೂ ಕೊನೆಗೆ ಒತ್ತಡದ ಸಂದರ್ಭ ಎದುರಾಗಿತ್ತು ಕೊನೆಯ ಓವರ್​ನಲ್ಲಿ 14 ರನ್​ ಅವಶ್ಯಕತೆ ಇದ್ದಾಗ ಶ್ರೇಯಸ್​ ಅಯ್ಯರ್​ ಮತ್ತು ಪಾಂಡ್ಯ ಜೊತೆಯಾಟದಲ್ಲಿದ್ದರು. ಇನ್ನೇನು ಗೆಲುವು ಕೈ ತಪ್ಪಿತು ಎನ್ನುವಾಗಲೇ ಪಾಂಡ್ಯ 2 ಸಿಕ್ಸರ್​ ಸಿಡಿಸಿ ಕೊನೆಯ 2 ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿಸಿದರು.

ಭಾರತ ತಂಡ: ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್​ ಠಾಕೂರ್, ದೀಪಕ್ ಚಹರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್.

ಆಸ್ಟ್ರೇಲಿಯಾ ತಂಡ: ಡಿ ಆರ್ಕಿ ಶಾರ್ಟ್​, ಮಾರ್ಕಸ್ ಸ್ಟೊಯ್ನಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್​ವೆಲ್, ಮೊಯಿಸೆಸ್​ ಹೆನ್ರಿಕ್ವೆಸ್​, ಮ್ಯಾಥ್ಯೂ ವೇಡ್ (ನಾಯಕ, ವಿಕೆಟ್​ ಕೀಪರ್​), ಡೇನಿಯಲ್​ ಸ್ಯಾಮ್ಸ್​, ಸೀನ್​ ಅಬೊಟ್​, ಮಿಚೆಲ್​ ಸ್ವೆಪ್ಸನ್​, ಆ್ಯಡಮ್​ ಝಂಪಾ, ಆಂಡ್ರ್ಯೂ ಟೈ

Published On - 5:17 pm, Sun, 6 December 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!