ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ವಿಭಿನ್ನ ರೀತಿಯ ಉದ್ಘಾಟನೆ ಮತ್ತು ಲೋಕಾರ್ಪಣೆಗೇ ಫೇಮಸ್. ಅಂತೆಯೇ, ಈ ಬಾರಿ ಸಹ ಮುಕ್ತಿ ವಾಹನವೊಂದರ ಲೋಕಾರ್ಪಣೆ ಬಳಿಕ ಅದನ್ನು ಶಾಸಕರು ಚಲಾಯಿಸಿದ ಸ್ವಾರಸ್ಯಕರ ಪ್ರಸಂಗ ಹೊನ್ನಾಳಿ ಪಟ್ಟಣ ಪಂಚಾಯಿತಿ ಬಳಿ ನಡೆದಿದೆ.
ಮೃತ ಕೊರೊನಾ ಸೋಂಕಿತರ ಶವ ಸಾಗಿಸುವ ನಿಟ್ಟಿನಲ್ಲಿ ಇಂದು ಮುಕ್ತಿ ವಾಹನವೊಂದನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ವಾಹನವನ್ನು ಉದ್ಘಾಟಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ ನಂತರ ವಾಹನವನ್ನು ಚಲಾಯಿಸಿ ಒಂದು ಸುತ್ತು ಸಹ ಹಾಕಿಬಂದರು.