ಬೆಂಗಳೂರು: BJP ಮಾಜಿ ಶಾಸಕ ದಿ. BN ವಿಜಯ್ ಕುಮಾರ್ರ ಹೆಸರಿನ ಜಯನಗರದ ಬುಲೇವಾರ್ಡ್ನ ಲೋಕಾರ್ಪಣೆ ಮಾಡಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಹತ್ತಿರದಲ್ಲೇ ಇದ್ದ ಪ್ರತಿಷ್ಠಿತ ಹೋಟೆಲ್ನಲ್ಲಿ ಮಧ್ಯಾಹ್ನದ ಭೋಜನ ಸವಿದರು.
ಇದನ್ನೂ ಓದಿ: ಜಯನಗರ ಬುಲೇವಾರ್ಡ್ಗೆ BN ವಿಜಯ್ ಕುಮಾರ್ ಹೆಸರು
ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಜಯನಗರದ ಮಯ್ಯಾಸ್ ಹೋಟೆಲ್ಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಎಲ್ಲರೊಟ್ಟಿಗೆ ಕುಳಿತು ಫುಲ್ ಮೀಲ್ಸ್ ಸವಿದರು. ಯಡಿಯೂರಪ್ಪರಿಗೆ ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸ್ಥಳೀಯ ಶಾಸಕಿ ಸೌಮ್ಯಾ ರೆಡ್ಡಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಮಾಜಿ MLC ತಾರಾ ಅನುರಾಧಾ ಹಾಗೂ ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು.
ಮುಖ್ಯಮಂತ್ರಿ ಶ್ರೀ @BSYBJP ರವರು ಇಂದು ಮಧ್ಯಾಹ್ನ ಬೆಂಗಳೂರಿನ ಜಯನಗರದಲ್ಲಿರುವ ಮಯ್ಯಾಸ್ ಹೋಟೆಲಿನಲ್ಲಿ ಭೋಜನ ಸ್ವೀಕರಿಸಿದರು.
ಸಚಿವ @RAshokaBJP, ಸಚಿವ @BSBommai, ಶಾಸಕಿ @Sowmyareddyr, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ @SRVishwanathBJP, ಸಂಸದ @Tejasvi_Surya, ಶ್ರೀಮತಿ ತಾರಾ ಅನುರಾಧ ಜೊತೆಗಿದ್ದರು. pic.twitter.com/kCVtb0zYz7
— CM of Karnataka (@CMofKarnataka) September 7, 2020