ಶಾಸಕ ಸತೀಶ್ ರೆಡ್ಡಿ ಕೊರೊನಾ ಬಗ್ಗೆ ಹೇಳಿದ ಈ ವಿಷಯ ಕೇಳಿ ಕಮಿಟಿ ಸದಸ್ಯರು ಕಂಗಾಲು!

ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಮುಖ ಕೂಡ ಕಾಣದ ರೀತಿ ಪ್ಯಾಕ್ ಮಾಡಲಾಗುತ್ತಿದೆ, ಕೊನೆ ಬಾರಿ ಅವರ ಮುಖ ಕೂಡ ನೋಡೊಕೆ ಆಗದ ಸ್ಥಿತಿ ಇದೆ, ಕೊನೆ ಪಕ್ಷ ಮುಖ ಕಾಣುವಂತೆ ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಎಂದು ಇಂದು ನಡೆದ ರಾಜ್ಯ ಲೆಕ್ಕಪತ್ರ ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ಈ ಸೂಚನೆ ನೀಡಲಾಗಿದೆ. ಕೊರೊನಾ ಪೇಶೆಂಟ್ ವೆಂಟಿಲೇಟರ್ […]

ಶಾಸಕ ಸತೀಶ್ ರೆಡ್ಡಿ ಕೊರೊನಾ ಬಗ್ಗೆ ಹೇಳಿದ ಈ ವಿಷಯ ಕೇಳಿ ಕಮಿಟಿ ಸದಸ್ಯರು ಕಂಗಾಲು!
Edited By:

Updated on: Aug 11, 2020 | 4:15 PM

ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಮುಖ ಕೂಡ ಕಾಣದ ರೀತಿ ಪ್ಯಾಕ್ ಮಾಡಲಾಗುತ್ತಿದೆ, ಕೊನೆ ಬಾರಿ ಅವರ ಮುಖ ಕೂಡ ನೋಡೊಕೆ ಆಗದ ಸ್ಥಿತಿ ಇದೆ, ಕೊನೆ ಪಕ್ಷ ಮುಖ ಕಾಣುವಂತೆ ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಎಂದು ಇಂದು ನಡೆದ ರಾಜ್ಯ ಲೆಕ್ಕಪತ್ರ ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ಈ ಸೂಚನೆ ನೀಡಲಾಗಿದೆ.

ಕೊರೊನಾ ಪೇಶೆಂಟ್ ವೆಂಟಿಲೇಟರ್ ಗೆ ಹೋದ್ರೆ  ಭಾರೀ ಡೇಂಜರ್. ವೆಂಟಿಲೇಟರ್ ಗೆ ಹೋದವರು ಬದುಕಿಬರೋದು ಕಷ್ಟ. ಬೆಂಗಳೂರಿನಲ್ಲಿ ವೆಂಟಿಲೇಟರ್ ಗೆ ಹೋದವರು ವಾಪಸ್ ಬಂದಿದ್ದು ಕಡಿಮೆಯಂತೆ. ಪ್ರತಿ 10 ಮಂದಿ ಸೋಂಕಿತರಲ್ಲಿ ಒಂಬತ್ತು ಮಂದಿ ಸಾಯ್ತಿದ್ದಾರಂತೆ. ಉಳಿಯೋದು ಕೇವಲ ಒಬ್ಬ ಪೇಶೆಂಟ್ ಮಾತ್ರವಂತೆ ಎಂದು ಪಬ್ಲಿಕ್ ಅಕೌಂಟ್ ಕಮಿಟಿ ಸಭೆಯಲ್ಲಿ ಶಾಸಕ ಸತೀಶ್ ರೆಡ್ಡಿ  ಕಳವಳ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ಈ ವಿಷಯ ಕೇಳಿಯೇ ಕಮಿಟಿ ಸದಸ್ಯರು ಸುಸ್ತಾಗಿ ಹೊಗಿದ್ದಾರೆ. ನಂತರ ಈ ಬಗ್ಗೆ ಚರ್ಚಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಸಮಿತಿ ಸೂಚಿಸಿದೆ ಎಂದು ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದ್ದಾರೆ.