‘ನಾ SSLC ಪಾಸಾದೆ’ ವಿದ್ಯಾರ್ಥಿಯ ಸಂಭ್ರಮದ ಕುಣಿತ ಭಾರೀ ವೈರಲ್ ಆಯ್ತು!
ಬಾಗಲಕೋಟೆ: ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ಬಾಗಲಕೋಟೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ದೃಶ್ಯ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಆರ್ ಎಮ್ ಎಸ್ ಎ ಪ್ರೌಢಶಾಲೆಯ ಹನುಮಂತ ದನಗಾರ ಎಂಬ ವಿದ್ಯಾರ್ಥಿ, SSLCಯಲ್ಲಿ ಕೇವಲ 330 ಅಂಕ ಬಂದು ಪಾಸಾದರೂ, ಸಂತಸದಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾನೆ. ನಾ ಎಸ್ ಎಸ್ ಎಲ್ ಸಿ ಪಾಸ್ ಆದ್ನೊ..ನಾ ಟೆನ್ತ್ ಪಾಸ್ ಆಗೇನಿ ಎಂದು ಎದೆ […]
ಬಾಗಲಕೋಟೆ: ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ಬಾಗಲಕೋಟೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ದೃಶ್ಯ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಆರ್ ಎಮ್ ಎಸ್ ಎ ಪ್ರೌಢಶಾಲೆಯ ಹನುಮಂತ ದನಗಾರ ಎಂಬ ವಿದ್ಯಾರ್ಥಿ, SSLCಯಲ್ಲಿ ಕೇವಲ 330 ಅಂಕ ಬಂದು ಪಾಸಾದರೂ, ಸಂತಸದಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾನೆ.
ನಾ ಎಸ್ ಎಸ್ ಎಲ್ ಸಿ ಪಾಸ್ ಆದ್ನೊ..ನಾ ಟೆನ್ತ್ ಪಾಸ್ ಆಗೇನಿ ಎಂದು ಎದೆ ಬಡಿದು ಕುಣಿ ಕುಣಿದಾಡಿದ್ದಾನೆ. ಈತನ ಸಂಭ್ರಮ ಇಷ್ಟಕ್ಕೆ ನಿಂತಿಲ್ಲ, ಪಾಸ್ ಆದ ಖುಷಿಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಬಿಸಾಕಿ ಕುಣಿದಾಡಿದ್ದಾನೆ.
ಹನುಮಂತನ ಈ ಸಂಭ್ರಮಕ್ಕೆ ಕಾರಣ ರಿಸಲ್ಟ್ ಬರೋ ಮೊದಲು, ಕೆಲವರು ನೀನು SSLC ಪಾಸ್ ಆಗೋದಿಲ್ಲ ಎಂದು ಛೇಡಿಸಿದ್ದರಂತೆ. ಕೆಲ ಶಿಕ್ಷಕರು ಕೂಡಾ ನಿ ಪಾಸ್ ಆಗೋದು ಡೌಟ್ ಅಂದಿದ್ರಂತೆ.
ಆದ್ರೆ ಅವರೆಲ್ಲರ ಲೆಕ್ಕಾಚಾರ ಉಲ್ಟಾ ಮಾಡಿರುವ ಈ ವಿದ್ಯಾರ್ಥಿ ಹನುಮಂತ ದನಗಾರ ಈಗ ಪಾಸ್ ಆಗಿದ್ದಾನೆ. ಹೀಗಾಗಿ ಆತನ ಸಂತಸ ಮುಗಿಲು ಮುಟ್ಟಿದೆ. ವಿದ್ಯಾರ್ಥಿಯ ಸಂಭ್ರಮ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.