ಇಂದು ಠಾಕ್ರೆಗೆ ಏನೇ ಗೊಂದಲಗಳಿದ್ದರೂ ಅವರು ಕಾಂಗ್ರೆಸ್​ ಪಕ್ಷವನ್ನೇ ಪ್ರಶ್ನಿಸಬೇಕು -ಸಿ.ಟಿ. ರವಿ

| Updated By: ಸಾಧು ಶ್ರೀನಾಥ್​

Updated on: Jan 18, 2021 | 12:19 PM

ಭಾಷಾವಾರು ಪ್ರಾಂತ್ಯ ಮಾಡುವಾಗ ದೇಶಾದ್ಯಂತ ಕಾಂಗ್ರೆಸ್​ ಅಧಿಕಾರದಲ್ಲಿತ್ತು. ಈಗ ಉದ್ಧವ್​ ಠಾಕ್ರೆ ಅವರ ಹೆಗಲ ಮೇಲೆಯೇ ಕೂತು ಅದರ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ.

ಇಂದು ಠಾಕ್ರೆಗೆ ಏನೇ ಗೊಂದಲಗಳಿದ್ದರೂ ಅವರು ಕಾಂಗ್ರೆಸ್​ ಪಕ್ಷವನ್ನೇ ಪ್ರಶ್ನಿಸಬೇಕು -ಸಿ.ಟಿ. ರವಿ
ಸಿ.ಡಿ.ರವಿ ಮತ್ತು ಉದ್ಧವ್​ ಠಾಕ್ರೆ
Follow us on

ಚಿಕ್ಕಮಗಳೂರು: ಕರ್ನಾಟಕದ ಭೂಭಾಗ ತಮ್ಮದೆಂದು ಹೇಳುವ ಮೂಲಕ ಉದ್ಧಟತನ ತೋರುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನೈತಿಕತೆ ಇದ್ದರೆ ಕಾಂಗ್ರೆಸ್​ ಪಕ್ಷದ ಹೆಗಲಿನಿಂದ ಕೆಳಗಿಳಿಯಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಗಡಿ ವಿಚಾರವನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ. ಈ ಕೆಲಸದ ಹಿಂದಿದ್ದಿದ್ದು ಕಾಂಗ್ರೆಸ್ ಪಕ್ಷ. ಆದರೆ, ಈಗ ಉದ್ಧವ್​ ಠಾಕ್ರೆ ಅದೇ ಕಾಂಗ್ರೆಸ್ ಪಕ್ಷದ ಹೆಗಲ ಮೇಲೆ ಕುಳಿತು ಗಡಿ ವಿಚಾರ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕನ್ನಡ ಮಾತನಾಡುವವರು ಮಹಾರಾಷ್ಟ್ರದಲ್ಲಿ ಹಾಗೂ ಮಠಾಠಿ ಮಾತನಾಡುವವರು ಕರ್ನಾಟಕದಲ್ಲಿ ಇದ್ದಾರೆ. ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎನ್ನುವುದು ಹಲವು ವರ್ಷಗಳ ಕೂಗು. ಇದಕ್ಕೆಲ್ಲಾ ಸಂಬಂಧಿಸಿದಂತೆ ಹಲವು ಆಯೋಗಗಳು ಬಂದಿವೆ. ನಮ್ಮಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರವೂ ಅವರವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಭಾರತೀಯರೆಲ್ಲರೂ ಮಾಡಿಕೊಂಡು ಬಂದಿದ್ದೇವೆ. ಯಾರ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸವನ್ನೂ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ಭಾಷಾವಾರು ಪ್ರಾಂತ್ಯವಾಗುವಾಗ ನಾನಾಗಲೀ, ಉದ್ಧವ್​ ಠಾಕ್ರೆಯಾಗಲೀ ಹುಟ್ಟಿರಲಿಲ್ಲ. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್​ ಪಕ್ಷ ಇದನ್ನೆಲ್ಲಾ ಮಾಡಿದ್ದು. ಆದ್ದರಿಂದ, ಇಂದು ಉದ್ಧವ್​ ಠಾಕ್ರೆ ಅವರಿಗೆ ಏನೇ ಗೊಂದಲಗಳಿದ್ದರೂ ಅವರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್​ ಪಕ್ಷವನ್ನೇ ಪ್ರಶ್ನಿಸಬೇಕು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಟತನ ತೋರುತ್ತಿದ್ದಾರೆ.. ಗಡಿ ಸೌಹಾರ್ದತೆ ಕದಡುತ್ತಿದ್ದಾರೆ: ಸಿಎಂ ಯಡಿಯೂರಪ್ಪ ಆಕ್ರೋಶ

Published On - 12:18 pm, Mon, 18 January 21