ಬಿಜೆಪಿ OBC ಘಟಕದ ಅಧ್ಯಕ್ಷನ ಹತ್ಯೆಗೆ ತಡರಾತ್ರಿ ಡಾಬಾದಲ್ಲಿ ಯತ್ನ

ವಿಜಯಪುರ: ತಾಲೂಕು ಬಿಜೆಪಿ OBC ಘಟಕದ ಅಧ್ಯಕ್ಷನ ಹತ್ಯೆಗೆ ಯತ್ನ ನಡೆದಿರುವ ದುಷ್ಕೃತ್ಯ ಜಿಲ್ಲೆಯ ಸಿಂದಗಿಯ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ರಸ್ತೆಯಲ್ಲಿರುವ ಅರ್ಪಿತಾ ಡಾಬಾದಲ್ಲಿ ತಡರಾತ್ರಿ ಘಟನೆ ನಡೆದಿದೆ. ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ತಾಲೂಕಿನ ಬಬಲೇಶ್ವರದ ನಿವಾಸಿಗಳಾದ ಅನಿಲ್ ಮತ್ತು ಯುವರಾಜ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಬಂದಿದೆ. ಗಾಯಾಳು ರವಿಕಾಂತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ OBC ಘಟಕದ ಅಧ್ಯಕ್ಷನ ಹತ್ಯೆಗೆ ತಡರಾತ್ರಿ ಡಾಬಾದಲ್ಲಿ ಯತ್ನ

Updated on: Oct 06, 2020 | 6:19 PM

ವಿಜಯಪುರ: ತಾಲೂಕು ಬಿಜೆಪಿ OBC ಘಟಕದ ಅಧ್ಯಕ್ಷನ ಹತ್ಯೆಗೆ ಯತ್ನ ನಡೆದಿರುವ ದುಷ್ಕೃತ್ಯ ಜಿಲ್ಲೆಯ ಸಿಂದಗಿಯ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ರಸ್ತೆಯಲ್ಲಿರುವ ಅರ್ಪಿತಾ ಡಾಬಾದಲ್ಲಿ ತಡರಾತ್ರಿ ಘಟನೆ ನಡೆದಿದೆ.

ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ತಾಲೂಕಿನ ಬಬಲೇಶ್ವರದ ನಿವಾಸಿಗಳಾದ ಅನಿಲ್ ಮತ್ತು ಯುವರಾಜ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಬಂದಿದೆ. ಗಾಯಾಳು ರವಿಕಾಂತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.