ಬೆಳಗೆದ್ದು ಗ್ರೀನ್​ ಟೀ ಅಥವಾ ಬ್ಲಾಕ್​ ಟೀ ಕುಡಿತೀರಾ? ಹಾಗಿದ್ರೆ ಈ ರೋಗಗಳು ನಿಮ್ಮ ಬಳಿ ಸುಳಿಯಲ್ಲ

ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ರಕ್ತದ ಒತ್ತಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಬೆಳಗೆದ್ದು ಗ್ರೀನ್​ ಟೀ ಅಥವಾ ಬ್ಲಾಕ್​ ಟೀ ಕುಡಿತೀರಾ? ಹಾಗಿದ್ರೆ ಈ ರೋಗಗಳು ನಿಮ್ಮ ಬಳಿ ಸುಳಿಯಲ್ಲ
ಗ್ರೀನ್​ ಟೀ
Edited By:

Updated on: Mar 11, 2021 | 6:38 AM

ಮುಂಜಾನೆ ಎದ್ದು ಗ್ರೀನ್ ಟೀ ಅಥವಾ ಬ್ಲಾಕ್​ ಟೀ ಕುಡಿಯುವ ಹವ್ಯಾಸ ಸಾಕಷ್ಟು ಜನರಿಗೆ ಇರುತ್ತದೆ. ಮುಂಜಾನೆ ಎದ್ದಾಗ ಚೈತನ್ಯ ಸಿಗುತ್ತದೆ ಎನ್ನುವ ಕಾರಣಕ್ಕೆ ಅನೇಕರು ಮುಂಜಾನೆ ಗ್ರೀನ್​ ಟೀ ಕುಡಿಯೋಕೆ ಆದ್ಯತೆ ನೀಡುತ್ತಾರೆ. ಇಷ್ಟೇ ಅಲ್ಲದೆ, ಗ್ರೀನ್ ಟೀ ಹಾಗೂ ಬ್ಲಾಕ್​ ಟೀಯಿಂದ ನಿಮ್ಮ ದೇಹಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ.

ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ರಕ್ತದ ಒತ್ತಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಗ್ರೀನ್​ ಟೀ ಹಾಗೂ ಮತ್ತು ಬ್ಲಾಕ್​ ಟೀ ಕುಡಿಯುವದರಿಂದ ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆಯಂತೆ. ರಕ್ತದೊತ್ತಡ ಕಡಿಮೆ ಆದರೆ, ಹೃದಯದ ಆರೋಗ್ಯ ಉತ್ತಮವಾಗಿದ್ದಂತೆ ಎಂದು ಅಧ್ಯಯನ ಹೇಳಿದೆ.

ಈ ಚಹಾಗಳಲ್ಲಿರುವ ಕ್ಯಾಟೆಚಿನ್ಸ್ ಎಂದು ಕರೆಯಲ್ಪಡುವ ಕೆಲವು ಸಂಯುಕ್ತಗಳು ಅಯಾನ್ ಪ್ರೋಟೀನ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ರಕ್ತನಾಳಗಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.

ಗ್ರೀನ್​ ಮತ್ತು ಬ್ಲಾಕ್​ ಟೀ ಸೇವನೆಯಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಈ ಹಿಂದೆ ತೋರಿಸಲಾಗಿತ್ತು. ಆದರೆ, ಇದಕ್ಕೆ ಸೂಕ್ತಕಾರಣಗಳನ್ನು ನೀಡಿರಲಿಲ್ಲ. ಈಗ ಹೊಸ ಅಧ್ಯಯನದಲ್ಲಿ ಇದಕ್ಕೆಲ್ಲವೂ ಉತ್ತರ ನೀಡಿದಂತಾಗಿದೆ. ಅಧಿಕ ರಕ್ತದೊತ್ತಡ ಇತ್ತೀಚೆಗೆ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ. ವಿಶ್ವದ ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ಇದರಿಂದ ಅಕಾಲಿಕ ಮರಣ ಎದುರಾಗಬಹುದು. ಹೀಗಾಗಿ, ನಿತ್ಯ ಗ್ರೀನ್ ಟೀ ಕುಡಿಯಬೇಕು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Red Banana: ಕಣ್ಣಿಗೆ ತಂಪು ಕೆಂಪು ಬಾಳೆಹಣ್ಣು, ರಕ್ತದೊತ್ತಡ ನಿವಾರಣೆ, ಜೀರ್ಣಕ್ರಿಯೆಗೂ ಸಹಕಾರಿ