Bigg Boss Kannada: ಅಯ್ಯೋ ಪಾಪ.. ನಿರ್ಮಲಾ ಕೈಗೆ ಇಷ್ಟೊಂದು ಏಟಾಗಿದೆಯಾ?

ವೈರಸ್​ ಆಟದಲ್ಲಿ ಎಲ್ಲರೂ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿದ್ದಾರೆ. ಆ ಮೂಲಕ ಮನೆಯೊಳಗೆ ಟೆನ್ಷನ್​ ಸೃಷ್ಟಿ ಆಗಿದೆ. ತಮ್ಮ ತಮ್ಮ ಉಳಿವಿಗಾಗಿ ಎಲ್ಲರೂ ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ.

Bigg Boss Kannada: ಅಯ್ಯೋ ಪಾಪ.. ನಿರ್ಮಲಾ ಕೈಗೆ ಇಷ್ಟೊಂದು ಏಟಾಗಿದೆಯಾ?
ಬಿಗ್​ ಬಾಸ್​ ಮನೆಯಲ್ಲಿ ನಿರ್ಮಲಾ
Follow us
ರಾಜೇಶ್ ದುಗ್ಗುಮನೆ
|

Updated on:Mar 10, 2021 | 10:02 PM

ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ಕೊರೊನಾ ವೈರಸ್​ ರೀತಿಯ ಥೀಮ್​ನಲ್ಲಿ ಒಂದು ಗೇಮ್​ ಆಡಿಸಲಾಗುತ್ತಿದೆ. ಬಿಗ್​ ಬಾಸ್ 9ನೇ ದಿನ ವೈರಸ್​ ಹಾಗೂ ಮನುಷ್ಯರು ಎನ್ನುವ ಆಧಾರದ ಮೇಲೆ ಟಾಸ್ಕ್​ ನೀಡಲಾಗಿತ್ತು. ಮನೆಯ ಒಂದಷ್ಟು ಸದಸ್ಯರು ವೈರಸ್​ ಆದರೆ, ಮತ್ತೊಂದಷ್ಟು ಸದಸ್ಯರು ಮನುಷ್ಯರು. ವೈರಸ್​ ತಂಡಕ್ಕೆ ಪ್ರಶಾಂತ್​ ಸಂಬರಗಿ ಕ್ಯಾಪ್ಟನ್​. ಮನುಷ್ಯರ ತಂಡಕ್ಕೆ ಲ್ಯಾಗ್​ ಮಂಜು ನಾಯಕರಾಗಿದ್ದರು. ಈ ಆಟದ ವೇಳೆ ನಿರ್ಮಲಾಗೆ ಸಾಕಷ್ಟು ತೊಂದರೆ ಉಂಟಾದಂತೆ ಕಾಣುತ್ತಿದೆ. ವೈರಸ್​ ಆಟದಲ್ಲಿ ಎಲ್ಲರೂ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿದ್ದಾರೆ. ಆ ಮೂಲಕ ಮನೆಯೊಳಗೆ ಟೆನ್ಷನ್​ ಸೃಷ್ಟಿ ಆಗಿದೆ. ತಮ್ಮ ತಮ್ಮ ಉಳಿವಿಗಾಗಿ ಎಲ್ಲರೂ ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ವೈರಸ್​ ಆಟದಲ್ಲಿ ಭಾಗವಹಿಸಿದ ವೇಳೆ ನಿರ್ಮಲಾ ಚೆನ್ನಪ್ಪ ಅವರಿಗೆ ಪೆಟ್ಟಾಗಿತ್ತು. ನೋವಿನಿಂದ ಅವರು ಬಳಲಿದ್ದರು. ಅಸ್ವಸ್ಥಗೊಂಡ ಅವರ ಸ್ಥಿತಿ ನೋಡಿ ಎಲ್ಲರೂ ಆತಂಕಗೊಂಡಿದ್ದರು. ನಂತರ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

10ನೇ ದಿನ ಬೆಳಗ್ಗೆ ನಿರ್ಮಲಾ ಕೈಗೆ ಪಟ್ಟಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದಾರೆ. ಅವರಿಗೆ ತೀವ್ರ ಕೈನೋವು ಇದ್ದಂತೆ ಕಂಡು ಬಂದಿದೆ. ನಿರ್ಮಲಾಗೆ ಎದುರಾದ ಪ್ರಶಾಂತ್​ ಸಂಬರಗಿಯವರನ್ನು ಕರೆದು ಅವರ ಬಳಿ ಕೂದಲಿಗೆ ರಬ್ಬರ್​ ಹಾಕಿಕೊಡುವಂತೆ ಕೇಳಿದ್ದಾರೆ. ಪ್ರಶಾಂತ್​ ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಿರ್ಮಲಾ, ಕೈ ನೋಯುತ್ತಿದೆ. ತಲೆಗೆ ಹೇರ್​ಬೆಂಡ್​ ಹಾಕಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

ಏನಿದು ಆಟದ ನಿಯಮ?

ಈ ಟಾಸ್ಕ್​​ನ ನಿಯಮದಂತೆ ವೈರಸ್​ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್​ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್​ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್​ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್​ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

Published On - 10:01 pm, Wed, 10 March 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್