Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಕಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ರಾಮಬಾಣ ಅಲೋವೆರಾ

ನೈಸರ್ಗಿಕವಾಗಿ ಸಿಗುವ ಅಲೋವೆರಾ ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಚರ್ಮದ ಸುರಕ್ಷತೆಗೆ ಉತ್ತಮ ರಾಮಬಾಣ ಅಲೋವೆರಾ ಜೆಲ್.

ಬೇಸಿಗೆಕಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ರಾಮಬಾಣ ಅಲೋವೆರಾ
ಅಲೋವೆರಾ ಜೆಲ್
Follow us
shruti hegde
| Updated By: ಆಯೇಷಾ ಬಾನು

Updated on: Mar 11, 2021 | 6:47 AM

ಬೇಸಿಗೆಯಲ್ಲಿ ಚರ್ಮದ ತೊಂದರೆಗಳು ಹೆಚ್ಚಾಗುವುದು ಸಹಜ.‌ ಏಕೆಂದರೆ ಸೂರ್ಯನ ಕಿರಣಗಳು ನೇರವಾಗಿ ಚರ್ಮಕ್ಕೆ ತಾಗುವುದರಿಂದ, ಶಾಖಕ್ಕೆ ಚರ್ಮ ಬಿರುಕು ಉಂಟಾಗುವುದು, ಮೊಡವೆ, ಸಣ್ಣ ಪುಟ್ಟ ಗುಳ್ಳೆಗಳು ಏಳುತ್ತವೆ. ಹಾಗೂ ವಾತಾವರಣದಲ್ಲಿನ ಧೂಳು ನಮ್ಮ ಚರ್ಮದ ಮೇಲೆ ಅಂಟುವುದರಿಂದ ಚರ್ಮ ತನ್ನ ಅಂದವನ್ನು ಕಳೆದು ಕೊಳ್ಳುತ್ತದೆ. ಇದಕ್ಕೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಬಳಸಿ ಚರ್ಮದ ಸುರಕ್ಷತೆ ಕಾಪಾಡಿಕೊಳ್ಳುವುದು ಉತ್ತಮ ಮಾರ್ಗ.

ಅಲೋವೆರಾ ಬಳಸುವ ವಿಧಾನ ಅರಿಶಿಣ ಪುಡಿ, ರೋಸ್ ವಾಟರ್, ಜೇನುತುಪ್ಪವನ್ನು ಹಾಗೂ ಒಂದು ಚಮಚ ಹಾಲು ತೆಗೆದುಕೊಂಡು ಪೇಸ್ಟ್ ಸಿದ್ಧ ಮಾಡಿಕೊಳ್ಳಿ. ಆ ಮಿಶ್ರಣಕ್ಕೆ ಅಲೋವೆರಾ ಜೆಲ್​ (ಲೋಳೆ) ಹಾಕಿ ನುಣ್ಣಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮುಖದಲ್ಲಿ ಏಳುವ ಸಣ್ಣ ಗುಳ್ಳೆಗಳು ಕಡಿಮೆಯಾಗುತ್ತದೆ.

ಮತ್ತೊಂದು ವಿಧಾನ ಅಲೋವೆರಾ ಜೆಲ್​ಅನ್ನು ನುಣ್ಣಗೆ ನುರಿದು ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಬಹುದು. ಕೈಯಿಂದ ನೇರವಾಗಿ ಮುಖಕ್ಕೆ ಲೇಪನ ಮಾಡುವುದರ ಬದಲಾಗಿ, ಹತ್ತಿಯಲ್ಲಿ ಅದ್ದಿ ಮುಖಕ್ಕೆ ನಿಧಾನವಾಗಿ ಸವರುವುದು ಉತ್ತಮ. ಮೊಡವೆಗಳಿಗೆ ಗಾಯವಾಗದ ರೀತಿ ಔಷಧ ಲೇಪನ ಮಾಡಬೇಕು. ಕೈ ಉಗುರು ಮೊಡವೆಗಳಿಗೆ ತಾಗಿದರೆ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆಗಳು ಹೆಚ್ಚು.

ಮೊಡವೆ ಸಮಸ್ಯೆಗೆ ಅಲೋವೆರಾ ಜೆಲ್​ ಹೆಣ್ಣು ಮಕ್ಕಳಿಗೆ ಮೊಡವೆಯ ಸಮಸ್ಯೆ ಹೆಚ್ಚು.‌ ಕೆಲವು ಬಾರಿ ಮುಖದಲ್ಲಿ ಏಳುವ ಮೊಡವೆಗಳು ನೆಮ್ಮದಿಯನ್ನೇ ಕಿತ್ತುಕೊಂಡು ಬಿಡುತ್ತದೆ. ಮುಖದಲ್ಲಿ ಎದ್ದ ಒಂದು ಮೊಡವೆಯನ್ನು ನಿವಾರಿಸಲು ಅದೆಷ್ಟೋ ರಂಪ ರಾಮಾಯಣಗಳಾಗಿವೆಯೇನೋ. ಯೋಚಿಸಿದಷ್ಟು ಔಷಧಗಳನ್ನು ಮಾಡಿ ಆಗಿದೆಯೋ ಏನೋ. ಆದರೂ ಮೊಡವೆ ಮಾಸಿಲ್ಲ. ಹೀಗಿದ್ದಾಗ, ನೈಸರ್ಗಿಕವಾಗಿ ಸಿಗುವ ಅಲೋವೆರಾ ಬಳಸಿ ಮೊಡವೆಯನ್ನು ಸಂಪೂರ್ಣವಾಗಿ ತಡೆ ಹಿಡಿಯಬಹದು. ಅಲೋವೆರಾ ಜೆಲ್​ಗೆ ಚೂರೇ ಚೂರು ರೋಸ್ ವಾಟರ್ ಮಿಶ್ರಣ ಮಾಡುವ ರೂಢಿ ಇಟ್ಟುಕೊಳ್ಳಿ. ಪ್ರತಿ ನಿತ್ಯ ಒಂದು ಬಾರಿಯಾದರೂ ಈ ರೀತಿ ಮುಖಕ್ಕೆ ಲೇಪನ ಹಚ್ಚಿ ಕೊಳ್ಳುವುದು ರೂಢಿಗೆ ಬಂದರೆ, ಖಂಡಿತವಾಗಿಯೂ ಮೊಡವೆಗಳಿಂದ ಮುಕ್ತರಾಗಬಹುದು.

ಮುಖದಲ್ಲಿನ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ ಹದಿ ಹರೆಯದ ವಯಸ್ಸಿನವರಿಗೆ ಮುಖದ ಕಾಂತಿಯ ಮೇಲಿನ ಒಲವು ಹೆಚ್ಚು. ನಾನು ಸುಂದರವಾಗಿ ಕಾಣಿಸಬೇಕೆಂಬುದು ಎಲ್ಲರ ಆಸೆ . ಬಿಸಿಲಿನ ಬೇಗೆಗೆ ಕೆಲವರ ಮುಖ ಎಣ್ಣೆ ಅಂಶದಿಂದ(oily skin) ಕೂಡಿರುತ್ತದೆ. ಹಾಗಾಗಿ, ಮುಖದಿಂದ ಎಣ್ಣೆ ಅಂಶವನ್ನು ತೆಗೆದು ಹಾಕಲು, ಅಲೋವೆರಾ ಜೆಲ್ ಜೊತೆಗೆ ಎರಡು ಹನಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಮುಕ್ಕಾಲು ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.‌ ಇದರಿಂದ ಮುಖದ ಕಾಂತಿಯ ಜೊತೆ, ಎಣ್ಣೆ ಅಂಶವನ್ನು ಹೋಗಲಾಡಿಸಲು ಉತ್ತಮ ಮಾರ್ಗ.

ಇದನ್ನೂ ಓದಿ: ಕಲುಷಿತ ವಾತಾವರಣದಿಂದ ನಿಮಗೆ ಅಲರ್ಜಿ ಸಮಸ್ಯೆ ಕಾಡ್ತಿದಿಯೇ? ಇಲ್ಲಿದೆ ಮನೆಮದ್ದು

ಇದನ್ನೂ ಓದಿ: ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಪುದೀನಾವನ್ನು ಹೀಗೆ ಬಳಸಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!