Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಬೆಂಗಳೂರು ಚಲನಚಿತ್ರೋತ್ಸವ ಹೊರಗುತ್ತಿಗೆ?

Bengaluru International Film Festival: ಕೊನೆಗಳಿಗೆಯಲ್ಲಿ ಸಮಯವಿಲ್ಲವೆಂಬ ನೆಪವೊಡ್ಡಿ ಪಾರದರ್ಶಕ ನಿಯಮಗಳಿಂದ ವಿನಾಯ್ತಿ ಪಡೆದು ಇಡೀ ಕಾರ್ಯಕ್ರಮ ಆಯೋಜನೆಯನ್ನು(ಸಿನೆಮಾ ಆಯ್ಕೆ ಹೊರತುಪಡಿಸಿ) ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ವಹಿದುವ ಹುನ್ನಾರ ನಡೆದಿದೆ ಎಂದು ಮೂಲಗಳು ಹೇಳಿವೆ.

ಈವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಬೆಂಗಳೂರು ಚಲನಚಿತ್ರೋತ್ಸವ ಹೊರಗುತ್ತಿಗೆ?
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Skanda

Updated on:Mar 11, 2021 | 2:46 PM

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru International Film Festival – BIFFES) 13ನೇ ಅವೃತ್ತಿ ಮಾರ್ಚ್​ 24ರಿಂದ ಆರಂಭವಾಗಲು ಕೇವಲ 13 ದಿನಗಳು ಬಾಕಿಯಿವೆ. ಆದರೆ ಈವರೆಗೂ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳು ಆಗಿಲ್ಲ. ಕೊನೆಗಳಿಗೆಯಲ್ಲಿ ಸಮಯವಿಲ್ಲವೆಂಬ ನೆಪವೊಡ್ಡಿ ಪಾರದರ್ಶಕ ನಿಯಮಗಳಿಂದ ವಿನಾಯ್ತಿ ಪಡೆದು ಇಡೀ ಕಾರ್ಯಕ್ರಮ ಆಯೋಜನೆಯನ್ನು(ಸಿನೆಮಾ ಆಯ್ಕೆ ಹೊರತುಪಡಿಸಿ) ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ವಹಿಸುವ ಹುನ್ನಾರ ನಡೆದಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರದ ಅಧೀನದಲ್ಲಿರುವ ಈವರೆಗೆ ಚಲನಚಿತ್ರ ಅಕಾಡೆಮಿ ಸ್ವತಃ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹೊರಗುತ್ತಿಗೆಯಾಗಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲು ನಡೆದಿರುವ ಸಿದ್ದತೆ ಬಗ್ಗೆ ಸಿನಿಮಾ ವಲಯದಿಂದ ವಿರೋಧವೂ‌ ವ್ಯಕ್ತವಾಗಿದೆ. ಈ ಬೆಳವಣಿಗೆಯನ್ನು ‘ದುರದೃಷ್ಟಕರ ಸಂಗತಿ’ ಎಂದು ಹೇಳಿರುವ ಕನ್ನಡದ ಸೃಜನಶೀಲ ನಿರ್ದೇಶಕರು ಹಾಗೂ ತಂತ್ರಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಅವರಿಗೆ ಪತ್ರ ಬರೆದಿರುವ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ, ಗಿರೀಶ ಕಾಸರವಳ್ಳಿ, ಪಿ.ಶೇಷಾದ್ರಿ, ಬಿ.ಸುರೇಶ, ಎಸ್.ಶಿವರಾಂ ಇತರರು ‘ಚಲನಚಿತ್ರ ಉತ್ಸವ ಎಂಬುದು ಆಯಾ ಚಲನಚಿತ್ರ ಉದ್ಯಮದಲ್ಲಿ ತೊಡಗಿರುವವರು ಸ್ವತಃ ನಡೆಸಬೇಕಾದ ಚಿತ್ರೋತ್ಸವ’ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಚಲನಚಿತ್ರ ಅಕಾಡೆಮಿಯೇ ಏಕೆ ಚಿತ್ರೋತ್ಸವದ ಹೊಣೆ ಹೊರಬೇಕು ಎಂಬ ಬಗ್ಗೆ ವಿವರಿಸಿರುವ ಅವರು, ‘ಚಿತ್ರೋತ್ಸವದ ಮೂಲಕ ಜಗತ್ತಿನ ಕೆಲವು ದೇಶಗಳ ಚಲನಚಿತ್ರೋದ್ಯಮದ ನಡುವೆ ಸೇತು ಸಂಬಂಧ ಸೃಷ್ಟಿಯಾಗುತ್ತದೆ. ಸಾಂಸ್ಕೃತಿಕ ವಿನಿಯಮ ಸಾಧ್ಯವಾಗುತ್ತದೆ. ಸ್ಥಳೀಯ ಚಿತ್ರೋದ್ಯಮ ಬೆಳೆಯಲು ವೇದಿಕೆಯಾಗುತ್ತದೆ. ಖಾಸಗಿ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಗಳ ಪ್ರವೇಶದಿಂದ ಅಂಥ ಸಾಧ್ಯತೆ ಸಂಪೂರ್ಣ ನಾಶವಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ‘ಸರ್ಕಾರವು ಸುಮಾರು ₹ 7 ಕೋಟಿಯಷ್ಟು ಅನುದಾನ ನೀಡುವ ಈ ಕಾರ್ಯಕ್ರಮವನ್ನು ಸ್ವತಃ ಚಲನಚಿತ್ರ ಅಕಾಡೆಮಿಯೇ ನಿರ್ವಹಿಸಬೇಕಿತ್ತು. ಇದನ್ನು ಹೊರಗುತ್ತಿಗೆ ನೀಡುವುದೆಂದರೆ ಅಕಾಡೆಮಿ ಸ್ಥಾಪನೆಯ ಉದ್ದೇಶವೇ ನಾಶವಾದಂತೆ ಆಗುತ್ತದೆ. ಹೀಗಾಗಿ ಹೊರಗುತ್ತಿಗೆ ನೀಡುವ ಹುನ್ನಾರವನ್ನು ಮತ್ತು ಸಾರ್ವಜನಿಕ ಹಣದ ದುರುಯೋಗವನ್ನು ತಪ್ಪಿಸಿ, ಚಲನಚಿತ್ರ ಅಕಾಡೆಮಿಯೇ ಚಿತ್ರೋತ್ಸವ ನಡೆಸಬೇಕೆಂದು ಕೂಡಲೇ ಆದೇಶ ನೀಡಿ’ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿ; 50 ದೇಶದ 200ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ

Karnataka-Film-Academy

ಕರ್ನಾಟಕ ಚಲನಚಿತ್ರ ಅಕಾಡೆಮಿ

ಏನಾಗಿದೆ ಈ ವರ್ಷ ಕನ್ನಡ ಸಿನಿಮಾ ಲೋಕದ ಹಿರಿಯರು ಬರೆದ ಪತ್ರದ ಬಗ್ಗೆ ತುಸು ವಿಚಾರಿಸಿದಾಗ ಸಾಕಷ್ಟು ಮಾಹಿತಿ ಹೊರಬಿತ್ತು. ಚಿತ್ರೋತ್ಸವ ಯಶಸ್ವಿಯಾಗಿ ನಡೆಯಲು ಸುಮಾರು ನಾಲ್ಕು ತಿಂಗಳ ಪರಿಶ್ರಮ ಬೇಕು. ಪ್ರತಿವರ್ಷ ಸಾಮಾನ್ಯವಾಗಿ ಫೆಬ್ರುವರಿ ತಿಂಗಳ ಕೊನೆಯವಾರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುವುದು ವಾಡಿಕೆ. ಈ ವರ್ಷ ಕೊರೊನಾ ಕಾರಣದಿಂದಾಗಿ ಗೋವಾ ಸೇರಿದಂತೆ ಎಲ್ಲ ಚಿತ್ರೋತ್ಸವಗಳ ದಿನಾಂಕಗಳು ಮುಂದೂಡಲ್ಪಟ್ಟಿದ್ದವು. ಹೀಗಾಗಿ ಬೆಂಗಳೂರು ಚಿತ್ರೋತ್ಸವವನ್ನು ಏಪ್ರಿಲ್​ನಲ್ಲಿ ಮಾಡಲು ಚಲನಚಿತ್ರ ಅಕಾಡೆಮಿ ನಿರ್ಧರಿಸಿತ್ತು.

ಅಕಾಡೆಮಿಯ ಈ ನಿರ್ಧಾರಕ್ಕೆ ಹಣಕಾಸು ಇಲಾಖೆಯ ಸಹಮತ ಸಿಗಲಿಲ್ಲ. ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಜಾರಿಗೆ ಬರುವ ಕಾರಣ, ಏಪ್ರಿಲ್ ತಿಂಗಳಲ್ಲಿ 2021ರ ಚಿತ್ರೋತ್ಸವ ನಡೆದರೆ, ಮುಂದಿನ ವರ್ಷ ಅಂದ್ರೆ 2022ರ ಫೆಬ್ರುವರಿಯಲ್ಲಿ ಚಿತ್ರೋತ್ಸವಕ್ಕೆ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ. ಒಂದು ಆರ್ಥಿಕ ವರ್ಷದಲ್ಲಿ ಎರಡೆರೆಡು ಚಿತ್ರೋತ್ಸವ ನಡೆಸಲು ಹಣ ಒದಗಿಸುವುದು ಕಷ್ಟ. 2021ರ ಚಿತ್ರೋತ್ಸವವನ್ನು ಏಪ್ರಿಲ್ ತಿಂಗಳಲ್ಲಿ ಮಾಡಿದರೆ ಅದಕ್ಕೆಂದು ಮೀಸಲಿಟ್ಟಿದ್ದ ಹಣ ಮಾರ್ಚ್​ ತಿಂಗಳ ಕೊನೆಗೆ ಖಜಾನೆಗೆ ವಾಪಾಸ್ ಹೋಗುತ್ತೆ ಎಂದು ಹಣಕಾಸು ಇಲಾಖೆ ಅಭಿಪ್ರಾಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚಲನಚಿತ್ರ ಅಕಾಡೆಮಿಯು ಚಿತ್ರೋತ್ಸವದ ದಿನಾಂಕಗಳನ್ನು ಪರಿಷ್ಕರಿಸಿ, ಮಾರ್ಚ್​ 24ರಿಂದ 31ರವರೆಗೆ ಚಿತ್ರೋತ್ಸವ ನಡೆಸಲು ನಿರ್ಧರಿಸಿತು. ಆದರೆ ದಿನಾಂಕ ಘೋಷಿಸುವ ಮೊದಲು ಆಗಿರುವ ಸಿದ್ಧತೆಯ ಬಗ್ಗೆ ಅಕಾಡೆಮಿ ಯೋಚಿಸಲಿಲ್ಲ.

ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕ ಮೊದಲ ವರ್ಷ ಇದು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ (ಇಂಟರ್​ನ್ಯಾಷನಲ್ ಅಕ್ರಿಡಿಷನ್) ಸಿಕ್ಕ ನಂತರ ನಡೆಯುತ್ತಿರುವ ಮೊದಲ ಚಿತ್ರೋತ್ಸವ ಇದು. ಭಾರತದಲ್ಲಿ ಗೋವಾ ಸೇರಿದಂತೆ ಕೆಲವೇ ಚಿತ್ರೋತ್ಸವಗಳು ಈ ಮಾನ್ಯತೆ ಪಡೆದಿವೆ. ಬೆಂಗಳೂರು ಉತ್ಸವಕ್ಕೆ ಈ ಮಾನ್ಯತೆ ಸಿಗುವುದರಿಂದ ವಿವಿಧ ದೇಶಗಳಿಂದ ಬರುವ ಅತಿಥಿಗಳ ಸಂಖ್ಯೆ ಹೆಚ್ಚಾಗುತ್ತೆ, ಮಾತ್ರವಲ್ಲ ಚಲನಚಿತ್ರಗಳನ್ನು ಪಡೆದುಕೊಳ್ಳುವ ಕ್ರಮವೂ ಸುಲಭವಾಗುತ್ತದೆ. ಈ ವರ್ಷದ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಕೊಡುವ ಸಂಸ್ಥೆಯ ಪ್ರತಿನಿಧಿಗಳೂ ಭಾಗವಹಿಸುವುದರಿಂದ ಚಲನಚಿತ್ರ ಅಕಾಡೆಮಿಯು ಹೆಚ್ಚು ಸೂಕ್ಷ್ಮವಾಗಿ ಆಲೋಚಿಸಿ, ವರ್ತಿಸಬೇಕಿತ್ತು. ಏಕೆಂದರೆ ಇಂಥ ಮಹತ್ವದ ಮಾನ್ಯತೆ ಸಿಗುವುದು ಬಲುಕಷ್ಟ, ಆದರೆ ಕಳೆದುಕೊಳ್ಳುವುದು ತುಂಬಾ ಸುಲಭ. ಈ ಹಿನ್ನೆಲೆಯಲ್ಲಿ ಈ ವರ್ಷದ ಚಿತ್ರೋತ್ಸವದ ಬಗ್ಗೆ ಅಕಾಡೆಮಿ ಹೆಚ್ಚು ಗಮನಕೊಡಬೇಕಿತ್ತು. ಹೊರಗುತ್ತಿಗೆ ನೀಡದೇ, ಸ್ವತಃ ಆಯೋಜಿಸಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಹೊರಗುತ್ತಿಗೆ ಸಂಚು ಚಿತ್ರೋತ್ಸವ ನಡೆಸುವ ಹೊಣೆಗಾರಿಕೆಯಿಂದ ನಾಜೂಕಾಗಿ ನುಣುಚಿಕೊಂಡಿರುವ ಚಲನಚಿತ್ರ ಅಕಾಡೆಮಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೃಪಾಕಟಾಕ್ಷದಲ್ಲಿರುವ ಈವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಚಿತ್ರೋತ್ಸವ ನಡೆಸುವ ಜವಾಬ್ದಾರಿ ವಹಿಸಿಕೊಡಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರೋತ್ಸವದ ಬಹುತೇಕ ಕೆಲಸಗಳನ್ನು ಟೆಂಡರ್ ಮೂಲಕವೇ ವಹಿಸಬೇಕು ಆದರೆ ಈ ಬಾರಿ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯೊಂದಕ್ಕೆ ಚಿತ್ರೋತ್ಸವದ ಜವಾವ್ದಾರಿ ವಹಿಸಿಕೊಟ್ಟು ಅಕಾಡೆಮಿ ಪದಾಧಿಕಾರಿಗಳು ಅತಿಥಿಗಳಂತೆ ಭಾಗವಹಿಸಲು ಮುಂದಾಗಿದ್ದಾರೆ. ಭಾರತದಲ್ಲಿ ಗೋವಾ ಚಿತ್ರೋತ್ಸವ ಸಹಿತ ಯಾವುದೇ ಚಿತ್ರೋತ್ಸವವನ್ನು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಗಳು ನಡೆಸಲ್ಲ.

ಚಿತ್ರೋತ್ಸವದ ಬ್ರೋಷರ್, ಪುಸ್ತಕಗಳು, ಪ್ರಚಾರ ಸಾಮಗ್ರಿಗಳು, ಸಾಮಾಜಿಕ ಮಾಧ್ಯಮ, ಮಾಧ್ಯಮ ಪ್ರಚಾರ ಸೇರಿದಂತೆ ಎಲ್ಲ ಕೆಲಸಗಳೂ ಟೆಂಡರ್ ಮೂಲಕವೇ ಆಗಬೇಕು. ಆದರೆ ಈ ಬಾರಿ ಈವರೆಗೆ ಸಿದ್ಧತೆಯೇ ಪೂರ್ಣಗೊಂಡಿಲ್ಲ. ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿಲ್ಲ. ಚಿತ್ರೋತ್ಸವದ ವೆಬ್​ಸೈಟ್​ನಲ್ಲಿ ದಿನಾಂಕ ಹೊರತುಪಡಿಸಿ ಎಲ್ಲವೂ ಖಾಲಿಯಿದೆ. ಬೇಕೆಂದೇ ತಡ ಮಾಡಿ, ನಂತರ ಪಾರದರ್ಶಕ ಕಾಯ್ದೆಯಿಂದ ವಿನಾಯ್ತಿ ಪಡೆಯಲು ಮುಖ್ಯಮಂತ್ರಿಯಿಂದ ಅನುಮತಿ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್

Published On - 2:38 pm, Thu, 11 March 21

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​