ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್
ಇಂಡಿಯನ್ ಇನ್ಫೋಟೈನ್ ಮಂಂಟ್ ಮೀಡಿಯಾ ಕಾರ್ಪರೇಷನ್ (ಐಐಎಂಸಿ) ಆಯೋಜಿಸಿರುವ ಅಂತರಾಷ್ಟ್ರೀಯ ಕೊರೊನಾವೈರಸ್ ಕಿರುಚಿತ್ರೋತ್ಸವದಲ್ಲಿ 108 ದೇಶಗಳ 2,800 ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ.
ನವದೆಹಲಿ: ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳು ಸೇರಿದಂತೆ ಎಲ್ಲ ಥರದ ಉತ್ತಮ ಸಿನಿಮಾಗಳಿಗೆ ಪೋತ್ಸಾಹ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸೋಮವಾರ ‘ಅಂತರಾಷ್ಟ್ರೀಯ ಕೊರೊನಾವೈರಸ್ ಕಿರುಚಿತ್ರೋತ್ಸವ’ದಲ್ಲಿ ಮಾತನಾಡಿದ ಜಾವಡೇಕರ್, ಜನರು ಈಗ ಸಿಟಿಜನ್ ಜರ್ನಲಿಸ್ಟ್ ಗಳಾಗಿ ಬಿಟ್ಟಿದ್ದಾರೆ. ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿ ಅದನ್ನು ಎಡಿಟ್ ಮಾಡಿ ಕಿರುಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಇದು ಸಂವಹನದಲ್ಲಿನ ಕ್ರಾಂತಿ ಎಂದಿದ್ದಾರೆ.
ಐಎಫ್ಎಫ್ಐನಲ್ಲಿ 21 ಚಲನಚಿತ್ರೇತರ, ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ 70 ನಿಮಿಷ ಅವಧಿಯ ಕಿರುಚಿತ್ರಗಳಿಗಾಗಿ ಹಲವಾರು ವಿಭಾಗಗಳಿರುತ್ತವೆ. ಮುಂಬೈ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಸಾಕ್ಷ್ಯಚಿತ್ರ ಮತ್ತು ಸಿನಿಮಾ ನಿರ್ಮಾಪಕರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಎಲ್ಲ ಥರದ ಸಿನಿಮಾಗಳು, ಉತ್ತಮ ಸಿನಿಮಾಗಳು, ಜನರಿಗೆ ಇಷ್ಟವಾಗುವ ಸಿನಿಮಾಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಅಂತರಾಷ್ಟ್ರೀಯ ಕೊರೊನಾವೈರಸ್ ಕಿರುಚಿತ್ರೋತ್ಸವದಲ್ಲಿ ಕೊರೊನಾವೈರಸ್ ಬಗ್ಗೆ ಮಾಡಿರುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇಂಡಿಯನ್ ಇನ್ಫೋಟೈನ್ಮೆಂಟ್ ಮೀಡಿಯಾ ಕಾರ್ಪೊರೇಷನ್ (ಐಐಎಂಸಿ) ಆಯೋಜಿಸಿರುವ ಅಂತರರಾಷ್ಟ್ರೀಯ ಕೊರೊನಾವೈರಸ್ ಕಿರುಚಿತ್ರೋತ್ಸವದಲ್ಲಿ 108 ದೇಶಗಳ 2,800 ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಕೋವಿಡ್ ಸಾಂಕ್ರಾಮಿಕ ಬಗ್ಗೆ, ಸುರಕ್ಷಾ ಕ್ರಮಗಳು ಹಾಗೂ ಕೋವಿಡ್ನಿಂದಾಗಿ ಜನಜೀವನದ ಮೇಲಿನ ಪರಿಣಾಮದ ಬಗ್ಗೆ ವಿವರಣೆ ಇರುವ ಸಿನಿಮಾಗಳು ಇಲ್ಲಿವೆ.
ಕೊರೊನಾವೈರಸ್ ಇಡೀ ಜಗತ್ತನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡು ವ್ಯಾಪಕ ಹಾನಿಯನ್ನುಂಟು ಮಾಡಿತ್ತು. ಅದೇ ಹೊತ್ತಿನಲ್ಲಿ ಜನರ ಪ್ರತಿಭೆಯನ್ನೂ ಅನಾವರಣಗೊಳಿಸಿತು. ದಿನನಿತ್ಯ ನಮಗೆ ಬರುವ ಪಠ್ಯ ಸಂದೇಶಗಳಲ್ಲಿಯೂ ಸೃಜನಶೀಲತೆಯನ್ನು ನಾವು ಕಾಣಬಹುದು. ಲಾಕ್ಡೌನ್ ಆದಾಗ ಯಾರೊಬ್ಬರೂ ಮನೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಆಗ ಜನರು ಟಿವಿ ನೋಡಿದರು, ರೇಡಿಯೊ ಕೇಳಿದರು ಮತ್ತು ಮನರಂಜನೆಗೆ ಬೇರೆ ಬೇರೆ ಮಾಧ್ಯಮಗಳನ್ನು ಆಯ್ದುಕೊಂಡರು. ಕೆಲವರು ಮನೆಯಲ್ಲಿಯೇ ಕಿರುಚಿತ್ರಗಳನ್ನು ತಯಾರಿಸಿದರು ಎಂದು ಜಾವಡೇಕರ್ ಹೇಳಿದ್ದಾರೆ.
OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು