ಕಲುಷಿತ ವಾತಾವರಣದಿಂದ ನಿಮಗೆ ಅಲರ್ಜಿ ಸಮಸ್ಯೆ ಕಾಡ್ತಿದಿಯೇ? ಇಲ್ಲಿದೆ ಮನೆಮದ್ದು

ಎಲ್ಲೆಡೆ ವಾತಾವರಣ ಕಲುಷಿತಗೊಳ್ಳುತ್ತಿದೆ. ಹಾಗಾಗಿ ಅಲರ್ಜಿ ಸಮಸ್ಯೆ ಕಾಮನ್ ಆಗಿದೆ. ಧೂಳಿನ ಕಣಗಳು ಹೆಚ್ಚಾಗಿ ಉಂಟಾಗುವ ಅಲರ್ಜಿ ಈಗೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಮನೆಯಲ್ಲಿ ಕೂಡಾ ಕೀಟಗಳಿಂದ, ಫಂಗಸ್​ನಿಂದ ಅಪಾಯಕಾರಿ ಧೂಳು ಹೊಸ ಹೊಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ. ಇದಕ್ಕೆ ಸದ್ಯಕ್ಕೆ ಯಾವ ಪರಿಹಾರವೂ ಇಲ್ಲವಾದರೂ ನಾವು ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳುವುದೇ ಪರಿಹಾರ ಮಾರ್ಗ ಎನ್ನುವುದನ್ನು ನಾವು ನಂಬಲೇಬೇಕು. ಸಮಸ್ಯೆ ಬರದಂತೆ ತಡೆಯುವುದು ಉತ್ತಮ ಮಾರ್ಗವಾದರೂ, ಬಂದ ನಂತರ ಏನು ಮಾಡಬೇಕು ಅನ್ನೋದನ್ನು ಒಮ್ಮೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಕೆಲವು […]

ಕಲುಷಿತ ವಾತಾವರಣದಿಂದ ನಿಮಗೆ ಅಲರ್ಜಿ ಸಮಸ್ಯೆ ಕಾಡ್ತಿದಿಯೇ? ಇಲ್ಲಿದೆ ಮನೆಮದ್ದು
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 12:21 PM

ಎಲ್ಲೆಡೆ ವಾತಾವರಣ ಕಲುಷಿತಗೊಳ್ಳುತ್ತಿದೆ. ಹಾಗಾಗಿ ಅಲರ್ಜಿ ಸಮಸ್ಯೆ ಕಾಮನ್ ಆಗಿದೆ. ಧೂಳಿನ ಕಣಗಳು ಹೆಚ್ಚಾಗಿ ಉಂಟಾಗುವ ಅಲರ್ಜಿ ಈಗೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಮನೆಯಲ್ಲಿ ಕೂಡಾ ಕೀಟಗಳಿಂದ, ಫಂಗಸ್​ನಿಂದ ಅಪಾಯಕಾರಿ ಧೂಳು ಹೊಸ ಹೊಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ. ಇದಕ್ಕೆ ಸದ್ಯಕ್ಕೆ ಯಾವ ಪರಿಹಾರವೂ ಇಲ್ಲವಾದರೂ ನಾವು ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳುವುದೇ ಪರಿಹಾರ ಮಾರ್ಗ ಎನ್ನುವುದನ್ನು ನಾವು ನಂಬಲೇಬೇಕು. ಸಮಸ್ಯೆ ಬರದಂತೆ ತಡೆಯುವುದು ಉತ್ತಮ ಮಾರ್ಗವಾದರೂ, ಬಂದ ನಂತರ ಏನು ಮಾಡಬೇಕು ಅನ್ನೋದನ್ನು ಒಮ್ಮೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.

ಜೇನುತುಪ್ಪ: ಯಾವುದೇ ರೀತಿಯ ಕಲಬೆರಕೆ ಇಲ್ಲದ ನೈಸರ್ಗಿಕ ಜೇನುತುಪ್ಪವನ್ನು ನಿತ್ಯ ಎರಡು ಚಮಚವನ್ನು ಎರಡು ಬಾರಿಯಂತೆ ಸೇವಿಸಿ. ಜೇನುತುಪ್ಪದಲ್ಲಿ ಪಾಲೆನ್ ಎಂಬ ಕಣಗಳು ಇರುವುದರಿಂದ ಇದು ಧೂಳಿನಿಂದ ಉಂಟಾಗುವ ಅಲರ್ಜಿಯನ್ನು ತಪ್ಪಿಸುತ್ತದೆ. ಅದರಲ್ಲೂ ಕಾಲಕ್ಕೆ ಅನುಗುಣವಾಗಿ ಬರುವ ಅರ್ಜಿಗಳಿಗೆ ಜೇನುತುಪ್ಪ ಅತ್ಯುತ್ತಮ ಮನೆಮದ್ದು. ಕಾರಣ ಜೇನುತುಪ್ಪದಲ್ಲಿರುವ ಪಾಲೆನ್ ನಮ್ಮ ದೇಹವು ಧೂಳಿಗೆ ಶೀಘ್ರ ಪ್ರತಿಕ್ರಿಯಿಸುವುದನ್ನು ಹಾಗೂ ನಮ್ಮ ದೇಹ ಸೂಕ್ಷ್ಮವಾಗುವುದನ್ನು ಸಹ ತಡೆಯುತ್ತದೆ.

ಆ್ಯಪಲ್ ಸಿಡರ್ ವಿನಿಗರ್: ಆ್ಯಪಲ್ ಸಿಡರ್ ವಿನಿಗರ್ ಅಪಾಯಕಾರಿ ಧೂಳಿನ ದೇಹವನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸ ಅತ್ಯುತ್ತಮ ಮನೆಮದ್ದಾಗಿದೆ. ಎರಡು ಚಮಚ ಆ್ಯಪಲ್ ಸಿಡರ್ ವಿನಿಗರ್ ಅನ್ನು ಒಂದು ಲೋಟ ನೀರಿಗೆ ಹಾಕಿ ಅಗತ್ಯವಿದ್ದರೆ ರುಚಿಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಕುಡಿಯಿರಿ. ನಿತ್ಯ ಎರಡರಿಂದ ಮೂರು ಬಾರಿ ಈ ಮಿಶ್ರಣವನ್ನು ಸೇವಿಸಿ. ಆ್ಯಪಲ್ ಸಿಡರ್ ವಿನಿಗರ್​ನಲ್ಲಿರುವ ಉರಿಯೂತ ನಿವಾರಕ ಅಂಶ ಹಾಗೂ ಇತರ ಅಂಶಗಳು ದೇಹಕ್ಕೆ ಎದುರಾಗುವ ಅಲರ್ಜಿಯನ್ನು ನಿವಾರಿಸುತ್ತದೆ ಹಾಗೂ ಶೀತ ಬರುವುದನ್ನು ತಡೆಯುತ್ತದೆ. ಅಲ್ಲದೇ ಅಲರ್ಜಿ ಹೆಚ್ಚುವುದನ್ನು ಸಹ ಇದು ತಡೆಯುತ್ತದೆ.

ಅರಿಶಿನ: ಅರಿಶಿನಕ್ಕೆ ರೋಗ ನಿರೋಧಕ ಗುಣ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಗುಣ ಇರುವುದರಿಂದ ಹಲವು ಕಾಯಿಲೆಗಳಿಗೆ ಅತ್ಯುತ್ತಮ ಮನೆಮದ್ದಾಗಿದೆ. ಒಂದು ಲೋಟ ಹಾಲಿಗೆ ಅರಿಶಿನ, ಮೆಣಸು ಹಾಕಿ ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಹಾಲು ತಣ್ಣಗಾದ ನಂತರ ಕುಡಿಯಿರಿ. ಇದನ್ನು ನಿತ್ಯ ಎರಡು ಬಾರಿ ಕುಡಿಯುವುದರಿಂದ ಅಲರ್ಜಿ ಬರದಂತೆ ತಡೆಯುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಹೆಪ್ಪುಗಟ್ಟಿರುವುದನ್ನು ನೈಸರ್ಗಿಕವಾಗಿ ಇಳಿಸುವ ಅತ್ಯುತ್ತಮ ಅಂಶವಾಗಿದೆ. ಅಲ್ಲದೇ, ಅರಿಶಿನವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ, ಅದು ನಿಮ್ಮ ಅಲರ್ಜಿಯನ್ನು ಸೋಂಕಿಗೆ ತಿರುಗದಂತೆ ತಡೆಯುತ್ತದೆ.

ಅಲೋವೆರಾ: ಅಲೋವೆರಾದಲ್ಲಿ ನೈಸರ್ಗಿಕ ರೋಗ ನಿರೋಧಕ ಹಾಗೂ ಉರಿಯೂತ ಶಮನ ಮಾಡುವ ಅಂಶವನ್ನು ಹೊಂದಿರುವುದರಿಂದ ಇದು ಅಲರ್ಜಿಗೆ ಅತ್ಯುಪಕಾರಿ ಮನೆಮದ್ದು. ನಿತ್ಯ ಎರಡು ಹೊತ್ತು ಕಾಲು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅಲರ್ಜಿ ಬರುವುದನ್ನು ತಡೆಗಟ್ಟುತ್ತದೆ ಅಲ್ಲದೆ, ಅಲರ್ಜಿ ಉಂಟಾದಾಗ ತ್ವಚೆ ಊದುವುದು ಅಥವಾ ನೋವನ್ನು ಸಹ ನಿವಾರಿಸುತ್ತದೆ.

ವಿಟಮಿನ್ ಸಿ: ವಿಟಮಿನ್ ಸಿ ಹೆಚ್ಚು ಪ್ರಖ್ಯಾತಿ ಪಡೆದಿರುವುದೇ ರೋಗನಿರೋಧಕ ಶಕ್ತಿಯಿಂದಾಗಿ. ಇನ್ನು ಕಾಲಮಾನದ ಅಲರ್ಜಿ ಅಥವಾ ಧೂಳಿನ ಸಮಸ್ಯೆ ಉಂಟಾದರಂತೂ ವಿಟಮಿನ್ ಸಿ ಪೋಷಕಾಂಶ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತದೆ. ನಿತ್ಯ ಅದಾಂಜು 500 ಮಿಲಿ ಗ್ರಾಂನಿಂದ 1000 ಮಿಲಿ ಗ್ರಾಮ್‌ನಷ್ಟು ಸೇವಿಸಿದರೆ ಯಾವುದೇ ಸಂಶಯ ಇಲ್ಲದೇ ನಿಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೇ ಅಲರ್ಜಿಗಳಿಂದ ದೇಹವನ್ನು ರಕ್ಷಿಸುತ್ತದೆ.

ಪುದೀನ ಎಲೆ: ಪುದೀನ ಎಲೆ ಸಹ ಉರಿಯೂತ ಶಮನಕಾರಿ ಹಾಗೂ ರಕ್ತ ಅಥವಾ ದೇಹ ಹೆಪ್ಪುಗಟ್ಟಿವಿಕೆಗೆ ಪುದೀನಾ ಅವಕಾಶ ನೀಡುವುದಿಲ್ಲ. ಪುದೀನಾ ಎಲೆಯಲ್ಲಿ ವೊಲಾಟೈಲ್ ಅಂದರೆ ಮೆಂತಾಲ್ ಎಂಬ ಎಣ್ಣೆ ಇದ್ದು ಇದು ನೈಸರ್ಗಿಕವಾಗಿ ಹೆಪ್ಪುಗಟ್ಟಿವಿಕೆ ಹಾಗೂ ಸೈನಸ್ ಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಶೀತ, ಕೆಮ್ಮಿಗೂ ಅತ್ಯುತ್ತಮ ಮನೆಮದ್ದು. ಒಂದು ಲೋಟ ಬಿಸಿ ನೀರಿಗೆ ಚಮಚ ಒಣಗಿರುವ ಪುದೀನಾ ಎಲೆ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಹಾಕಿದ ಟೀ ಅನ್ನು ನಿತ್ಯ ಕನಿಷ್ಠ ಮೂರು ಬಾರಿ ಸೇವಿಸಿದರೆ ಅಲರ್ಜಿ ನಿಮ್ಮ ದೇಹವನ್ನು ತಾಗಲು ಬಿಡುವುದಿಲ್ಲ.

ತುಪ್ಪ: ಅಲರ್ಜಿಯಿಂದಾಗಿ ನಿಮಗೆ ನಿರಂತರವಾಗಿ ಸೀನುವ ಸಮಸ್ಯೆ ಎದುರಾಗಿದ್ದರೆ ತುಪ್ಪ ಬಳಸಿ. ಕಾಲು ಚಮಚ ತುಪ್ಪವನ್ನು ಹಾಗೇ ಅಥವಾ ರುಚಿಗಾಗಿ ಬೆಲ್ಲವನ್ನು ಸೇರಿಸಿ ತಿನ್ನುವ ಮೂಲಕ ಸೀನುವ ಸಮಸ್ಯೆ ತಕ್ಷಣವೇ ನಿವಾರಣೆಯಾಗುತ್ತದೆ. ತುಪ್ಪವು ನಿಮ್ಮ ಮೂಗನ್ನು ಬೆಚ್ಚಗಿರುತ್ತದೆ ಹಾಗೂ ಸತತ ಸೀನನ್ನು ತಡೆಯುತ್ತದೆ. ತುಪ್ಪವನ್ನು ಧೂಳಿನ ಅಲರ್ಜಿಗೆ ಅತ್ಯಂತ ತುರ್ತು ಶಮನಕಾರಿ ಮನೆಮದ್ದಾಗಿ ಹೆಚ್ಚು ಬಳಸುತ್ತಾರೆ.

ಡ್ರಸೀನಾ: ಮನೆಯಲ್ಲಿ ಗಿಡಗಳನ್ನು ಬೆಳಸುವುದು ಬಹಳ ಸಹಕಾರಿಯಾದರೂ ಕೆಲವು ಸಸ್ಯಗಳು ಅಲರ್ಜಿಯನ್ನು ಹೆಚ್ಚು ಮಾಡುತ್ತದೆ ಕೆಲವು ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಡ್ರಸೀನಾ ಎಂಬ ಅಲಂಕಾರಿಕ ಸಸ್ಯ ಅಲರ್ಜಿಗಳನ್ನು ಸೆಳೆಯುವಂಥ ಕೆಲಸವನ್ನು ಮಾಡುತ್ತದೆ. ಅಲ್ಲದೇ, ಬ್ಯಾಂಬೂ, ಲೇಡಿ ಪಾಮ್ ಗಿಡಗಳು ಕೀಟಗಳನ್ನು ಕೊಲ್ಲುವಲ್ಲಿ ಹಾಗೂ ಗಾಳಿಯನ್ನು ಶುದ್ಧವಾಗಿಡಲು ಅತ್ಯುತ್ತಮ ಮನೆಯೊಳಗಿಡಬಹುದಾದ ಗಿಡವಾಗಿದೆ.

Published On - 9:00 pm, Mon, 27 January 20

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್