ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ. ಕೊನೆಯ ಟ್ರೈನ್ ಯಾವಾಗ: -ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್ -ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್ -ನಾಗಸಂದ್ರದಿಂದ ರಾತ್ರಿ 11.25ಕ್ಕೆ […]

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?
ಸಾಧು ಶ್ರೀನಾಥ್​

Updated on: Jan 03, 2020 | 4:40 PM

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ.

ಕೊನೆಯ ಟ್ರೈನ್ ಯಾವಾಗ:
-ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್
-ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್
-ನಾಗಸಂದ್ರದಿಂದ ರಾತ್ರಿ 11.25ಕ್ಕೆ ಕೊನೇ ಮೆಟ್ರೋ ಟ್ರೈನ್
-ಯಲಚೇನಹಳ್ಳಿಯಿಂದ 11.35ಕ್ಕೆ ಕೊನೇ ಟ್ರೈನ್ ಹೊರಡಲಿದೆ
ಎಲ್ಲಾ ಟ್ರೈನ್‌ಗಳು 12 ಗಂಟೆಗೆ ಮೆಜೆಸ್ಟಿಕ್‌ಗೆ ತಲುಪುತ್ತವೆ.
ಮೆಟ್ರೋ ಸೇವೆ ವಿಸ್ತರಣೆಯಾಗಿರುವ ಹಿನ್ನೆಲೆ BMTCಯಿಂದ ಫೀಡರ್ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸೇವೆ ವಿಸ್ತರಣೆ:
ಕೆಲ ಮುಖ್ಯ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸರ್ವೀಸ್ ನೀಡೋಕೆ ಬಿಎಂಟಿಸಿ ಮುಂದಾಗಿದೆ.
-ವಿಜಯ ನಗರ ಮೆಟ್ರೋ ನಿಲ್ದಾಣ ದಿಂದ ಬನಶಂಕರಿ ಮೆಟ್ರೋ ನಿಲ್ದಾಣ
-ವಿಜಯನಗರ ದಿಂದ ಉಲ್ಲಾಲ
-ಮೈಸೂರು ರಸ್ತೆಯಿಂದ ಕೆಂಗೇರಿ
-ಮೈಸೂರು ರಸ್ತೆಯಿಂದ ಬಿಇಎಂಎಲ್ 5 ನೇ ಹಂತ
-ಬನಶಂಕರಿಯಿಂದ ಕಗ್ಗಲೀಪುರ.
-ಜಯನಗರದಿಂದ ವಡ್ರಹಳ್ಳಿ
-ಜಯನಗರ ಮೆಟ್ರೋ ನಿಲ್ದಾಣದಿಂದ ಜಂಬೂಸವಾರಿ ದಿಣ್ಣೆ
-ಗೋರಗುಂಟೆ ಪಾಳ್ಯದಿಂದ ವಿದ್ಯಾರಣ್ಯಪುರ
-ಜಾಲಹಳ್ಳಿಯಿಂದ ವಿದ್ಯಾರಣ್ಯಪುರ
-ಎಸ್ ವಿ ರೋಡ್​ನಿಂದ ವೈಟ್ ಫೀಲ್ಡ್
-ಎಸ್ ವಿ ರೋಡ್ ಮೆಟ್ರೋದಿಂದ ಕೆಆರ್ ಪುರಂ ಟಿಟಿಎಂಸಿ
-ಎಸ್ ವಿ ರೋಡ್ ಮೆಟ್ರೋಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್
ಈ ಎಲ್ಲಾ ಮಾರ್ಗಗಳಿಗೆ ತಡರಾತ್ರಿ 12.20 ರವರೆಗೂ ಬಸ್ ಸೇವೆ ವಿಸ್ತರಿಸಲಾಗಿದೆ.

Published On - 2:09 pm, Wed, 1 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us