ಬೆಂಗಳೂರು: ಕೋಟ್ಯಾಂತರ ಜನರನ್ನು ಹೊತ್ತು ಸಾಗುವ BMTC ನಷ್ಟದಲ್ಲಿದೆ. ಸಾಲದಲ್ಲಿ ಮುಳುಗಿದೆ. ಆದರೆ ಸಚಿವ ಲಕ್ಷ್ಮಣ ಸವದಿ ಮಾತ್ರ ಈ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿಲ್ಲ. ಸಂಸ್ಥೆಯ ನೆರವಿಗೆ ನಿಲ್ಲುತ್ತಿಲ್ಲ. ಈ ಬಗ್ಗೆ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದು ಅಧಿಕಾರಿಗಳು ಸಾಲಕ್ಕಾಗಿ ಬ್ಯಾಂಕ್ಗಳ ಮೊರೆ ಹೋಗಿದ್ದಾರೆ.
ಸಲಕ್ಕಾಗಿ ಬ್ಯಾಂಕ್ಗಳ ಹುಡುಕಾಟ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ನಷ್ಟದಿಂದ ಅಕ್ಷರಶಃ ಮುಳುಗಿದ ಹಡಗಿನಂತಾಗಿದೆ. ಸಚಿವ ಲಕ್ಷ್ಮಣ ಸವದಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದರೆ ಬಿಎಂಟಿಸಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಸಚಿವರ ನಿರ್ಲಕ್ಷ್ಯ ಹಾಗೂ ಅಧಿಕಾರಗಳ ಅನಗತ್ಯ ನಿರ್ಧಾರದಿಂದ ಬಿಎಂಟಿಸಿ ಬರ್ಬಾದ್ ಆಗ್ತಿದೆ. ನೌಕರರಿಗೆ ಸಂಬಳ, ಬ್ಯಾಟರಿ, ಡೀಸೆಲ್ ಖರೀದಿ ಮಾಡಲು ಬಿಎಂಟಿಸಿ ಬಳಿ ಹಣವಿಲ್ಲವಂತೆ. ಸಾಲಕ್ಕಾಗಿ ಬಿಎಂಟಿಸಿ ಬಸ್, ಡಿಪೋ, ಟಿಟಿಎಂಸಿಗಳನ್ನ ಅಡಮಾನ ಇಡಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ 230 ಕೋಟಿ ಸಾಲ ಪಡೆಯಲು ಬ್ಯಾಂಕ್ಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಬ್ಯಾಂಕ್ಗಳ ಬಾಗಿಲು ತಟ್ಟಲು ಮುಂದಾಗಿದ್ದಾರೆ. ನಮ್ಮ ಷರತ್ತುಗಳ ಅನ್ವಯ ಆಸಕ್ತ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ಗಳು ಟೆಂಡರ್ನಲ್ಲಿ ಭಾಗವಹಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ BMTC ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ನಷ್ಟದ ಸುಳಿಯಲಿ ಬಿಎಂಟಿಸಿ
2012-13: 147 ಕೋಟಿ ನಷ್ಟ
2013-14: 147 ಕೋಟಿ ನಷ್ಟ
2014-15: 64 ಕೋಟಿ ನಷ್ಟ
2015-16: 13 ಕೋಟಿ ನಷ್ಟ
2016-17: 260 ಕೋಟಿ ನಷ್ಟ
2017-18: 216 ಕೋಟಿ ನಷ್ಟ
2018-19: 300 ಕೋಟಿ ನಷ್ಟ
2019-2020: 500 ಕೋಟಿ ನಷ್ಟ
ರಾತ್ರಿ ಕರ್ಫ್ಯೂ | ಬೆಂಗಳೂರಿನಲ್ಲಿ ಬಸ್ ಸಂಚಾರದ ಗೊಂದಲ; ಮಾರ್ಗಸೂಚಿಗೆ ಕಾಯುತ್ತಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ