ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ನಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು, ವಿವಿಧ ರಾಜ್ಯಗಳಿಂದ ನೂರಾರು ಕಲಾವಿದರು ಭಾಗಿಯಾಗಿದ್ದಾರೆ. ಚಿತ್ರಸಂತೆಗೆ ಜನಸಾಗರ ಹರಿದು ಬರ್ತಿದ್ದು, ಕಲರ್ ಫುಲ್ ಕಲಾಕೃತಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. ಕ್ಯಾನ್ವಾಸ್ ಮೇಲೆ ಸಹಿ ಹಾಕುವ ಮೂಲಕ ಚಿತ್ರಸಂತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಚಿತ್ರಸಂತೆಗೆ ಬಜೆಟ್‌ನಲ್ಲಿ 1 ಕೋಟಿ ಅನುದಾನ ನೀಡುವುದಾಗಿ ಉದ್ಘಾಟನೆ ಬಳಿಕ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕಲಾಭಿಮಾನಿಗಳಿಗೆ ಹೊಸವರ್ಷ ಮತ್ತು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಬಿಎಸ್ವೈ, ಚಿತ್ರಕಲೆಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಣೆ ಮಾಡಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ. ಗ್ರಾಮೀಣ ಸ್ವರಾಜ್ಯದ ವಿಚಾರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಮಧ್ಯವರ್ತಿಗಳ ಕಾಟವಿಲ್ಲದೆ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರವಾಗಿದೆ. ಬಜೆಟ್‌ನಲ್ಲಿ 1 ಕೋಟಿ ರೂ. ಕೊಡುವ ಮೂಲಕ ಸರ್ಕಾರ ನಿಮ್ಮ ಜೊತೆಗಿದೆ ಎಂದು ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ಅವರು ಚಿತ್ರಕಲಾ ಪರಿಷತ್ ನಲ್ಲಿ 17ನೇ ಚಿತ್ರಸಂತೆ-2020 ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪ ಮುಖ್ಯಮಂತ್ರಿ @drashwathcn, ಸಂಸದ @PCMohanMP, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಉಪಸ್ಥಿತರಿದ್ದರು. pic.twitter.com/cM8XDDvyNK
— CM of Karnataka (@CMofKarnataka) January 5, 2020
Published On - 11:47 am, Sun, 5 January 20