ಕೆಮಿಕಲ್ ಮಿಶ್ರಿತ ನೀರು ಸೇವಿಸಿ ಹೆಚ್ವೈ ಮೇಟಿ ಮಗಳು ಅಸ್ವಸ್ಥ
ಬಾಗಲಕೋಟೆ: ಶಾಲಾ ಕಾರ್ಯಕ್ರಮವೊಂದರಲ್ಲಿ ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಮಾಜಿ ಸಚಿವ ಹೆಚ್.ವೈ.ಮೇಟಿ ಮಗಳು ಅಸ್ವಸ್ಥವಾಗಿರುವ ಘಟನೆ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. ತುಳಸಿಗೇರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟನೆ ವೇಳೆ ಘಟನೆ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಬಲೂನ್ ಊದುವಾಗ ಕೆಮಿಕಲ್ ಮಿಶ್ರಿತ ನೀರು ಸೇವಿಸಿ ಬಾಗಲಕೋಟೆ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿದ್ದಾರೆ. ಗ್ಲಿಸರಿನ್ ಹಾಗು ಶಾಂಪು ಮಿಶ್ರಿತ ನೀರು ದೇಹದೊಳಗೆ ಸೇರ್ಪಡೆಯಾಗಿ ವಾಂತಿಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಮೇಟಿಗೆ ಚಿಕಿತ್ಸೆ […]
ಬಾಗಲಕೋಟೆ: ಶಾಲಾ ಕಾರ್ಯಕ್ರಮವೊಂದರಲ್ಲಿ ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಮಾಜಿ ಸಚಿವ ಹೆಚ್.ವೈ.ಮೇಟಿ ಮಗಳು ಅಸ್ವಸ್ಥವಾಗಿರುವ ಘಟನೆ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. ತುಳಸಿಗೇರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟನೆ ವೇಳೆ ಘಟನೆ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ಬಲೂನ್ ಊದುವಾಗ ಕೆಮಿಕಲ್ ಮಿಶ್ರಿತ ನೀರು ಸೇವಿಸಿ ಬಾಗಲಕೋಟೆ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿದ್ದಾರೆ. ಗ್ಲಿಸರಿನ್ ಹಾಗು ಶಾಂಪು ಮಿಶ್ರಿತ ನೀರು ದೇಹದೊಳಗೆ ಸೇರ್ಪಡೆಯಾಗಿ ವಾಂತಿಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಮೇಟಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Published On - 3:31 pm, Sat, 4 January 20