ಡಾ. ಸುದರ್ಶನ್ಗೆ ಬಿಗ್ ಶಾಕ್: ಬಿಳಿಗಿರಿ ಬೆಟ್ಟದ ಅಕ್ರಮ ರೆಸಾರ್ಟ್ ಬಂದ್
ಚಾಮರಾಜನಗರ: ಬಿಳಿಗಿರಿ ರಂಗನ ಬೆಟ್ಟದಲ್ಲಿ ಗೊರುಕಾನ ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪುರಸ್ಕೃತ ಡಾ. ಸುದರ್ಶನ್ ಅವರಿಂದ 8 ಎಕರೆ ಭೂ ಪರಿವರ್ತನೆ ಮಾಡಿಸಿ ಐಶಾರಾಮಿಯಾಗಿ ರೆಸಾರ್ಟ್ ನಿರ್ಮಿಸಿದ್ದರು. ಇದೀಗ ಜಿಲ್ಲಾ ಮ್ಯಾಜಿಸ್ಟ್ರೇಟ್ನ ಬಿ.ಬಿ. ಕಾವೇರಿ ಅವರು ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿದ್ದಾರೆ. ಡಾ. ಸುದರ್ಶ ನ್ಗೆ ಬಿಗ್ ಶಾಕ್ ಕೊಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಆರ್ಟಿ ಟೈಗರ್ ರಿಸರ್ವ್ನ ಪರಿಸರ ಸೂಕ್ಷ್ಮ […]
ಚಾಮರಾಜನಗರ: ಬಿಳಿಗಿರಿ ರಂಗನ ಬೆಟ್ಟದಲ್ಲಿ ಗೊರುಕಾನ ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪುರಸ್ಕೃತ ಡಾ. ಸುದರ್ಶನ್ ಅವರಿಂದ 8 ಎಕರೆ ಭೂ ಪರಿವರ್ತನೆ ಮಾಡಿಸಿ ಐಶಾರಾಮಿಯಾಗಿ ರೆಸಾರ್ಟ್ ನಿರ್ಮಿಸಿದ್ದರು. ಇದೀಗ ಜಿಲ್ಲಾ ಮ್ಯಾಜಿಸ್ಟ್ರೇಟ್ನ ಬಿ.ಬಿ. ಕಾವೇರಿ ಅವರು ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿದ್ದಾರೆ.
ಡಾ. ಸುದರ್ಶ ನ್ಗೆ ಬಿಗ್ ಶಾಕ್ ಕೊಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಆರ್ಟಿ ಟೈಗರ್ ರಿಸರ್ವ್ನ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ಶಿಕ್ಷಣ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಂಡು ಉದ್ದೇಶ ಮರೆಮಾಚಿದ ಆರೋಪವಿತ್ತು. ಈ ಕುರಿತು ತನಿಖಾ ತಂಡ ವರದಿ ನೀಡಿತ್ತು. ಭೂ ಪರಿವರ್ತನೆ ಆದೇಶ ದುರ್ಬಳಕೆ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗೆ ರೆಸಾರ್ಟ್ ಬಳಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಭೂ ಪರಿವರ್ತನಾ ಆದೇಶವನ್ನು ರದ್ದುಗೊಳಿಸಲಾಗಿದೆ.
Published On - 2:20 pm, Sat, 4 January 20