ಇಬ್ಬರು ಮಕ್ಕಳ ಸಮೇತ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ವಿವಾಹಿತ ಮಹಿಳೆ

ಇಬ್ಬರು ಮಕ್ಕಳ ಸಮೇತ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ವಿವಾಹಿತ ಮಹಿಳೆ

ವಿಜಯಪುರ: ತನಗೆ ಮೋಸ ಮಾಡಿದ್ದಾನೆಂದು ಪ್ರಿಯಕರನ ಮನೆ ಮುಂದೆ ವಿವಾಹಿತ ಮಹಿಳೆ ಪ್ರತಿಭಟನೆಗೆ ಕುಳಿತಿದ್ದಾರೆ. ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದ ಪ್ರಿಯಕರ ಪ್ರಭು ನಿವಾಸದ ಎದುರು ಮಕ್ಕಳೊಂದಿಗೆ ಮಹಿಳೆ ಧರಣಿ ನಡೆಸುತ್ತಿದ್ದಾಳೆ.

7 ತಿಂಗಳು ಮಹಿಳೆ ಜೊತೆ ಜೀವನ:
ಪತಿ ಹಾಗು ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನ‌ ಜೊತೆ ಮಹಿಳೆ ಮನೆ ಬಿಟ್ಟು ಹೋಗಿದ್ದಳು. 7 ತಿಂಗಳು ಪುಣೆಯಲ್ಲಿ ಮಹಿಳೆ ಜೊತೆ ಪ್ರಭು ಜೀವನ ಸಾಗಿಸಿದ್ದಾನೆ. ನಂತರ ಯಲ್ಲಮ್ಮಳನ್ನು ಬಿಟ್ಟು ಪ್ರಭು ಪರಾರಿಯಾಗಿದ್ದಾನೆ. ಪತಿಯೂ ಸಹ ಯಲ್ಲಮ್ಮಳನ್ನ ವಾಪಸ್ ಮನೆಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಪ್ರಿಯಕರ ಪ್ರಭು ಮನೆ ಎದುರು ಮೂವರು ಮಕ್ಕಳೊಂದಿಗೆ ಯಲ್ಲಮ್ಮ ಧರಣಿಗೆ ಕುಳಿತಿದ್ದಾಳೆ.

ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲವೆಂದು ಮಹಿಳೆ ಆರೋಪಿಸಿದ್ದಾಳೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮನೆ ಬಾಗಿಲು ಮುಚ್ಚಿಕೊಂಡು ಪ್ರಭು ಮನೆಯವರು ಬೇರೆಡೆ ತೆರಳಿದ್ದಾರೆ. ಪ್ರಭು ಚಲವಾದಿಗಾಗಿ ಯಲ್ಲಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

Click on your DTH Provider to Add TV9 Kannada