ಸಾವಿರಾರು EV ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಗ್ರೀನ್​ ಸಿಗ್ನಲ್, ವಿಧಾನಸೌಧ ಸ್ಟೇಷನ್ ಏನಾಯ್ತು!?

ಸಾವಿರಾರು EV ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಗ್ರೀನ್​ ಸಿಗ್ನಲ್, ವಿಧಾನಸೌಧ ಸ್ಟೇಷನ್ ಏನಾಯ್ತು!?
ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶಾದ್ಯಂತ 62 ನಗರಗಳಲ್ಲಿ 2,600 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್​ಗಳನ್ನು ‌ಆರಂಭಿಸಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಫೇಮ್-2 ಯೋಜನೆಯಡಿ ಚಾರ್ಜಿಂಗ್ ಸ್ಟೇಷನ್​ಗಳು ಆರಂಭಗೊಳ್ಳಲಿವೆ. ನಗರಗಳಲ್ಲಿ ಪ್ರತಿ 4 ಕಿಲೋಮೀಟರ್ ಗೆ ಒಂದರಂತೆ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ‘ನೀತಿ’ ಆಯೋಗದ ಸಿಇಓ ಅಮಿತಾಬ್ ಕಾಂತ್ ಟ್ವೀಟ್ ಮಾಡಿದ್ದಾರೆ.

ಗಮನಾರ್ಹವೆಂದ್ರೆ ಬೆಂಗಳೂರಿನಲ್ಲಿ ವಿಧಾನಸೌಧ ಸೇರಿದಂತೆ ಈಗಾಗಲೇ ಕೆಲವೆಡೆ ಇಂತಹ ಕೇಂದ್ರಗಳು ಇವೆಯಾದ್ರೂ ವಾಹನಗಳ ವಿದ್ಯುತ್​ ಚಾಲಿತ ವಾಹನಗಳ ಕೊರತೆಯಿಂದಾಗಿ ಅವು ಕಾರ್ಯಗತವಾಗದೆ ಧೂಳು ಹಿಡಿದಿವೆ. ಇನ್ನು ವಿಧಾನಸೌಧದ ಬಳಿ ಕಳೆದ ವರ್ಷ ಜನವರಿಯಲ್ಲಿ ಆರಂಭಗೊಂಡ ಇ.ವಿ. ಚಾರ್ಜಿಂಗ್ ಸ್ಟೇಷನ್​ ಸಹ ಅನುಪಯೋಗಿ ಆಗಿದೆ. ಏಕೆಂದ್ರೆ ಜನಪ್ರತಿನಿಧಿಗಳಾಗಲಿ ಅಥವಾ ವಿಧಾನಸೌಧದಲ್ಲಿ ಸಿಬ್ಬಂದಿಯಾಗಲಿ ವಿದ್ಯುತ್​ ಚಾಲಿತ ವಾಹನಗಳನ್ನು ಬಳಕೆ ಮಾಡಿ, ಮಾದರಿಯಾಗೋಣ ಎಂಬ ಸದುದ್ದೇಶ ಹೊಂದಿಲ್ಲ. ಹಾಗಾಗಿ ಇಲ್ಲಿನ ಕೇಂದ್ರಕ್ಕೆ ವಾಹನಗಳು ಬಾರದೆ ಕೇಂದ್ರವು ಕಾರ್ಯಸ್ಥಗಿತವಾಗಿದೆ.

Click on your DTH Provider to Add TV9 Kannada