ಆಂಧ್ರ ಪೊಲೀಸರ ಭರ್ಜರಿ ಬೇಟೆ: ಸುಪಾರಿ ಕಿಲ್ಲರ್ ಗ್ಯಾಂಗ್ ಅರೆಸ್ಟ್​!

ಆಂಧ್ರ ಪೊಲೀಸರ ಭರ್ಜರಿ ಬೇಟೆ: ಸುಪಾರಿ ಕಿಲ್ಲರ್ ಗ್ಯಾಂಗ್ ಅರೆಸ್ಟ್​!

ಹೈದರಾಬಾದ್​: ನಾವೇನು ಮಾಡಿಲ್ಲ, ನಮ್ಗೇನು ಗೊತ್ತಿಲ್ಲ ಅನ್ನೋ ತರ ಪೋಸ್ ಕೊಡ್ತಾ ಇರೋ ಇವರು ಸಾಮಾನ್ಯ ವ್ಯಕ್ತಿಗಳು ಅಲ್ವೇ ಅಲ್ಲಾ. ಖತರ್ನಾಕ್ ಕ್ರಿಮಿಗಳು. ಸ್ಕೆಚ್ ಹಾಕಿದ್ರೆ ಅಲ್ಲಿ ಒಂದು ಹೆಣ ಬೀಳಿಸೋದೆ ಬಿಡಲ್ಲ. ಹೀಗೆ ಸುಪಾರಿ ಪಡೆದು ಕೊಲೆಗೈಯ್ಯುತ್ತಿದ್ದ ಈ ಕ್ರಿಮಿನಲ್‌ಗಳ ತಂಡವನ್ನ ಆಂಧ್ರ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. 9 ಜನರ ಸುಪಾರಿ ಕಿಲ್ಲರ್​ಗಳ ಪೈಕಿ 6 ಕೊಲೆಗಾರರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರೋ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುಪಾರಿ ಪಡೆದು ಕೊಲೆ ಮಾಡುತ್ತಿದ್ದ ಗ್ಯಾಂಗ್‌:
ಸುಪಾರಿ ಪಡೆದು ಕೊಲೆ ಮಾಡುತ್ತಿದ್ದ ಈ ಗ್ಯಾಂಗ್‌ ವಿಶಾಖಪಟ್ಟಣಂನಲ್ಲಿ ದೊಡ್ಡ ಸ್ಕೆಚ್ ಹಾಕಿಕೊಂಡಿತ್ತು. ವೈಸಿಪಿ ನಾಯಕನನ್ನ ಕೊಲೆ ಮಾಡಲು ಬರೋಬ್ಬರಿ 50 ಲಕ್ಷ ರೂ. ಡೀಲ್ ಮಾಡ್ಕೊಂಡಿತ್ತು. ಈ ಪೈಕಿ 4 ಲಕ್ಷ ರೂಪಾಯಿಯನ್ನ ಮುಂಗಡವಾಗಿ ಪಡೆದಿತ್ತು. ಈ ಹಣದಲ್ಲಿ ಆರೋಪಿಗಳು ಆಯುಧ, ಕಾರು, ಮೊಬೈಲ್​ಗಳನ್ನು ಖರೀದಿಸಿದ್ರು. ಈ ಬಗ್ಗೆ ವಿಶಾಖಪಟ್ಟಣಂ ಪೊಲೀಸರಿಗೆ ಪಕ್ಕಾ ಮಾಹಿತಿ ಬಂದಿತ್ತು. ಪೊಲೀಸರು ಮಾಹಿತಿಯನ್ನು ಆಧಾರದಲ್ಲಿ ರಹಸ್ಯವಾಗಿ ಕಾರ್ಯಚರಣೆ ಪೊಲೀಸರ ಬಲೆಗೆ ಈ ಗ್ಯಾಂಗ್‌ ಬಿದ್ದಿದೆ.

ವಿಶಾಖಪಟ್ಟಣಂನ ಕುಖ್ಯಾತ ರೌಡಿ ಶೀಟರ್ ಕನ್ನಬಾಬು ಹಾಗೂ ಆತನ ತಂಡ ಖಾಕಿ ಕೈಯಲ್ಲಿ ಲಾಕ್‌ ಆಗಿದೆ. ಸದ್ಯ, ಇವರಿಂದ ಕೊಲೆಗೆಂದು ಖರೀದಿಸಲಾಗಿದ್ದ ಮಾರಕ ಆಯುಧಗಳು, ಸುಪಾರಿ ನೀಡಲಾಗಿದ್ದ ಹಣದ ಪೈಕಿ 70 ಸಾವಿರ ನಗದು ಪಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ ರಾಜಕೀಯ ನಾಯಕನ ರಕ್ತ ಹರಿಸಲು ಹದ್ದುಗಳಂತೆ ಕಾದು ಕುಳಿತಿದ್ದ ಕಿರಾತಕರು ಅಂದರ್‌ ಆಗಿದ್ದಾರೆ. ಪೊಲೀಸರು ಮುನ್ನೆಚ್ಚರಿಕೆಯಿಂದ ಭಾರಿ ಅವಘಡವೊಂದು ತಪ್ಪಿದೆ.

Click on your DTH Provider to Add TV9 Kannada