ಬೈಎಲೆಕ್ಷನ್​ನಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ, ಸೋತವರಿಗಿಲ್ಲ -ಶ್ರೀನಿವಾಸ ಪ್ರಸಾದ್

ಬೈಎಲೆಕ್ಷನ್​ನಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ, ಸೋತವರಿಗಿಲ್ಲ -ಶ್ರೀನಿವಾಸ ಪ್ರಸಾದ್
ಸಂಸದ ವಿ.ಶ್ರೀನಿವಾಸ ಪ್ರಸಾದ್

ಚಾಮರಾಜನಗರ: ಉಪಚುನಾವಣೆಯಲ್ಲಿ ಗೆದ್ದವರನ್ನ ಮಾತ್ರ ಮಂತ್ರಿ ಮಾಡಲಾಗುವುದು. ಸೋತವರು ಸಚಿವರಾಗುವುದಿಲ್ಲ ಎಂದು ಕೊಳ್ಳೇಗಾಲದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮಂತ್ರಿಸ್ಥಾನ ಕೊಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಧನುರ್ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಗೆದ್ದು ಶಾಸಕರಾದ ಬಳಿಕ ಮಂತ್ರಿಯಾಗಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಉಪಚುನಾವಣೆಯಲ್ಲಿ ವಿಶ್ವನಾಥ್ ಸೋತಿದ್ದಾರೆ. ಹೀಗಾಗಿ ಗೆದ್ದವರು ಮಂತ್ರಿಯಾಗ್ತಾರೆ, ಸೋತವರು ಆಗುವುದಿಲ್ಲ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

Click on your DTH Provider to Add TV9 Kannada